ಕರಾವಳಿ

ಕೊಲ್ಲೂರು ದೇವಳದ ಭಕ್ತಾಧಿಗಳ ಕ್ಯೂನಲ್ಲಿ ಶಾರ್ಟ್ ಸರ್ಕ್ಯೂಟ್; ತಪ್ಪಿದ ಬಾರೀ ಅನಾಹುತ

Pinterest LinkedIn Tumblr

Kolluru_Temple_Theft (4)

* ಯೋಗೀಶ್ ಕುಂಭಾಸಿ

ಕುಂದಾಪುರ: ಇದು ನವರಾತ್ರಿ ಗೌಜಿನ ಸಮಯ. ಕುಂದಾಪುರದ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದಲ್ಲಿ ಈಗ ರಾಜ್ಯ ಹಾಗೂ ಹೊರ ರಾಜ್ಯದ ಲಕ್ಷಾಂತರ ಭಕ್ತರು ಶ್ರೀ ದೇವಿ ದರ್ಶನ ಹಾಗೂ ವಿಶೇಷ ಪೂಜೆಗಾಗಿ ಬರುತ್ತಾರೆ. ಆದರೇ ದೇವಳದ ಸನಿಹ ನಡೆದ ಶಾರ್ಟ್ ಸರ್ಕ್ಯೂಟ್ ಕೆಲ ಕಾಲ ಜನರಲ್ಲಿ ಆತಂಕ ಉಂಟು ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳ ನೂಕುನುಗ್ಗಲು ತಪ್ಪಿಸಿ ಅವರಿಗೆ ದೇವಳದ ಒಳ ಪ್ರವೇಶಕ್ಕೆ ಅನುವು ಮಾಡಿಕೊಡಲು ತಿಂಗಳುಗಳ ಹಿಂದೆ ದೇವಸ್ಥಾನದ ಹೊರಬದಿಯ ಒಂದು ಭಾಗದಿಂದ ಸರತಿ ಸಾಲು (ಕ್ಯೂ ಸಿಸ್ಟೆಮ್) ನಿಯಮ ಮಾಡಲಾಗಿತ್ತು. ಅಂತೆಯೇ ಆ ಸರತಿಯಲ್ಲಿ ಯಾವುದೇ ಅಹಿತಕರ ಘಟನೆಗಳು, ಕುಕ್ರತ್ಯಗಳು ನಡೆಯದಂತೆ ತಡೆಯಲು ಟ್ಯೂಬ್ ಲೈಟ್ ವ್ಯವಸ್ಥೆ ಮಾಡಲಾಗಿತ್ತು.

ಅಂತೆಯೇ ಭಾನುವಾರ ರಾತ್ರಿ ನೂರಾರು ಭಕ್ತರು ದೇವಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಸಂದರ್ಭ ಮಳೆಯಿದ್ದ ಕಾರಣ ಸರತಿ ಸಾಲಿನಲ್ಲಿ ಅಳವಡಿಸಿದ ವಿದ್ಯುತ್ ಸಂಪರ್ಕದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಈ ಘಟನೆಯಿಂದ ಕಾಸರಗೋಡು ಮೂಲದವರೆನ್ನಲಾದ ಮೂವರು ಮಹಿಳೆಯರು ಅಸ್ವಸ್ಥರಾಗಿದ್ದು ಅವರನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನುವ ಮಾಹಿತಿಯಿದೆ. ಅವರೆಲ್ಲರೂ ಸದ್ಯ ಯವುದೇ ಪ್ರಾಣಪಾಯವಿಲ್ಲದೇ ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ.

ಇನ್ನು ಈ ವಿದ್ಯುತ್ ಸಂಪರ್ಕ ಜನರೇಟರ್ ಮೂಲಕ ಬಂದಿದ್ದೆನ್ನಲಾಗಿದ್ದು ಅದಕ್ಕಾಗಿ ಕಡಿಮೆ ಪ್ರಮಾಣದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ.

ಸ್ಥಳದಲ್ಲಿ ಅಗ್ನಿಶಾಮಕದಳ ಹಾಗೂ ಕೊಲ್ಲೂರು ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

(ಕೊಲ್ಲೂರು ದೇವಳದ ಸಂಗ್ರಹ ಚಿತ್ರ)

Comments are closed.