ಕಾಸರಗೋಡು: ಸೋದರರಿಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ. ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ನಿವಾಸಿ ಸತೀಶ್(40) ಮತ್ತು ಸಹೋದರ ಸಜಿತ್(36)ರವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಇದು ಆಕ್ಮಸಿಕವೇ ಅಥವಾ ಇನ್ಯಾವುದೇ ಕಾರಣದಿಂದ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇಬ್ಬರು ನಾಪತ್ತೆಯಾದುದರಿಂದ ಮನೆಯೊವರು ಹುಡುಕಾಟ ನಡೆಸಿದಾಗ ದಾರಿ ಮಧ್ಯೆ ಆವರಣವಿಲ್ಲದ ಒಂದೇ ಬಾವಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಮಶಾಮಕ ದಳದ ಸಿಬಂದಿಗಳು ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದರು. ಸತೀಶ್ ಬಸ್ ಮತ್ತು ಸಜಿತ್ ಲಾರಿ ಚಾಲಕರಾಗಿ ದುಡಿಯುತ್ತಿದ್ದರು. ಬಾವಿ ಸಮೀಪ ವಾಚ್, ಚಪ್ಪಲಿ, ಲುಂಗಿ ಪತ್ತೆಯಾಗಿದೆ.
ಚಿಮೇನಿ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಪೆರಿಯಾರಂ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Comments are closed.