ಮಂಗಳೂರು: ಐದು ವರ್ಷದ ಮಗುನಿಂದ ಎಂಬತ್ತು ವರ್ಷದ ಮುದುಕರವರೆಗೂ ಎಲ್ಲರಿಗೂ ಬೇರೆ ಬೇರೆ ರೀತಿಯಲ್ಲಿ ಒತ್ತಡ ಇರುವುದು.ಈ ಒತ್ತಡವು ಒಂದು ರೀತಿಯ ತಲೆಶೂಲೆಯಾಗಿದೆ. ಒತ್ತಡದಿಂದ ಬೇರೆಬೇರೆ ರೀತಿಯ ಅನಾರೋಗ್ಯವು ತಲೆದೋರುತ್ತವೆ. ಉದಾ: ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ರೋಗಗಳು, ತಲೆನೋವು,ಅರೆತಲೆ ನೋವು, ನಿದ್ರಾಹೀನತೆ, ದೇಹದ ತೂಕದಲ್ಲಿ ವ್ಯತ್ಯಾಸವಾಗುವುದು, ಜೀರ್ಣಾಂಗದ ಕಾರ್ಯವೈಫಲ್ಯ,ಅಲ್ಸರ್ ಇವೆಲ್ಲವೂ ಈ ಒತ್ತಡದಿಂದಲೇ ಬರುವುದು.ಕೆಲವು ಸಲ ದಾಂಪತ್ಯ ಜೀವನದಲ್ಲೂ ಇದು ಪರಿಣಾಮ ಬೀಳುವುದು ಸಹಜವಾಗಿಬಿಟ್ಟಿದೆ.
ಒತ್ತಡ ನಿವಾರಣೆಗೆ ಕೆಲವು ಸರಳ ಮಾರ್ಗಗಳು:
1.. ನೀವು ಮನೆಯಲ್ಲಿರುವಾಗ,ಕಚೇರಿಯಲ್ಲಿರುವಾಗ, ವಾಹನ ಚಾಲನೆ ಮಾಡುತ್ತಿರುವಾಗ, ದೊಡ್ಡ ಸರತಿಸಾಲಿನಲ್ಲಿ ನಿಂತು ಕಾಯುತ್ತಿರುವಾಗ, ಲಿಫ್ಟ್‌ನಲ್ಲಿರುವಾಗ- ಎಲ್ಲಿದ್ದರೂ ದೇಹದ ಸ್ನಾಯುಗಳನ್ನು ಸಡಿಲಬಿಟ್ಟು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಳ್ಳಿ.
2..ಈ ರೀತಿ ಮಾಡುವುದರಿಂದ ನಮ್ಮ ಶ್ವಾಸಕೋಶಗಳು ಹಿಗ್ಗಿ ಈ ದೀರ್ಘ ಉಸಿರಾಟದಿಂದ ಒತ್ತಡ ಕಡಿಮೆಯಾಗುತ್ತದೆ. ಈ ಅಭ್ಯಾಸವನ್ನೂ ದಿನದಲ್ಲಿ 5-6 ಬಾರಿ ಮಾಡಿದರೂ ಒತ್ತಡದಿಂದ ಬಹಳಷ್ಟು ಮುಕ್ತಿ ಪಡೆಯಬಹುದು.
3..ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ವಿಶ್ರಾಂತಿಯನ್ನು ಕೊಡಲೇಬೇಕು.ಸರಿಯಾದ ವಿಶ್ರಾಂತಿ ಸಹ ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.
4..ನಿದ್ರಾಹೀನತೆಯಿಂದಲೂ ಒತ್ತಡ ಹೆಚ್ಚಾಗುತ್ತದೆ ಎಂದು ನಾವು ಆಗಲೇ ತಿಳಿದುಕೊಂಡಿದ್ದೇವೆ. ಹೀಗಾಗಿ ನಿದ್ರೆ ದೇಹಕ್ಕೆ ಸಾಕಷ್ಟು ಚೈತನ್ಯವನ್ನು ನೀಡುತ್ತದೆ.
5..ಕಾಲಿನ ಹೆಬ್ಬೆಟ್ಟಿನಿಂದ ಹಿಡಿದು ಮೊಣಕಾಲುಗಳು, ದೇಹದ ಮಾಸಖಂಡಗಳು ಎಲ್ಲವನ್ನು ಸಡಿಲವಾಗಿಸಿ ನಿದ್ರೆಯ ಆಳಕ್ಕೆ ಜಾರಿದರೆ ಮತ್ತೆ ನೀವು ನಿದ್ರೆಯಿಂದ ತಿಳಿದೆದ್ದಾಗ ನಿಮ್ಮ ದೇಹಕ್ಕೆ ಹೊಸ ಶಕ್ತಿ, ನವೋಲ್ಲಾಸ ಸಂಚಯನವಾಗಿರುತ್ತದೆ.