ಕರಾವಳಿ

ನಟ ಸುರೇಶ್ ಗೋಪಿಯವರಿಂದ ಮಂಗಳೂರಿನಲ್ಲಿ `ಆಹುತಿ-ದ ಅನ್‌ಟೋಲ್ಡ್ ಸ್ಟೋರೀಸ್ ಆಫ್ ಸ್ಯಾಕ್ರಿಫೈಸ್ ಇನ್ ಕೇರಳ’ ಪುಸ್ತಕ ಬಿಡುಗಡೆ

Pinterest LinkedIn Tumblr

ahuti_sanga_niketana_1

ಮಂಗಳೂರು.ಅಕ್ಟೋಬರ್.30 : `ಆಹುತಿ-ದ ಅನ್‌ಟೋಲ್ಡ್ ಸ್ಟೋರೀಸ್ ಆಫ್ ಸ್ಯಾಕ್ರಿಫೈಸ್ ಇನ್ ಕೇರಳ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಿತು.

ಬಹುಭಾಷ ಕಲಾವಿದ – ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಅವರು ಆಹುತಿ-ದ ಅನ್‌ಟೋಲ್ಡ್ ಸ್ಟೋರೀಸ್ ಆಫ್ ಸ್ಯಾಕ್ರಿಫೈಸ್ ಇನ್ ಕೇರಳ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ahuti_sanga_niketana_2 ahuti_sanga_niketana_3 ahuti_sanga_niketana_4 ahuti_sanga_niketana_5 ahuti_sanga_niketana_6 ahuti_sanga_niketana_8 ahuti_sanga_niketana_9 ahuti_sanga_niketana_10 ahuti_sanga_niketana_11 ahuti_sanga_niketana_14 ahuti_sanga_niketana_15

ಸಮಾರಂಭಕ್ಕೆ ಆಗಮಿಸಿದ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಅವರನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭ ದ.ಕ. ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್, ಸಿಟಿಜನ್ ಕೌನ್ಸಿಲ್‌ನ ಅಧ್ಯಕ್ಷ ಸುನಿಲ್ ಆಚಾರ್, ಬಿಜೆಪಿ ಮಲೆಯಾಳಿ ಸೆಲ್‌ನ ಸಹಸಂಚಾಲಕ ರವೀಂದ್ರನ್, ಬಿಜೆಪಿ ಮಲೆಯಾಳಿ ಸೆಲ್‌ನ ರಾಜ್ಯ ಸಮಿತಿಯ ಸದಸ್ಯ ಟಿ.ಎ. ಅಶೋಕನ್, ಬಿಜೆಪಿ ಮಲೆಯಾಳಿ ಸೆಲ್‌ನ ದ.ಕ. ಸಂಚಾಲಕ ವಿ.ಪಿ. ಕೃಷ್ಣರಾಜ್, ಬಿಜೆಪಿ ಕೋಶಾಧಿಕಾರಿ ಸಂಜಯ ಪ್ರಭು, ಬಿಜೆಪಿ ಕಚೇರಿ ಕಾರ್ಯದರ್ಶಿ ಗುರುಚರಣ್, ಆರ್‌ಎಸ್‌ಎಸ್‌ನ ಸಂಪರ್ಕ ಪ್ರಮುಖ್ ಅಂಬುಜಾಕ್ಷ, ಬಿನಿಲ್ ಬೋಸ್ ಮತ್ತಿತರರು ಉಪಸ್ಥಿತರಿದ್ದರು.

ahuti_sanga_niketana_2

MANGALORE : Citizen’s Council Mangalore Chapter organised Aahuti The Untold Stories of Sacrifice in Kerala program in Sanghaniketana Mangalore. Chief guest of the program was Mr Suresh Gopi famous Film actor and Rajya Sabha Member came to Mangalore airport today. D. Vedavyas Kamath President BJP South Assembly, Sunil Achar President Citizens Council Mangalore, Mr Ravindran state Co convenor BJP Malyali Cell, T.A. Ashokan BJP State committee member Malyali Cell, V.P Krishnaraj D.K. Convenor BJP Malyali Cell,Sanjay Prabhu BJP District Treasurer, Gurucharan BJP Office secretary D.K.,Ambujaksha Sampark Pramukh RSS and Binil Boss Welcomed him at the Mangalore Airport

