ಸುರತ್ಕಲ್ , ಅ. 14: ಸುರತ್ಕಲ್ ಸಮೀಪದ ಕಾಟಿಪಳ್ಳ ಬಳಿಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮನೆಮಂದಿಗೆ ಹರಿತವಾದ ಅಯುಧಗಳಿಂದ ಕಡಿದು ಪರಾರಿಯಾದ ಘಟನೆ ಮೊನ್ನೆ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸುಮಾರು 8 ಮಂದಿಯ ತಂಡ ಕಾಟಿಪಳ್ಳದ ಅಬೂಬಕರ್ ಎಂಬವರ ಮನೆಗೆ ಏಕಾಏಕಿ ನುಗ್ಗಿ ಮನೆಯಲ್ಲಿದ್ದ ಆಬೂಬಕರ್, ಅವರ ಪತ್ನಿ ಸುರೈಯಾ, ನಾದಿನಿ ಸಮುನಾ ಎಂಬವರಿಗೆ ಮಾರಕಾಸ್ತ್ರಗಳಿಂದ ಕಡಿದು ಗಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಪರಿಚಿತ ದುಷ್ಕರ್ಮಿಗಳ ದಾಳಿಯಿಂದ ಗಂಭೀರ ಗಾಯಗೊಂಡಿರುವ ಮೂವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.