ಕರಾವಳಿ

ನಂದಿಗುಡ್ಡೆಯಲ್ಲಿ “ಗುಡ್ಡೆಡ್ ಒಂಜಿ ವಾಲಿಬಾಲ್ದ ಗೊಬ್ಬು- 2016” ವಾಲಿಬಾಲ್ ಪಂದ್ಯಾಟ

Pinterest LinkedIn Tumblr

nandigudde_valyball_3

ಮಂಗಳೂರು, ಅ.16: ಯುನೈಟೆಡ್ ನಂದಿಗುಡ್ಡ ಸಂಘಟನೆಯ ವತಿಯಿಂದ ಗುಡ್ಡೆಡ್ ಒಂಜಿ ವಾಲಿಬಾಲ್ದ ಗೊಬ್ಬು- 2016′ ವಾಲಿಬಾಲ್ ಪಂದ್ಯಾಟ ಶನಿವಾರ ರಾತ್ರಿ ನಂದಿಗುಡ್ಡದ ನಾಯಕ್ಸ್ ಮೈದಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಎಂ.ಹರಿನಾಥ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರಿಕೆಟ್‌ಗೆ ನೀಡುವಂತಹ ಪ್ರಾಶಸ್ತ್ಯ ವಾಲಿಬಾಲ್ ಪಂದ್ಯಾಟಕ್ಕೂ ನೀಡಬೇಕು, ಈ ಆಟಕ್ಕೆ ಹೆಚ್ಚು ಪ್ರೋತ್ಸಾಹ ಅಗತ್ಯವಿದೆ ಎಂದು ಹೇಳಿದರು.

nandigudde_valyball_1

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಮಾತನಾಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಬೇಕಾದರೆ ಕ್ರೀಡಾ ನೀತಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಹೇಳಿದರು.

ಆಟಗಾರರಿಗೆ ದೊರೆಯಬೇಕಾದ ಪ್ರೋತ್ಸಾಹ ನಿರೀಕ್ಷಿತ ಮಟ್ಟದಲ್ಲಿ ದೊರೆತಿಲ್ಲ. ಈ ನಿಟ್ಟಿನಲ್ಲಿ ಕ್ರೀಡಾಳುಗಳನ್ನು ಪೋತ್ಸಾಹಿಸಲು ರಾಜ್ಯಕ್ಕೆ ಕ್ರೀಡಾ ನೀತಿಯ ಅಗತ್ಯವಿದೆ ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಸಹಿತ ಹಾಜರಾತಿ ನೀಡುವಂತೆ ಸಲಹೆ ನೀಡಿದ್ದೆ ಎಂದು ಹೇಳಿದರು.

nandigudde_valyball_2

ಸಮಾರಂಭದಲ್ಲಿ ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ಹಾಗೂ ತರಬೇತುದಾರ ನಾಗೇಶ್ ಎ. ಹಾಗೂ ವಾಲಿಬಾಲ್ ಆಟಗಾರ ಗಣೇಶ್ ಪುತ್ತೂರು ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಿ, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ, ಶೈಲಜಾ, ಪ್ರೊ.ಎಂ.ಎನ್.ಶೆಟ್ಟಿ, ಯುನೈಟೆಡ್ ನಂದಿಗುಡ್ಡೆಯ ಗೌರವಾಧ್ಯಕ್ಷ ರೋಶನ್ ಡಿಮೆಲ್ಲೊ, ಕೆ.ಪಿ. ಶೆಟ್ಟಿ, ಪುಂಡಲೀಕ ಸುವರ್ಣ, ಸಂದೀಪ್ ವಿನಯ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.