*ಆರೋಪಿಗಳ ವಿರುದ್ದ ಫೋಕ್ಸೋ ಕಾಯಿದೆ ದಾಖಲಿಸಲು ಚೈತ್ರಾ ಪೋಷಕರು, ಬಿಲ್ಲವ ಸಮಾಜ ಒತ್ತಾಯ
ಉಡುಪಿ: ಸೆಪ್ಟಂಬರ್ 28ರಂದು ಮೊಬೈಲ್ ನಲ್ಲಿ ಮಾತನಾಡುತ್ತಲೇ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಚೈತ್ರಾ ಪೂಜಾರಿ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ವಿಳಂಬ ಮಾಡಿ ಆರೋಪಿಗಳಿಗೆ ಸಹಕರಿಸುತ್ತಿದ್ದಾರೆ ಎಂದು ಚೈತ್ರಾಳ ಪೋಷಕರು ಹಾಗೂ ಬಿಲ್ಲವ ಯುವ ವೇದಿಕೆ ಆರೋಪಿಸಿದೆ.
ಸೆ.28ರಂದು ಸಂಜೆ ಚೈತ್ರಾ ಉಪ್ಪೂರಿನ ಸೇತುವೆಯಿಂದ ಮೊಬೈಲ್ ನಲ್ಲಿ ಮಾತನಾಡುತ್ತಲೇ ಸುವರ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೆ.30ರಂದು ಚೈತ್ರಾಳ ಮೃತದೇಹ ಹೊನ್ನಾಳದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಹಾಗೂ ಉಡುಪಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚೈತ್ರಾಳ ಪ್ರಿಯಕರ ಆದರ್ಶ್ ಸ್ವಿಪ್ಟ್ ಕಾರಿನಲ್ಲಿ ಮತ್ತಿಬ್ಬರ ಜೊತೆಗೆ ಚೈತ್ರ ಸುಸೈಡ್ ಮಾಡುವ ದಿನ ತೆರಳಿದ್ದು ಅಲ್ಲಿ ಏನಾಗಿದೆ ಎಂಬುದನ್ನ ಪೊಲೀಸರು ಇನ್ನೂ ಹೇಳಿಕೆಯನ್ನು ನೀಡಿಲ್ಲ.
ಈ ಪ್ರಕರಣದಲ್ಲಿ ಪೊಲೀಸರು ನಿರಾಸಕ್ತಿಯ ಹೊಂದಿರುವ ಬಗ್ಗೆ ಚೈತ್ರಾಳ ಪೋಷಕರು ಆರೋಪಿಸಿದ್ದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ನಾವು ನಿರಂತರ ಚೈತ್ರಾಳ ಪೋಷಕರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಆದ್ರೆ ಪ್ರಕರಣ ನಡೆದು 10 ದಿನಗಳಾದರೂ ಇದುವರೆಗೆ ಯಾವ ಪೊಲೀಸರು ನನಗೆ ಫೋನ್ ಮಾಡಿಲ್ಲ ಎಂದು ಚೈತ್ರಾಳ ತಂದೆ ಚಂದ್ರಶೇಖರ್ ಆರೋಪಿಸಿದ್ದಾರೆ.
ಇತ್ತ ಚೈತ್ರಾಳಿಗೆ ಪ್ರಕರಣ ನಡೆದ ದಿನ ಇನ್ನೂ 18 ವರ್ಷ ತುಂಬಿಲ್ಲ ಎಂಬ ಮಾಹಿತಿಯನ್ನು ಪೋಷಕರು ಬಹಿರಂಗ ಪಡಿಸಿದ್ದಾರೆ. ಅ.8ರಂದು ಚೈತ್ರಾಳಿಗೆ 18ವರ್ಷ ತುಂಬಿತ್ತು. ಆದ್ರೆ ಸೆ. 28ರಂದೇ ಚೈತ್ರಾ ಸುಸೈಡ್ ಮಾಡಿರುವ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ದ ಫೋಕ್ಸೋ ಕಾಯಿದೆ ದಾಖಲಿಸಬೇಕು ಎಂದು ಬಿಲ್ಲವ ಯುವ ಸಂಘಟನೆ ಒತ್ತಾಯಿಸಿದೆ. ಮಾತ್ರವಲ್ಲ ಪ್ರಕರನ ತನಿಖೆಯನ್ನು ಚುರುಕುಗೊಳಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದೆ.
Comments are closed.