ಉಡುಪಿ: ವ್ಯಕ್ತಿಯೋರ್ವರ ಶವ 5 ದಿನಗಳ ಬಳಿಕ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾತ್ರವಲ್ಲದೆ ಅವರ ಮಗಳು ಕೂಡಾ ಶವದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಆದ್ರೆ ಜೀವಂತವಾಗಿರುವ ಅಚ್ಚರಿಯ ಘಟನೆಯೊಂದು ಉಡುಪಿಯಲ್ಲಿ ಜರುಗಿದೆ.
ಉಡುಪಿಯ ಬೈಲೂರಿನ ಎನ್.ಜಿ.ಒ ಕಾಲಾನಿಯ ಮೂರನೇ ಕ್ರಾಸ್ ನಲ್ಲಿ ಸುಳ್ಯ , ಪುತ್ತೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸಿದ ಬಳಿಕ ಅನಂತ ಪೂಜಾರಿ ಅವರು ತಮ್ಮ ನಿವೃತ್ತಿ ಬಳಿಕ ಮಗಳು ವಿನುತಾ(32)ರೊಂದಿಗೆ ಉಡುಪಿಯಲ್ಲಿ ವಾಸವಾಗಿದ್ದರು. ಅನಂತ ಪೂಜಾರಿಯವರ ಪತ್ನಿ ಎರಡು ವರ್ಷಗಳ ಹಿಂದೆಯೇ ತೀರಿ ಹೋಗಿದ್ದರು. ಮಗಳು ವಿನುತಾ ವಿವಾಹಿತೆಯಾಗಿದ್ದು ಯಾವುದೋ ಕಾರಣಕ್ಕೆ ವಿಚ್ಚೇದನವಾಗಿದ್ದ ಕಾರಣ ಅವರು ಕೂಡ ತಂದೆ ಜೊತೆ ವಾಸವಾಗಿದ್ದರು. ಆದರೇ ಇವರಿಬ್ಬರು ತಂದೆ ಮಗಳು ಮನೆಯಿಂದ ನಾಲ್ಕೈದು ದಿನವಾದರೂ ಹೊರಬಂದಿರಲಿಲ್ಲ. ಮನೆಯೊಳಗೆ ನಡೆದಿದ್ದಾದರೂ ಏನು ಅಂತೀರಾ..?


ಉಡುಪಿಯ ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿಯವರಿಗೆ ಅನಂತ ಪೂಜಾರಿಯ ಸಂಬಂಧಿಕರಾದ ಸದಾಶಿವಪೂಜಾರಿಯವರು ಕರೆ ಮಾಡಿ ಅನಂತ ಪೂಜಾರಿಯವರು 5 ದಿನವಾದರೂ ಮನೆಯಿಂದ ಹೊರಬಂದಿಲ್ಲ ಏನಾಗಿದೆ ಎಂಬುದನ್ನು ನೋಡಬೇಕು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ಇದೆ ಎಂದು ತಿಳಿಸಿದಾಗ ಪೊಲೀಸರ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳ ಸಹಾಯದಿಂದ ಮನೆಗೆ ಹೋಗುತ್ತಾರೆ. ಈ ಸಂದರ್ಬ ಎದುರಿನ ಬಾಗಿಲಿನಿಂದ ಹೋಗದೇ ಹೊರಗಿನ ಬಾಗಿಲಿನಿಂದ ಪ್ರವೇಶ ಮಾಡುತ್ತಾರೆ. ಆಗ ಅನಂತ ಪೂಜಾರಿಯವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗುತ್ತದೆ. ಇನ್ನೊಂದು ಕಡೆ ಅಂದರೆ ಮುಂದಿನ ಬಾಗಿಲ ಬಳಿಯೇ ಮಗಳು ಕೂಡಾ ಶವದ ಸ್ಥಿತಿಯಲ್ಲಿ ಕಂಡು ಬರುತ್ತಾರೆ.
ಇಬ್ಬರು ಸಾವಿಗೀಡಾಗಿದ್ದಾರೆ ಎಂದುಕೊಂದವರಿಗೆ ಆಶ್ಚರ್ಯ ಕಾದಿತ್ತು. ಅನಂತ ಪೂಜಾರಿಯವರ ಮಗಳು ಕೂಡಾ ಸಾವಿಗೀಡಾಗಿದ್ದಾಳೆ ಎಂದುಕೊಂಡ ವಿಶು ಶೆಟ್ಟಿ ಮತ್ತಿತರರು ವಿನುತಾ ಅವರ ದೇಹವನ್ನು ಕಟ್ಟಲು ಮುಂದಾಗುವಾಗ ಆಕೆ ಉಸಿರಾಡುವುದು ಕಂಡುಬರುತ್ತದೆ. ತಕ್ಷಣ ಆಕೆಯನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಇದಿಗ ವಿನುತಾ ಅಪಾಯದಿಂದ ಪಾರಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅನಂತ ಪೂಜಾರಿ ಸಾವಿಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ತಂದೆ ಅಸ್ವಸ್ಥರಾಗಿ ಕುಸಿದು ಬಿದ್ದಿರಬಹುದು ಇದನ್ನು ಕಂಡ ಮಗಳು ಶಾಕ್‌ಗೆ ಒಳಗಾಗಿರಬಹುದು ಮುಂದಿನ ಬಾಗಿಲು ತೆರೆಯುವಷ್ಟಕ್ಕೆ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಸಂಬಂಧಿಕರ ಪ್ರಕಾರ ಎಲ್ಲಿಯೂ ಹೋಗುತ್ತಿರದ ಅನಂತ ಪೂಜಾರಿ ಮನೆಯಲಿಯೇ ಇರುತ್ತಿದ್ದರು. ಆತ್ಮಹತ್ಯೆ ಮಾಡಿದ್ದಾರೋ ಅಥವಾ ಸಹಜವಾಗಿ ಸಾವನಪ್ಪಿದ್ದರೋ ಗೊತ್ತಿಲ್ಲ ಎಂದಿದ್ದಾರೆ. ಮನೆಯಲ್ಲಿ ೫ ದಿನ ಲೈಟ್ ಉರಿಯುತಿದ್ದರೂ, ಸುತ್ತಮುತ್ತ ಕೊಳೆತ ವಾಸನೆ ಬಂದರೂ ಸಹಾ ಯಾರೊಬ್ಬರೂ ಸ್ಥಳೀಯರು ಬಂದು ವಿಚಾರಿಸಿರಲಿಲ್ಲ.
೫ ದಿನಗಳ ಕಾಲ ಕೊಳೆತ ಶವದೊಂದಿಗೆ ಬಿದ್ದುಕೊಂಡು ಬದುಕಿರುವ ವಿನುತಾ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ನಗರ ಠಾಣಾ ಎ ಎಸ್ ಐ ಪ್ರಕಾಶ್ ಹಾಗೂ ಸಿಬ್ಬಂದಿಗಳು, ಸಮಾಜ ಸೇವಕ ವಿಶು ಶೆಟ್ಟಿ ಅವರ ಸೇವೆಯನ್ನು ಜನರು ಪ್ರಶಂಶಿಸುತ್ತಿದ್ದಾರೆ.
Comments are closed.