ಕರಾವಳಿ

ನಾಡಾ-ಗುಡ್ಡೆಯಂಗಡಿ ಪರಿಸರದಲ್ಲಿ ಅಕ್ರಮ ಮರಳು ಮಾಫಿಯಾ; ಅಧಿಕಾರಿಗಳ ದಾಳಿ

Pinterest LinkedIn Tumblr

ಕುಂದಾಪುರ: ಜಿಲ್ಲೆಗೆ ಒಂದು ಕಾನೂನಾದ್ರೇ ಈ ಊರಿಗೆ ಮತ್ತೊಂದು ಪರ್‍ಯಾಯ ಕಾನೂನು ಎಂಬಂತಾಗಿದೆ ಇಲ್ಲಿನ ಕಥೆ. ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದರೂ ಕೂಡ ಕುಂದಾಪುರ ತಾಲೂಕಿನ ನಾಡಾ-ಗುಡ್ಡೆಯಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರ ಮರಳುಗಾರಿಕೆ ಹಾಗೂ ದಾಸ್ತಾನಿಟ್ಟ ಮರಳಿನ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಈ ಬಗ್ಗೆ ಒಂದು ವರದಿಯಿಲ್ಲಿದೆ.

kundapura_nada_illegle-sand-mining-7 kundapura_nada_illegle-sand-mining-1 kundapura_nada_illegle-sand-mining-5 kundapura_nada_illegle-sand-mining-4 kundapura_nada_illegle-sand-mining-3 kundapura_nada_illegle-sand-mining-6 kundapura_nada_illegle-sand-mining-2

ಲೋಡುಗಟ್ಟಲೇ ಬಿದ್ದಿರೋ ಮರಳು. ಮರಳು ತುಂಬಲು ನಿಂತಿರುವ ಲಾರಿ..ಆಚೀಚೆ ಬಿದ್ದ ಬುಟ್ಟಿಗಳು ಹಾಗೂ ಮರಳು ತೆಗೆಯುವ ಸಾಮಾಗ್ರಿಗಳು… ಹೌದು ನಾಡಾ-ಗುಡ್ಡೆಯಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕೋಣೆ ಭಾಗದಲ್ಲಿನ ಅಕ್ರಮ ಮರಳು ದಾಸ್ತಾನು ಅಡ್ಡೆ ಮೇಲೆ ದಾಳಿ ನಡೆಸಿ ಇದೆಲ್ಲವನ್ನೂ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು ಈ ಮೂಲಕ ಬಹಳಷ್ಟು ದಿನಗಳಿಂದ ಎಗ್ಗಿಲ್ಲದೇ ಸಾಗುತ್ತಿದ್ದ ಅಕ್ರಮಕ್ಕೆ ಕಡಿವಾಣ ಬಿದ್ದಂತಾಗಿದ್ದಲ್ಲದೇ ಜಾಣಕುರುಡುತನ ಪ್ರದರ್ಶಿಸುತ್ತಿದ್ದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಒಂದು ಉತ್ತಮ ಕೆಲಸ ಮಾಡಿದ್ದಾರೆ. ಆದರೇ ಮರಳು ಶೇಖರಿಸಿದ್ದ ಮಾಲೀಕರ ವಿರುದ್ಧ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗದಿರೋ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಡಾ ಪರಿಸರದಲ್ಲಿ ಬಹಳಷ್ಟು ದಿನಗಳಿಂದ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಹತ್ತಕ್ಕೂ ಅಧಿಕ ಮರಳುಗಾರಿಕೆ ಅಕ್ರಮ ಅಡ್ಡೆಗಳು ಈ ಭಾಗದಲ್ಲಿದ್ದು ಎಲ್ಲೆಡೆ ಮರಳುಗಾರಿಕೆ ನಿಂತಿದ್ದರೂ ಕೂಡ ನಾಡಾ ವ್ಯಾಪ್ತಿಯಲ್ಲಿ ಮಾತ್ರ ರಾತ್ರೋರಾತ್ರಿ ಮರಳನ್ನು ತೆಗೆದು ಸಾಗಿಸುವ ಮೂಲಕ ಅಕ್ರಮ ಸಾಮ್ರಾಜ್ಯವನ್ನೇ ಸ್ರಷ್ಟಿಮಾಡಿಕೊಂಡಿದ್ದಾರೆ. ಈ ಬಗ್ಗೆ ಕೆಲವು ಸಮಯಗಳ ಹಿಂದೆ ಕುಂದಾಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರವೀಣ ಕುಮಾರ್ ಕಡ್ಕೆ ನೇತ್ರತ್ವದಲ್ಲಿ ಸಾರ್ವಜನಿಕರು ಮರಳುಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿ ಅಧಿಕಾರಿಗಳಿಗೆ ಅಕ್ರಮದ ಬಗ್ಗೆ ತಿಳುವಳಿಕೆ ನೀಡಿದ್ದರಾದರೂ ದೂರು ನೀಡಿದವರ ವಿರುದ್ಧವೇ ಅಧಿಕಾರಿಗಳು ಪೊಲೀಸ್ ಕಂಪ್ಲೇಂಟ್ ನೀಡಿದ್ದರು.

ಎಗ್ಗಿಲ್ಲದೇ ಸಾಗುತ್ತಿರುವ ಮರಳುಗಾರಿಕೆಯಿಂದಾಗಿ ನಾಡಾ, ಬಡಾಕೆರೆ, ಪಡುಕೋಣೆ ಭಾಗದಲ್ಲಿ ರಸ್ತೆಗಳು ಸಂಚರಿಸಲು ಸಾಧ್ಯವಾಗದಷ್ಟು ಹದಗೆಟ್ಟಿದೆ. ಇನ್ನು ಕಾಂಕ್ರಿಟ್ ರಸ್ತೆಗಳು ಬಿರುಕು ಬಿಟ್ಟು ಹೊಂಡಗಳಾದರೇ, ಡಾಂಬರು ರಸ್ತೆಗಳು ಸಂಪೂರ್ಣ ಕಿತ್ತುಹೋಗಿ ಕೆಸರುಗುಂಡಿಯಾಗಿದೆ. ತಮ್ಮೂರಿನ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಇಲಾಖೆಯೂ ಶಾಮೀಲಾದ ಬಗ್ಗೆ ಜನರು ಅಭಿಪ್ರಾಯಪಟ್ಟಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದರೇ ತಹಶಿಲ್ದಾರ್ ಕಛೇರಿಯೆದುರು ಧರಣಿ ಕೂರುವುದಾಗಿಯೂ ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ಬಹಳಷ್ಟು ದಿನಗಳ ಮೇಲೆ ಅಧಿಕಾರಿಗಳು ಮರಳುಗಾರಿಕೆ ಮೇಲೆ ದಾಳಿ ನಡೆಸುವ ಮೂಲಕ ಅಕ್ರಮಕ್ಕೆ ಬ್ರೇಕ್ ಹಾಕುವ ಕಾರ್ಯಕ್ಕೆ ಕೈಹಾಕಿದ್ದು ಇದೇ ರೀತಿಯಾದ ಹಲವು ಅಕ್ರಮ ಮರಳುಗಾರಿಕೆ ಅಡ್ಡೆಗಳುಈ ಭಾಗದಲ್ಲಿದ್ದು ಅವುಗಳ ಮೇಲೆಯೂ ಅಧಿಕಾರಿಗಳು ಕಣ್ಣುಹಾಯಿಸಿ ಸೂಕ್ತ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.

Comments are closed.