ಕುಂದಾಪುರ: ದೀಪಾವಳಿಯ ಕೊನೆ ದಿನ ಹಾಗೂ ಗೋ ಪೂಜಾ ದಿನವಾದ ಸೋಮವಾರ ವಾಹನ ಪೂಜೆ ಮಾಡುವುದು ಸಂಪ್ರದಾಯವಾಗಿದ್ದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಸಾವಿರಾರು ದ್ವಿಚಕ್ರ ವಾಹನಗಳು ಮತ್ತು ಘನ ವಾಹನಗಳಿಗೆ ಪೂಜೆ ನಡೆಯಿತು.

ಮದುವಣಗಿತ್ತಿಯಂತೇ ಸಿಂಗರಿಸಿಕೊಂಡ ವಾಹನಗಳಿಗೆ ದೇವಳದ ಎದುರು ಸಂಪ್ರದಾಯ ಬದ್ದವಾಗಿ ಪೂಜೆ ಸಲ್ಲಿಸಿದರು. ದೇವಳದ ಅರ್ಚಕರ ನೇತ್ರತ್ವದಲ್ಲಿ ಪೂಜಾ ವಿಧಿವಿದಾನಗಳು ನಡೆದವು. ಕುಂದಾಪುರದ ಸಂಚಾರಿ ಪೊಲೀಸರು ಸ್ಥಳದಲ್ಲಿ ಹಾಜರಿದ್ದು ಸಂಚಾರ ನಿಯಂತ್ರಿಸಿದರು.
Comments are closed.