ಕರಾವಳಿ

ಬೃಹತ್ ಮರ ಕಡಿಯುತ್ತಿದ್ದ ವೇಳೆ ಮರಬಿದ್ದು ಲೈನ್ ಮ್ಯಾನ್‌ಗೆ ಗಾಯ

Pinterest LinkedIn Tumblr

tree_fall_injury_6

ಮಂಗಳೂರು : ಬೃಹತ್ ಮರವೊಂದನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿಬಿದ್ದು ಮೆಸ್ಕಾಂ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಗರದ ಬಂಟ್ಸ್ ಹಾಸ್ಟೇಲ್ ಸಮೀಪದ ಕರಂಗಲ್ಪಾಡಿಯಲ್ಲಿ ಸಂಭವಿಸಿದೆ.

tree_fall_injury_1 tree_fall_injury_2 tree_fall_injury_3 tree_fall_injury_4

ಕರಂಗಲ್ಪಾಡಿ ಬಳಿಯಲ್ಲಿರುವ ಸೈಂಟ್ ಅಲೋಶಿಯಸ್ ಪ್ರಾಥಮಿಕ ಶಾಲೆಯ ಅವರಣದಲ್ಲಿ ಬ್ರಹತ್ ಗಾತ್ರದ ಗಾಳಿಮರವೊಂದನ್ನು ಕಡಿಯುತ್ತಿದ್ದ ವೇಳೆ ಅದು ಹಠಾತ್ತನೆ ಉರುಳಿ ಹೈಟೆನಷನ್ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಈ ಸಂದರ್ಭ ವಿದ್ಯುತ್ ಕಂಬ ಮುರಿದುಬಿದ್ದಿದೆ. ಈ ಘಟನೆ ಸಂದರ್ಭ ಅಲ್ಲೇ ಪಕ್ಕದ ವಿದ್ಯುತ್ ಕಂಬ ಕೂಡಾ ಕಂಪಿಸಿದ್ದು, ಈ ವೇಳೆ ಇನ್ನೊಂದು ಕಂಬದಲ್ಲಿ ತಂತಿ ದುರಸ್ತಿ ಮಾಡುತ್ತಿದ್ದ ಲೈನ್ ಮ್ಯಾನ್ ಕೆಳಗೆ ಬಿದ್ದಿದ್ದಾರೆ. ಲೈನ್ ಮ್ಯಾನ್ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

tree_fall_injury_5 tree_fall_injury_7 tree_fall_injury_8 tree_fall_injury_9 tree_fall_injury_10 tree_fall_injury_11 tree_fall_injury_12 tree_fall_injury_13

ಈ ಸಂದರ್ಭ ಅದೇ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಖಾಸಗಿ ಬಸ್ಸ್‌ಗೆ ಮುರಿದು ಬಿದ್ದ ತಂತಿ ಸಿಲುಕಿ ಎಳೆಯಲ್ಪಟ್ಟು ಎರಡು ಬದಿಗಳ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿದೆ. ಮೆಸ್ಕಾಂ ಇಲಾಖೆ ಮೊದಲೇ ವಿದ್ಯುತ್ ಸರಬರಾಜು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಈ ಘಟನೆಯಿಂದ ಹೆಚ್ಚಿನ ಅವಘಡಸಂಭವಿಸಿಲ್ಲ.

Comments are closed.