ಕರಾವಳಿ

ಗಂಗೊಳ್ಳಿಯಲ್ಲಿ ವಿಶಿಷ್ಟ ದೀಪಾವಳಿ: ಹತ್ತಾರು ಕುಟುಂಬಗಳಿಗೆ ದಿನಸಿ ವಿತರಣೆ

Pinterest LinkedIn Tumblr

ಕುಂದಾಪುರ : ಪಟಾಕಿಮುಕ್ತ ದೀಪಾವಳಿ ಆಚರಿಸುವ ಉದ್ದೇಶದಿಂದ ಗಂಗೊಳ್ಳಿಯ ಉದ್ಯಮಿ ಭಾಸ್ಕರ ವಿಠಲ ಶೆಣೈ ಅವರ ಕುಟುಂಬದ ಸದಸ್ಯರು ಗಂಗೊಳ್ಳಿಯ ಸುಮಾರು ಹತ್ತಕ್ಕೂ ಮಿಕ್ಕಿ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

kundapura_deepavali_celebration-1 kundapura_deepavali_celebration-2

ಗಂಗೊಳ್ಳಿಯಲ್ಲಿರುವ ಅನೇಕ ಬಡ ಕುಟುಂಬಗಳು ಇತರರಂತೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಬೇಕು. ನಮ್ಮಂತೆ ಇತರರು ಸಂತೋಷದಿಂದ ಹಬ್ಬದ ಸವಿಯನ್ನು ಸವಿಯುವಂತಾಗಬೇಕು ಎಂಬ ಕಳಕಳಿಯೊಂದಿಗೆ ಭಾನುವಾರ ಗಂಗೊಳ್ಳಿಯ ವಿವಿಧೆಡೆ ತೆರಳಿದ ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಅವರು ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿ ಮತ್ತು ಸಿಹಿತಿಂಡಿಯನ್ನು ವಿತರಿಸಿ ದೀಪಾವಳಿ ಹಬ್ಬದ ಶುಭ ಕೋರಿದರು.

ಪಟಾಕಿ ಕೊಳ್ಳುವುದರಿಂದ ಹಣ ಪೋಲು, ಪಟಾಕಿ ಸುಡುವುದರಿಂದ ಆರೋಗ್ಯವೂ ಹಾಳು. ದೀಪಾವಳಿ ಬೆಳಕಿನ ಹಬ್ಬವೇ ಹೊರತು ಪಟಾಕಿಗಳ ಹೆಸರಿನಲ್ಲಿ ಹಣವನ್ನು ಪೋಲು ಮಾಡುವ ಹಬ್ಬವಲ್ಲ. ಪಟಾಕಿ ಕೊಳ್ಳುವ ಬದಲು ಆ ಹಣವನ್ನು ಅನೇಕ ಬಡ ಕುಟುಂಬಗಳ ಅಗತ್ಯತೆಗಳಿಗೆ ನೀಡುವ ಮೂಲಕ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸುವಲ್ಲಿ ಮುಂದಿನ ಪೀಳಿಗೆ ನೆರವಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಪತ್ರಕರ್ತ ಬಿ.ರಾಘವೇಂದ್ರ ಪೈ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಲಲಿತಾ ಖಾರ್ವಿ, ಕ್ರಾಂತಿವೀರರ ಅಭಿಮಾನಿ ಬಳಗದ ನವೀನ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Comments are closed.