ಕರಾವಳಿ

ಕರ್ತವ್ಯದ ವೇಳೆ ಮೊಬೈಲ್‌ ಬಳಕೆ : ಪ್ರಶ್ನಿಸಿದ ಯುವಕನ ಮೇಲೆ ಟ್ರಾಫಿಕ್ ಪೊಲೀಸ್‌ನಿಂದ ಹಲ್ಲೆ

Pinterest LinkedIn Tumblr

trafic_police_case

ಮಂಗಳೂರು : ಟ್ರಾಫಿಕ್ ದಟ್ಟಣೆ ಸಂದರ್ಭ ಕರ್ತವ್ಯ ನಿರ್ವಹಿಸದೇ ಮೊಬೈಲ್ ನಲ್ಲಿ ಸಂಭಾಷಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಈ ಬಗ್ಗೆ ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ಬುಧವಾರ ನಡೆದಿದ್ದು, ಇದೀಗ ಈ ಪ್ರಕರಣ ಮೊಬೈಲ್‌ನಲ್ಲಿ ವೈರಲ್ ಆಗುವ ಮೂಲಕ ತಡವಾಗಿ ಬೆಳಕಿಗೆ ಬಂದಿದೆ.

ನಗರದ ರಥಭೀದಿ ( ಕಾರ್‍‍ಸ್ಟ್ರೀಟ್ ) ಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆಯು ಬುಧವಾರ ಸಂಜೆ ನಡೆಯುತ್ತಿದ್ದ ಸಂದರ್ಭ ನಗರದ ಎಲ್ಲ ಕಡೆ ಟ್ರಾಫಿಕ್ ಸಮಸ್ಯೆ ತಲೆದೋರಿದ್ದು, ಸಂಚಾರಿ ಪೊಲೀಸರು ಹಾಗೂ ಸಿವಿಲ್ ಪೊಲೀಸರು ಎಡೆಬಿಡದೆ ಕರ್ತವ್ಯದಲ್ಲಿ ತೊಡಗಿದ್ದರು.

ಆದರೆ ರಥಭೀದಿ ಸಮೀಪ ಇಡೀ ರಸ್ತೆ ಬ್ಲಾಕ್ ಆಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರಾಡುತ್ತಿದ್ದರು….. ಅ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರೊಬ್ಬರು ಮಾತ್ರ ಇದ್ಯಾವದರ ಪರಿವೆಯೇ ಇಲ್ಲದೇ ಮೊಬೈಲ್ ಸಂಭಾಷಣೆಯಲ್ಲಿ ನಿರತರಾಗಿದ್ದರು.

ಈ ಸಂದರ್ಭ ಅದೇ ದಾರಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪೊಂದು ಮೊಬೈಲ್ ಸಂಭಾಷಣೆಯಲ್ಲಿ ನಿರತರಾಗಿದ್ದ ಈ ಪೊಲೀಸ್ ಸಿಬ್ಬಂದಿಗೆ ಕರ್ತ್ಯವ್ಯ ನಿರ್ವಹಿಸುವಂತೆ ಹಾಸ್ಯಸ್ಪದ ರೀತಿಯಲ್ಲಿ ಕೇಳಿಕೊಂಡಿದ್ದು, ಇದರಿಂದ ರೊಚ್ಚಿಗೆದ್ದ ಪೊಲೀಸ್ ಕಾನ್ಸ್‌ಟೇಬಲ್ ಅ ಯುವಕನ ಮೇಲೆ ಹಲ್ಲೆಗೆ ಮುಂದಾದಾಗ ಯುವಕನ ಜೊತೆ ಇದ್ದ ಕೆಲ ಯುವಕರು ಈ ಘಟನೆಯನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ. ಈ ಸಂದರ್ಭ ಈ ಪೊಲೀಸ್ ಸಿಬ್ಬಂದಿ ಮೊಬೈಲ್ ಕಿತ್ತುಕೊಳ್ಳಲು ಬಂದಾಗ ಯುವಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ತಡವಾಗಿ ಈ ಘಟನೆ ಮೊಬೈಲ್ ಮೂಲಕ ವೈರಲ್ ಆಗಿದ್ದು, ಈ ವಿಷಯ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ಗಮನಕ್ಕೆ ಬಂದಿದ್ದು, ಆದರೆ ಈ ಪೊಲೀಸ್ ಸಿಬ್ಬಂದಿಯ ಬಗ್ಗೆ ಈ ವರೆಗೆ ಅಧಿಕೃತವಾಗಿ ಯಾವೂದೇ ದೂರು ದಾಖಲಾಗಿಲ್ಲ.ಆದರೆ ಈ ಬಗ್ಗೆ ಅವರು ತನಿಖೆ ನಡೆಸುವಂತೆ ಅದೇಶ ಹೊರಡಿಸಿದ್ದಾರೆ.

ಈ ಘಟನೆಯ ಮಾಹಿತಿ ಬಹಿರಂಗವಾಗುತ್ತಿದ್ದಂತೆ ನಗರದ ಹಲವಾರು ಸಾಮಾಜಿಕ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿದ್ದಾರೆ.

Comments are closed.