ಕರಾವಳಿ

ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಿಯಲ್ಲಿ ನವರಾತ್ರಿ ಹಬ್ಬದ ಸಂಭ್ರಮ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್‌. ಯೋಗೇಶ್ವರ ಅ. 1ರಂದು ಚಾಲನೆ ನೀಡಿದರು.

kolluru_mookambike_devi

ಬೆಳಗ್ಗೆ ಕಂಬದ ಗಣಪತಿಯಲ್ಲಿ ವಿಶೇಷ ಪೂಜೆಯೊಡನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ನಡೆದವು. ದೇವಿಯ ಸಾನ್ನಿಧ್ಯದಲ್ಲಿ ಅಭಿಷೇಕ, ಅರ್ಚನೆ, ಮಂಗಳಾರತಿ, ನಾಂದಿ ಪುಣ್ಯಾಹ ಹಾಗೂ ಸಂಜೆ ಕಲಶ ಸ್ಥಾಪನೆ ಕಾರ್ಯಕ್ರಮ ಜರಗಿತು.

ಅ. 1ರಿಂದ ಅ. 11ರ ವರೆಗೆ ದೇವಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ನಾನಾ ರೂಪದಲ್ಲಿ ಶ್ರೀ ದೇವಿಯನ್ನು ಅಲಂಕರಿಸುವ ಮೂಲಕ ಕ್ಷೇತ್ರದ ಸಾನ್ನಿಧ್ಯವು ಇನ್ನಷ್ಟು ವಿಜೃಂಭಿಸಲಿದೆ. ಈಗಾಗಲೇ ಭಕ್ತರಿಗೆ ವಸತಿ ಸೌಕರ್ಯದೊಡನೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅ. 10ರ ಮಹಾನವಮಿಯಂದು ಬೆಳಗ್ಗೆ ಚಂಡಿಕಾ ಯಾಗ ಹಾಗೂ ಸಂಜೆ ರಥೋತ್ಸವ ನಡೆಯಲಿದೆ.

ಅ. 11ರಂದು ವಿದ್ಯಾರಂಭ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ದಿನ ನಡೆಯುವ ವಿದ್ಯಾರಂಭ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರು ಸರಸ್ವತಿ ಮಂಟಪದಲ್ಲಿ ಪುಟ್ಟ ಮಕ್ಕಳ ನಾಲಿಗೆಯ ಮೇಲೆ ಚಿನ್ನದ ಉಂಗುರದಿಂದ ಓಂಕಾರ ಬರೆಸುವುದರೊಡನೆ ಅಕ್ಕಿಯಲ್ಲಿ ಓಂಕಾರ ಬರೆಸುವ ಧಾರ್ಮಿಕ ಪ್ರಕ್ರಿಯೆ ನಡೆಯುತ್ತೆ.

Comments are closed.