ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ 13 ಲಕ್ಷ ರೂ. ವೆಚ್ಚದ ಬೃಹತ್ ರಾಷ್ಟ್ರಧ್ವಜ ಹಾರಾಟ

Pinterest LinkedIn Tumblr

airport_big_flag_1

ಮಂಗಳೂರು, ಅ.28: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಬೃಹತ್ ರಾಷ್ಟ್ರ ಧ್ವಜಾರೋಹಣ ಇಂದು ಬೆಳಗ್ಗೆ ನಡೆಯಿತು. ಇನ್ನು ಮುಂದೆ ದಿನದ 24 ಗಂಟೆಯೂ ಇಲ್ಲಿ ಈ ಬೃಹತ್ ರಾಷ್ಟ್ರಧ್ವಜ ಹಾರಾಡಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ನೂತನ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು. ದ.ಕ. ಜಿಲ್ಲೆಯಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನದ 24 ಗಂಟೆಯೂ ಹಾರಾಡುವುದು ಹೆಮ್ಮೆಯ ವಿಚಾರ ಎಂದು ರೈ ಹೇಳಿದರು.

airport_big_flag_2 airport_big_flag_3 airport_big_flag_4 airport_big_flag_5

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜಿ.ಟಿ.ರಾಧಾಕೃಷ್ಣ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಷ್ಟ್ರಧ್ವಜ ಹಾರಾಟಕ್ಕೆ 13 ಲಕ್ಷ ರೂ. ವೆಚ್ಚ :

airport_big_flag_13

airport_big_flag_6 airport_big_flag_7 airport_big_flag_8 airport_big_flag_9 airport_big_flag_10

ಈ ಬೃಹತ್ ರಾಷ್ಟ್ರಧ್ವಜ ಹಾರಾಟಕ್ಕೆ 13 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇದರ ಆರೋಹಣಕ್ಕೆ ಯಾಂತ್ರೀಕೃತ ಸೌಲಭ್ಯ ಕಲ್ಪಿಸಲಾಗಿದೆ. ಇದರ ಆರೋಹಣಕ್ಕೆ 3 ನಿಮಿಷಗಳ ಕಾಲಾವಕಾಶ ಅಗತ್ಯವಿದೆ.ಪ್ರಯಾಣಿಕರ ಸಂತೃಪ್ತಿ ಸರ್ವೇಯ ಪ್ರಕಾರ ದೇಶದ 53 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 3ನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನಕ್ಕೆ ಪಾತ್ರವಾಗಿದೆ. 2015-16ನೆ ಸಾಲಿನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 16.73 ಲಕ್ಷ ಪ್ರಯಾಣಿಕರು ಬಳಸಿದ್ದಾರೆ. ಪ್ರಸಕ್ತ ವರ್ಷ ಈ ಸಂಖ್ಯೆ 20 ಲಕ್ಷ ದಾಟುವ ಸಾಧ್ಯತೆಯಿದೆ ಎಂದು ಈ ಸಂದರ್ಭದಲ್ಲಿ ಜಿ.ಟಿ.ರಾಧಾಕೃಷ್ಣ ಅವರು ಸುದ್ಧಿಗಾರರಿಗೆ ಮಾಹಿತಿ ನೀಡಿದರು.

Comments are closed.