ರಾಷ್ಟ್ರೀಯ

ಇಲ್ಲಿ ಕಳೆದ 50 ವರ್ಷದಿಂದ ಹುಟ್ಟುವ ಮಗು ಬದುಕುವುದೇ ಇಲ್ಲ….! ಬದುಕಿದರೂ ಏನಾಗುತ್ತೆ ಗೊತ್ತಾ..?

Pinterest LinkedIn Tumblr

baby

ಭೋಪಾಲ್: ಈ ಸುದ್ದಿಯ ಹೆಡ್‍ಲೈನ್ ನೋಡಿ ನಿಮ್ಮ ಮನಸ್ಸಿನಲ್ಲಿ ಹೀಗೂ ಉಂಟೇ ಎಂಬ ಪ್ರಶ್ನೆ ಬಂದೇ ಬರುತ್ತೆ. ಹೌದು, ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಿಂದ 70 ಕಿಮೀ ದೂರದ ಸಾಂಕಾ ಜಾಗೀರ್ ಗ್ರಾಮದಲ್ಲಿ ಕಳೆದ 50 ವರ್ಷದಿಂದ ಮಕ್ಕಳೇ ಹುಟ್ಟಿಲ್ಲ. ಆಶ್ಚರ್ಯವಾದರೂ ಇದು ಸತ್ಯ.

ಹಾಗಂತ ಇಲ್ಲಿ ತಾಯಂದಿರು ಗರ್ಭಿಣಿಯರಾಗಲ್ಲ ಎಂದಲ್ಲ. ಎಲ್ಲಾ ಕಡೆ ಇರುವಂತೆಯೇ ಇಲ್ಲೂ ಮದುವೆಗಳು ನಡೆಯುತ್ತವೆ. ಮಹಿಳೆಯರು ಗರ್ಭವತಿಯೂ ಆಗುತ್ತಾರೆ. ಆದರೆ, ಒಂದು ವೇಳೆ ಈ ಊರಲ್ಲಿ ಮಗು ಹುಟ್ಟಿದರೆ ಮಗು ಸಾಯುತ್ತದೆ, ಇಲ್ಲವೇ ಅಂಗವೈಕಲ್ಯತೆಯಿಂದ ಕೂಡಿರುತ್ತದೆಯಂತೆ.

ಈ ಊರಿನಲ್ಲಿ ಹೀಗಾಗುತ್ತೆ ಎಂದೇ ಸ್ಥಳೀಯರು ಗ್ರಾಮದ ಗಡಿ ಭಾಗದಲ್ಲಿ ಒಂದು ರೂಮ್ ಕಟ್ಟಿದ್ದಾರೆ. ಇಲ್ಲೇ ಗರ್ಭಿಣಿಯರನ್ನು ಕರೆ ತಂದು, ಹೆರಿಗೆ ಮಾಡಿಸುತ್ತಾರೆ. ಇಲ್ಲಿನ ಹಿರಿಯರ ಪ್ರಕಾರ, ಈ ಊರಲ್ಲಿ ಶ್ಯಾಮ್‍ಜೀ ಮಂದಿರವಿತ್ತಂತೆ. ಇದರ ಪಾವಿತ್ರ್ಯತೆ ಕಾಪಾಡಲು ಮಹಿಳೆಯರನ್ನು ಅನಾದಿ ಕಾಲದಿಂದಲೇ ಊರ ಹೊರಗೆ ಹೆರಿಗೆ ಮಾಡಿಸಬೇಕು ಎಂದು ಫರ್ಮಾನು ಹೊರಡಿಸಿದ್ದರಂತೆ. ಅದೇ ಆಚರಣೆ ಇಲ್ಲಿ ಈಗಲೂ ಮುಂದುವರೆದಿದೆ.

Comments are closed.