ಕರಾವಳಿ

ಉಡುಪಿ ಬರಲಿರುವ ಸಿಎಂ ಸಿದ್ದರಾಮಯ್ಯ: ಸರಕಾರಿ ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧ; ನಾಗರೀಕ ಒಕ್ಕೂಟದಿಂದ ಉಪವಾಸ, ಸಿಪಿಐ‌ಎಂ ಕಪ್ಪು ಬಾವುಟದ ಪ್ರತಿಭಟನೆ

Pinterest LinkedIn Tumblr

ಉಡುಪಿ: ಉಡುಪಿಯ ಸರಕಾರಿ ಆಸ್ಪತ್ರೆಯನ್ನು ಖಾಸಗೀ ವ್ಯಕ್ತಿಗಳಿಗೆ ವಹಿಸಿದನ್ನು ವಿರೋಧಿಸಿ ಹಾಗೂ ಉಡುಪಿ ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ಸಿ.ಪಿ.ಐ ಎಂ ನಿಂದ ಪ್ರತಿಭಟನೆ ನಡೆಸಲಾಯಿತು.

udupi_governament-hospital_protest-5 udupi_governament-hospital_protest-6 udupi_governament-hospital_protest-7

ಉಡುಪಿಯ ನಾಗರೀಕ ಒಕ್ಕೂಟ ಉಪವಾಸ ಸತ್ಯಾಗ್ರಹ:

ಉಡುಪಿಯ ಮಕ್ಕಳ ಮತ್ತು ಹೆಂಗಸರ ಹೆರಿಗೆ ಆಸ್ಪತ್ರೆಯನ್ನು ಬಿ.ಆರ್ ಶೆಟ್ಟಿ ಒಡೆತನಕ್ಕೆ ನೀಡಿರುವುದನ್ನ ವಿರೋಧಿಸಿ ಹಾಗೂ ಕಳೆದ 5-6 ತಿಂಗಳಿಂದ ಉಡುಪಿ ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಯನ್ನು ಬಗೆಹರಿಸಬೆಕು ಎಂದು ಆಗ್ರಹಿಸಿ ಉಡುಪಿಯ ಕ್ಲಾಕ್ ಟವರ್ ಎದುರು ಸಿ.ಪಿ.ಐ‌ಎಂ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು. ಸ್ಟೀಲ್ ಬ್ರಿಜ್ ಮಾಡಲಿಕ್ಕೆ 1,500 ಕೋಟಿಗೂ ಮಿಕ್ಕಿ ಹಣವನ್ನು ವಿನಿಯೋಗಿಸಲು ಸಿದ್ದರಿದ್ದೀರಿ ಆದ್ರೆ 50,100 ಕೋಟಿ ಖರ್ಚು ಮಾಡಿ ಸರಕಾರಿ ಆಸ್ಪತ್ರೆಯ ಅಭಿವೃದ್ದಿ ಮಾಡಲು ನಿಮ್ಮ ಹತ್ರ ಹಣ ಇಲ್ಲವಾ ಎಂದು ಪ್ರತಿಭಟನಾ ಕಾರರು ಪ್ರಶ್ನೆ ಮಾಡಿದರು.

ಉಡುಪಿಯ ಸರಕಾರಿ ಆಸ್ಪತ್ರೆಯನ್ನು ಖಾಸಗೀ ವ್ಯಕ್ತಿಗಳಿಗೆ ವಹಿಸಿದನ್ನು ವಿರೋಧಿಸಿ ಸಿ‌ಎಂ ವಿರುದ್ದ ಉಡುಪಿಯ ನಾಗರೀಕ ಒಕ್ಕೂಟ ಉಪವಾಸ ಸತ್ಯಾಗ್ರಹ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ಉಡುಪಿಯ ಮಕ್ಕಳ ಮತ್ತು ಹೆಂಗಸರ ಹೆರಿಗೆ ಆಸ್ಪತ್ರೆಯನ್ನು ಬಿ.ಆರ್ ಶೆಟ್ಟಿ ಒಡೆತನಕ್ಕೆ ನೀಡಿರುವುದನ್ನ ವಿರೋಧಿಸಿ ಉಡುಪಿಯ ನಾಗರೀಕ ಒಕ್ಕೂಟ ಕ್ಲಾಕ್ ಟವರ್ ನ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದೆ.

udupi_governament-hospital_protest-1 udupi_governament-hospital_protest-2 udupi_governament-hospital_protest-3 udupi_governament-hospital_protest-4

ಖ್ಯಾತ ವೈದ್ಯ ಪಿ.ವಿ ಭಂಡಾರಿ, ಮಾಜಿ ಶಾಸಕ ಯು.ಆರ್ ಸಭಾಪತಿ ನೇತೃತ್ವದಲ್ಲಿ ನಾಗರೀಕ ಒಕ್ಕೂಟ ಸದಸ್ಯರು ಬೆಳಗ್ಗೆ 9 ರಿಂದ ಸಂಜೆ 6 ರತನಕ ಕಪ್ಪು ಪಟ್ಟಿ ಧರಿಸಿ ಉಪವಾಸ ಸತ್ಯಾಗ್ರಹವನ್ನು ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಿ.ಆರ್ ಶೆಟ್ಟಿ ಮಧ್ಯೆ ಡೀಲ್ ನಡೆದಿದೆ. ಆ ಕಾರಣಕ್ಕಾಗಿ ತುರಾತುರಿಯಲ್ಲಿ ಆಸ್ಪತ್ರೆಯನ್ನು ಬಿ.ಆರ್ ಶೆಟ್ತಿ ಅವರಿಗೆ ಒಪ್ಪಿಸಲಾಗಿದೆ. ಬಿ.ಆರ್ ಶೆಟ್ಟಿ ಉಡುಪಿಗೇನು ದಾನ ನೀಡಿದವರಲ್ಲ. ಆದ್ರೆ ದಾನ ನೀಡುವುದರಲ್ಲಿ ಮುಂಚೂಣಿಯಲ್ಲಿದ್ದ ಹಾಜಿ ಅಬ್ಧುಲ್ಲಾ ಸಾಹೇಬರ ಜಾಗವನ್ನು ಈ ರೀತಿ ಏಕಾ‌ಏಕಿ ಖಾಸಗೀಯವರಿಗೆ ನೀಡುವುದು ಸರಿ ಅಲ್ಲ ಎಂದು ನಾಗರೀಕ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

Comments are closed.