ಕರಾವಳಿ

ಜಿಲ್ಲೆಯಾದ್ಯಂತ ಸುದ್ಧಿಯಲ್ಲಿದ್ದ ಹೆಬ್ಬಾವು ಪತ್ತೆ : ನಿಟ್ಟುಸಿರು ಬಿಟ್ಟ ಸ್ಥಳೀಯರು

Pinterest LinkedIn Tumblr

python

ಮಂಗಳೂರು, ಅ.20: ಬಂಟ್ವಾಳ ಸಮೀಪ ಎರಡು ವಾರಗಳ ಹಿಂದೆ ಬಾಲಕನನ್ನು ಕಚ್ಚಲು ಬಂದು ಬಾಲಕನ ದಿಟ್ಟ ಹೋರಾಟಕ್ಕೆ ಬೆದರಿ ಸ್ಥಳದಿಂದ ಕಾಲ್ಕಿಳುವ ಮೂಲಕ ಸುದ್ದಿ ಮಾಡಿದ್ದ ಹೆಬ್ಬಾವು ಕೊನೆಗೂ ಸೆರೆಸಿಕ್ಕಿದೆ.

ಬಂಟ್ವಾಳದ ಸಜಿಪ ಕೊಳಕೆ ಗ್ರಾಮದಲ್ಲಿ ಹೆಬ್ಬಾವು ಸೆರೆ ಸಿಕ್ಕಿದ್ದು, ಎರಡು ವಾರಗಳ ಜನರ ಆತಂಕಕ್ಕೆ ತೆರೆ ಬಿದ್ದಿದೆ. ಈ ಸಂದರ್ಭ ಹಾವು ಹಿಡಿಯುವ ಪ್ರಕ್ರಿಯೆಯಲ್ಲಿ ಇಬ್ಬರಿಗೆ ಗಾಯಗಳಾಗಿದೆ.

ಗಾಯಗೊಂಡಿರುವ ಜಗದೀಶ್ ಕೌಡೂರು ಮತ್ತು ಅಬ್ದುಲ್ ಸತ್ತಾರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ಅರಣ್ಯ ಸಂಚಾರಿ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ವಶಕ್ಕೆ ಒಪ್ಪಿಸಿದ್ದಾರೆ.

ಅಕ್ಟೋಬರ್ 4ರಂದು 11 ವರ್ಷದ ಹುಡುಗ ವೈಶಾಖನನ್ನು ಈ ಹೆಬ್ಬಾವು ನುಂಗಲು ಮೈಮೇಲೆ ಹಾರುವ ಮೂಲಕ ಸುದ್ದಿ ಮಾಡಿತ್ತು. ಹೆಬ್ಬಾವಿನ ಜೊತೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿದ್ದ ವೈಶಾಖ ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ.

ಈತ ಆಸ್ಪತ್ರೆಯಿಂದ ಮನೆಗೆ ಮರಳಿದಾಗ ಮತ್ತೆ ವೈಶಾಕ್ ಮನೆಯ ಅಂಗಳದಲ್ಲಿ ಹೆಬ್ಬಾವು ಕಾಣಿಸಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಹೆಬ್ಬಾವು ಸೆರೆಸಿಕ್ಕುವ ಮೂಲಕ ಎರಡು ವಾರಗಳಿಂದ ಹೆಬ್ಬಾವು ಕಾಟದಿಂದ ಕಂಗಾಲಾಗಿದ್ದ ಸ್ಥಳೀಯರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

Comments are closed.