ಕರಾವಳಿ

ಹಿಂದೂ ಧಾರ್ಮಿಕ ಕ್ಷೇತ್ರಗಳ ಕೆಲಸಕಾರ್ಯಗಳ ಗುತ್ತಿಗೆಯನ್ನು ಅನ್ಯಮತೀಯರಿಗೆ ನೀಡದಂತೆ ಆಗ್ರಹ

Pinterest LinkedIn Tumblr

manvi_bantwala_vhp

ಮಂಗಳೂರು: ಹಿಂದೂಗಳ ಧಾರ್ಮಿಕ ಕ್ಷೇತ್ರಗಳ ಉತ್ಸಾಹಗಳ ಸಮಯದಲ್ಲಿ ಕೆಲವೊಂದು ಕೆಲಸಕಾರ್ಯಗಳನ್ನು ಅನ್ಯಮತೀಯರಿಗೆ ಗುತ್ತಿಗೆ ನೀಡುವುದರಿಂದ ಕ್ಷೇತ್ರದ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಆರೋಪಿಸಿದೆ.

ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ಕಲ್ಲುರ್ಟಿ ದೈವಸ್ಥಾನದಲ್ಲಿ ಕಳೆದ ವಾರ್ಷಿಕ ಉತ್ಸವ ಸಂದರ್ಭ ಅನ್ಯಮತೀಯರಿಗೆ ಗುತ್ತಿಗೆಯನ್ನು ನೀಡಿದ ಕಾರಣ ಪುಷ್ಪಾಲಂಕಾರ ಮಾಡುವಾಗ ನಾಗನ ಕಟ್ಟೆ ತುಳಿಯುವುದು, ಹಿಂದೂ ಹುಡುಗಿಯರನ್ನು ಚುಡಾಯಿಸುವುದು ಮುಂತಾದ ವರ್ತನೆಗಳಿಂದ ಕ್ಷೇತ್ರದ ಭಕ್ತರಿಗೆ ನೋವುಂಟು ಮಾಡಿದೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಮುಖಂಡರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಾರ್ಷಿಕ ಉತ್ಸವಾದಿಗಳು ನಡೆಯುವ ವೇಳೆ ದೈವಸ್ಥಾನದ ವಿದ್ಯುತ್ ಅಲಂಕಾರ, ಬಣ್ಣ ಬಳಿಯುವುದು, ಪುಪ್ಪಾಲಂಕಾರ ಮಾಡುವ ಗುತ್ತಿಗೆಯನ್ನು ಹಿಂದೂಗಳ ಹೊರತು ಅನ್ಯ ಮತೀಯರಿಗೆ ನೀಡಬಾರದು, ಮಾತ್ರವಲ್ಲದೇ ಈ ಬಾರಿ ವಾರ್ಷಿಕ ಉತ್ಸವದ ಸಂದರ್ಭ ಗುತ್ತಿಗೆದಾರರನ್ನು ಆಯ್ಕೆ ಮಾಡುವಾಗ ಹಿಂದೂಗಳ ಹೊರತಾಗಿ ಅನ್ಯಮತೀಯರಿಗೆ ಯಾವುದೇ ಕಾರಣಕ್ಕೂ ಗುತ್ತಿಗೆ ನೀಡುವುದಿಲ್ಲ ಎನ್ನುವ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಆಡಳಿತಾಧಿಕಾರಿಯವರಿಗೆ ಮನವಿ ನೀಡಿದ್ದಾರೆ.

ಅನ್ಯಮತೀಯರು ಕ್ಷೇತ್ರದ ಕೆಲಸ ಕಾರ್ಯದಲ್ಲಿ ತೊಡಗಬಾರದು. ಈ ಎಲ್ಲಾ ಮನವಿಯ ಬಳಿಕವೂ ಅವರಿಗೆ ಗುತ್ತಿಗೆ ನೀಡಿ ಅನಪೇಕ್ಷಿತ ಘಟನೆ ನಡೆದರೆ ಇಲಾಖೆಯು ಹೊಣೆಯಾಗುತ್ತದೆ. ಮಾತ್ರವಲ್ಲದೇ ಮನವಿಗೆ ಸ್ಪಂದಿಸಿದಿದ್ದರೆ ಉಗ್ರವಾದ ಪ್ರತಿಭಟನೆ ಎದುರಿಸಬೇಕಾದಿತು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಬಜರಂಗದಳ ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ಸಜೀಪ ವಲಯ ಸಂಚಾಲಕ್ ದಕ್ಷಣ್ ಸಜೀಪ, ಕಲ್ಲಡ್ಕ ವಲಯ ಸಂಚಾಲಕ ನವೀನ್ ಕಲ್ಲಡ್ಕ, ಲೋಹಿತ್ ಪನೋಲಿಬೈಲು, ಪುಷ್ಪರಾಜ್ ಕಲ್ಲಡ್ಕ, ವಿನೋದ್ ಮೆಲ್ಕಾರ್, ಹರೀಶ್ ಬೈಪಾಸ್, ಮೋಹನ್ ಕಲ್ಲಡ್ಕ, ಪ್ರಕಾಶ್ ಕಲ್ಲಡ್ಕ, ಪ್ರದೀಪ್ ಕಲ್ಲಡ್ಕ, ರವೀಂದ್ರ ಕುಲಾಲ್ ಕಂದೂರು ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.