ಕರಾವಳಿ

ಶಾಸಕ ಲೋಬೊರಿಂದ ಸಾಲ ಮನ್ನಪತ್ರ ವಿತರಣೆ / ಬಜಾಲ್ ಬಳಿ 7 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ

Pinterest LinkedIn Tumblr

lobo_loan_news_1

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ನಂತೂರು ಶಾಲೆಯಲ್ಲಿ ಆಶ್ರಯ ಯೋಜನೆಯಡಿ ಸಾಲಪಡೆದುಕೊಂಡಿದ್ದ 73 ಫಲಾನುಭವಿಗಳಿಗೆ ಸುಮಾರು 60 ಲಕ್ಷ ರೂಪಾಯಿಯ ಸಾಲ ಮನ್ನಪತ್ರ ವಿತರಿಸಿದರು.

lobo_loan_news_2

ಬಜಾಲ್ ಬಳಿ 7 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ :

lobo_loan_news_3

ಬಜಾಲ್ ಶಾಂತಿ ನಗರ ಕುಂಬಳಿಕೆಯಲ್ಲಿ 2015- 16ರ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆಯನ್ನು ಶಾಸಕ ಜೆ. ಆರ್.ಲೋಬೊ ನೆರವೇರಿಸಿದರು.

ಅ.16 ರಂದು ದಕ್ಷಿಣ ಬ್ಲಾಕ್ ಸಭೆ ಕಾಂಗ್ರೆಸ್ ಕಚೇರಿಯಲ್ಲಿ :

ಮಂಗಳೂರು: ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ ಅಕ್ಟೋಬರ್ 16 ರಂದು ಆದಿತ್ಯವಾರ ಬೆಳಿಗ್ಗೆ 10.30 ಕ್ಕೆ ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿರುವುದು.

ಈ ಸಭೆಗೆ ಶಾಸಕರಾದ ಜೆ.ಆರ್.ಲೋಬೊ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ,ಜಿಲ್ಲಾ ಎಸ್ ಸಿ ಎಸ್ ಟಿ ಘಟಕ ಅಧ್ಯಕ್ಷರಾದ ಪದ್ಮನಾಭ ನರಿಂಗಾಣ ಹಾಗೂ ಹಿರಿಯ ನಾಯಕರು ಭಾಗವಹಿಸುವರು.

ಈ ಸಭೆಗೆ ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಮಹಾನಗರ ಪಾಲಿಕೆಯ ಸದಸ್ಯರು, ಘಟಕಗಳ ಪದಾಧಿಕಾರಿಗಳು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬ್ಲಾಕ್ ನ ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ವಿನಂತಿಸಿದ್ದಾರೆ.

Comments are closed.