ಮುಖ್ಯಮಂತ್ರಿ ಪಿಣರಾಯಿ ಜೊತೆ ಮಾತುಕತೆ ಸಿದ್ಧ’

ahuti_sanga_niketana_4

ಮಂಗಳೂರು :ಕೇರಳದಲ್ಲಿ 5-6 ದಶಕಗಳಿಂದ ಕ್ರಾಂತಿ ಹೆಸರಿನಲ್ಲಿ ನಡೆಯುತ್ತಿರುವ ಕಮ್ಯುನಿಸ್ಟರ ಹಿಂಸಾ ರಾಜಕೀಯದ ನಿಯಂತ್ರಣಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಲು ಸಿದ್ದ ಎಂದು ಪ್ರಖ್ಯಾತ ಮಲಯಾಳ ನಟ, ಬಿಜೆಪಿ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ತಿಳಿಸಿದರು.

ಅವರು ನಗರದ ಸಿಟಿಜನ್ ಕೌನ್ಸಿಲ್ ವತಿಯಿಂದ ಸಂಘನಿಕೇತನದಲ್ಲಿ ಏರ್ಪಡಿಸಿದ ಕಮ್ಯುನಿಸ್ಟರ ರಕ್ತ ಕ್ರೌರ್ಯಗಳ ಸತ್ಯಕಥನದ ‘ಆಹುತಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಕಾಲೇಜು ದಿನಗಳಲ್ಲಿ ನಾನು ಕಮ್ಯುನಿಸ್ಟ್ ಆದರ್ಶಗಳನ್ನು ಮೆಚ್ಚಿಕೊಂಡಿದ್ದೆ. ನೆಲಕ್ಕಾಗಿ ಹೋರಾಡುವ ಆದರ್ಶದಿಂದ ಆಕರ್ಷಿತನಾಗಿದ್ದೆ. ಆದರೆ ತತ್ವಗಳಿಗೂ ಕಮ್ಯುನಿಸ್ಟರ ನಿಜ ಜೀವನಕ್ಕೂ ವ್ಯತ್ಯಾಸವಿತ್ತು. ಹೀಗಾಗಿ ಆ ಪಕ್ಷವನ್ನು ತ್ಯಜಿಸಿದೆ. ೧೯೯೯ರಲ್ಲಿ ಪಾನೂರು ಎಂಬಲ್ಲಿ ಜಯಕೃಷ್ಣನ್ ಮಾಸ್ತರ್ ಹತ್ಯೆಯಾಗಿ ಉದ್ವಿಗ್ನ ಸ್ಥಿತಿಯಾದಾಗ ಚಿತ್ರಂಗದ ಸದಸ್ಯರೊಡಗೂಡಿ ತಿಳಿಗೊಳಿಸಿದ್ದನ್ನು ಅವರು ಇದೇ ವೇಳೆ ಸ್ಮರಿಸಿದರು.

ಕಮ್ಯುನಿಸ್ಟರ್ ದೌರ್ಜನ್ಯಕ್ಕೊಳಗಾಗಿ ಎರಡೂ ಕಾಲನ್ನು ಕಳೆದುಕೊಂಡಿರುವ ಮತ್ತು ಸದ್ಯ ಕೇರಳ ಆರ್‌ಎಸ್‌ಎಸ್ ನೇತಾರರಾಗಿರುವ ಸದಾನಂದ ಮಾಸ್ತರ್ ಮಾತನಾಡಿ, ಕೇರಳದಲ್ಲಿ ಎಲ್ಲರ ವಿರುದ್ಧವೂ ಆಕ್ರಮಣ ಮತ್ತು ಮನುಷತ್ವವನ್ನೇ ವಿರೋಧಿಸುವ ಕಮ್ಯುನಿಸ್ಟರ ನಿಲುವುಗಳು ಮೇರೆ ಮೀರುತ್ತಿವೆ. ರಾಷ್ಟ್ರೀಯ ವಿಚಾರಗಳನ್ನು ಬಿತ್ತುವ ಆರ್‌ಎಸ್‌ಎಸ್, ಬಿಜೆಪಿಗರನ್ನೇ ಕೊಲೆ ನಡೆಸುವ ಸಿಪಿಎಂ ಅಲ್ಲಲ್ಲಿ ಕ್ಯಾಡರ್‌ಗಳನ್ನು ತೆರೆದು ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡುತ್ತಿದೆ. ಆದರೂ ನಾವು ಧೃತಿಗೆಟ್ಟಿಲ್ಲ. ನಮ್ಮ ಸಹಸ್ರಾರು ಮಂದಿ ಕಾರ್ಯಕರ್ತರಲ್ಲಿ ಹೋರಾಟ ಕಾವು ಮತ್ತಷ್ಟು ಜಾಗೃತವಾಗಿದೆ ಎಂದು ಅವರು ತಿಳಿಸಿದರು.

ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹಿಂದೆ ಲೆನಿನ್‌ನ ಯೋಜನೆಗೆ ಭಾರತ ಪ್ರತಿರೋಧ ತೋರಿತ್ತು. ಪ್ರಸ್ತುತ ಭಾರತದಲ್ಲಿ ನಡೆಸಲದ್ದೇಶಿಸಿದ ೨೦೪೭ರ ವೇಳೆಗೆ ‘ರೆಡ್‌ಕಾರ್ನರ್’ ಯೋಜನೆಗೆ ತಡೆಯೊಡ್ಡಬೇಕು. ಕಮ್ಯುನಿಸ್ಟರ ಒಡೆದಾಳುವ ನೀತಿಯನ್ನು ಅರ್ಥೈಸಿಕೊಂಡು ಅವರ ವಿವಿಧ ಮುಖಗಳನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

ಸಿಟಿಜನ್ ಕೌನ್ಸಿಲ್ ಅಧ್ಯಕ್ಷ ಸುನೀಲ್ ಆಚಾರ್ ಸ್ವಾಗತಿಸಿದರು. ಯೋಗಿಶ್ ಶರ್ಮಾ ವಂದೇ ಮಾತರಂ ಹಾಡಿದರು. ಕಮ್ಯುನಿಸ್ಟರ್ ದೌರ್ಜನ್ಯಕ್ಕೊಳಗಾದ ಕಣ್ಣೂರು ಜಿಲ್ಲೆಯ ಏಳು ಕುಟುಂಬಗಳ ಸದಸ್ಯರಾದ ಸುಮೇಶ್, ಪ್ರಜೀಶ್, ಪ್ರಕಾಶ್ ಬಾಬು, ಪ್ರೇಮಜಿತ್ ಪಿಣರಾಯಿ, ಶೈಜೇಶ್ ಪಿಣರಾಯಿ, ಶಾಲಿನಿ, ಪ್ರಕಾಶ್ ಕೂತುಪರಂಬ ಉಪಸ್ಥಿತರಿದ್ದರು.

ಕಮ್ಯುನಿಸ್ಟರ ಕಾರ್ಯಶೈಲಿಯೇ ಒಡೆದಾಳುವ ನೀತಿ. ಇವರು ಮುಗ್ದ ದಲಿತರಲ್ಲಿ ಹಿಂದೂ ವಿರೋಧಿ ನೀತಿ ಹುಟ್ಟುಹಾಕಿದ್ದಾರೆ. ಉಡುಪಿ ಮಠಕ್ಕೆ ಮುತ್ತಿಗೆ ಯೋಜನೆ ಕಮ್ಯುನಿಸ್ಟರ ಎರಡು ತಿಂಗಳ ಹಿಂದಿನ ತಂತ್ರವಾಗಿತ್ತು. ದಲಿತರನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆಗೆ ಅಜೆಂಡಾ ರೂಪಿಸಿಕೊಳ್ಳುವುದಾಗಿತ್ತು. ಆದರೆ ಅವರಿಗಿಂತ ಹೆಚ್ಚಾಗಿ ದಲಿತ ಬಂಧುಗಳು ಮಠದ ಪರವಾಗಿದ್ದರು.

Comments are closed.