ರಾಷ್ಟ್ರೀಯ

ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್ ಪಾಕಿಸ್ತಾನ ಸೇನೆಯ ವಶದಲ್ಲಿರುವುದು ಸ್ಪಷ್ಟ

Pinterest LinkedIn Tumblr

chandu-babulal-chavan

ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿದ್ದ ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್ ಅವರು ಪಾಕಿಸ್ತಾನ ಸೇನೆಯ ವಶದಲ್ಲಿರುವುದು ಶುಕ್ರವಾರ ಖಚಿತವಾಗಿದೆ.

ಗಡಿಯಲ್ಲಿ ಗುಸ್ತು ತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಚಂದು ಬಾಬುಲಾಲ್ ಚೌಹಾಣ್ ಅವರು ಗಡಿ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರವೇಶ ಮಾಡಿದ್ದರು. ಇದರಂತೆ ಚಂದು ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದುಕೊಂಡಿತ್ತು.

ಮಹಾರಾಷ್ಟ್ರದ ಧುಲೆಯ 37ನೇ ರಾಷ್ಟ್ರೀಯ ರೈಫಲ್ಸ್ ನ ಯೋಧ ಚಂದು ಬಾಬುಲಾಲ್ ಚೌಹಾಣ್ ಕುರಿತಂತೆ ಪಾಕಿಸ್ತಾನ ಸೇನೆಯ ಡೈರೆಕ್ಟರ್ ಜನರಲ್ ಸ್ಪಷ್ಟನೆ ನೀಡಿದ್ದು, ಭಾರತೀಯ ಯೋಧ ಪಾಕಿಸ್ತಾನ ಸೇನೆಯ ವಶದಲ್ಲಿರುವುದು ಸತ್ಯವೆಂದು ಹೇಳಿದ್ದಾರೆಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ಚಂದು ಬಾಬುಲಾಲ್ ಅವರು ಪಾಕಿಸ್ತಾನ ಸೇನೆಯ ವಶದಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಆಘಾತಗೊಂಡಿದ್ದ ಚಂದು ಅವರ ಅಜ್ಜಿ ಲೀಲಾ ಬಾಯಿಯವರು ಕೆಲ ದಿನಗಳ ಹಿಂದಷ್ಟೇ ವಿಧಿವಶರಾಗಿದ್ದಾರು. ಇದೀಗ ಪಾಕಿಸ್ತಾನ ವಶದಲ್ಲಿರುವ ಭಾರತೀಯ ಯೋಧನನ್ನು ಮರಳಿ ತಾಯಿನಾಡಿಗೆ ತರಲು ಅಧಿಕಾರಿಗಳು ಸಾಕಷ್ಟು ಶ್ರಮ ಪಡುತ್ತಿದ್ದಾರೆ.

Comments are closed.