ಕರಾವಳಿ

ಬುದ್ದಿಜೀವಿಗಳಿಗೆ ತಾಕತ್ತಿದ್ದರೆ ಮಸೀದಿಗೆ ಮುತ್ತಿಗೆ ಹಾಕಲಿ, ಬಳಿಕ ಕೃಷ್ಣ ಮಠ ಪ್ರವೇಶಿಸಲಿ: ಪ್ರಮೋದ್ ಮುತಾಲಿಕ್

Pinterest LinkedIn Tumblr

ಉಡುಪಿ: ಬುದ್ದಿಜೀವಿಗಳಿಗೆ ಜ್ಯಾತ್ಯಾತೀತತೆಯಲ್ಲಿ ನಂಬಿಕೆ ಇದ್ದರೆ ಮೊದಲು ಮಸೀದಿಗೆ ಮುತ್ತಿಗೆ ಹಾಕಲಿ, ಬಳಿಕ ಮಠಗಳಿಗೆ ಮುತ್ತಿಗೆ ಹಾಕಿ ಅಸ್ಪೃಶ್ಯತೆಯ ಬಗ್ಗೆ ಮಾತನಾಡಲಿ ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು.

mutalikvisit_udupi_shri-krishna-mutt-2 mutalikvisit_udupi_shri-krishna-mutt-1 mutalikvisit_udupi_shri-krishna-mutt-3

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಚಲೋ ಉಡುಪಿ ಕಾರ್ಯಕ್ರಮದ ಮೂಲಕ ಮಠಕ್ಕೆ ಮುತ್ತಿಗೆ ಹಾಕುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಅವರು ತಾಕತ್ತಿದ್ದರೆ ಮೊದಲು ಮಸೀದಿಗೆ ಮುತ್ತಿಗೆ ಹಾಕಿ ನೋಡಲಿ. ಅಲ್ಲಿನ ಅಸ್ಪೃಶ್ಯದ ಬಗ್ಗೆ ಮಾತನಾಡಲಿ. ಬಳಿಕ ಮಠಕ್ಕೆ ಮುತ್ತಿಗೆ ಹಾಕಲಿ. ಇವರು ದಲಿತರ ಉದ್ದಾರಗೋಸ್ಕರ ಹೀಗೆ ಮಾಡುತ್ತಿಲ್ಲ. ಬರೇ ಪ್ರಚಾರ, ಬೂಟಾಟಿಗೆ, ದೊಂಬರಾಟಕ್ಕೆ ಹೀಗೆ ಮಾಡುತ್ತಿದ್ದಾರೆ . ಶ್ರೀರಾಮ ಸೇನೆ ಸದಾ ಪೇಜಾವರ ಶ್ರೀಗಳ ಬೆಂಬಲಕ್ಕಿದೆ ಎಂದರು.

ಇನ್ನು ಪ್ರಮೋದ್ ಮದ್ವರಾಜ್ ಅವರ ಹೇಳಿಕೆಗೆ ಪ್ರತಿಕ್ರೀಯಿಸಿದ ಪ್ರಮೋದ್ ಮುತಾಲಿಕ್ ಪ್ರಮೋದ್ ಹೇಳಿಕೆಯಲ್ಲಿ ವಿಶೇಷತೆ ಇಲ್ಲ. ನಾವು ಮಾಂಸಾಹಾರಿಗಳನ್ನು ವಿರೋಧ ಮಾಡುತ್ತಿಲ್ಲ. ಗೋಮಾಂಸಹಾರಿಗಳನ್ನು ವಿರೋಧ ಮಾಡುತ್ತೇವೆ. ಶ್ರೀ ರಾಮ, ಕೃಷ್ಣರು ಕ್ಷತೀಯರು ಆದ್ದರಿಂದ ಮಾಂಸಹಾರಿಗಳಾಗಿದ್ದಿರಬಹುದು ಎಂದರು.

Comments are closed.