ಕರಾವಳಿ

ಕುಂದಾಪುರದ ಆನಗಳ್ಳಿಯಲ್ಲಿ ಅಕ್ರಮ ಮರಳುಗಾರಿಕೆ; ಮರಳು ತುಂಬಿದ ದೋಣಿ ವಶ, ಇಬ್ಬರು ಕಾರ್ಮಿಕರ ಬಂಧನ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಎಲ್ಲರಿಗೂ ಒಂದು ಕಾನೂನಾದರೇ ಇವರಿಗೆ ಇನ್ನೊಂದು ಕಾನೂನು ಎಂಬಂತಾಗಿದೆ ಮರಳು ಹಿಂದೆ ಬಿದ್ದ ಕೆಲವೊಬ್ಬ ಗಣಿಲೂಟಿಕೋರರ ಕಥೆ. ಜಿಲ್ಲೆಯಲ್ಲಿಯೇ ಮರಳುಗಾರಿಕೆ ನಿಂತಿದ್ದರೂ ಕೂಡ ಇವರು ತಮಗೆ ಬೇಕಾದ ಹಾಗೇ ಪರ್‍ಯಾಯ ಕಾನೂನು ರಚಿಸಿಕೊಂಡು ನದಿಗಿಳಿದು ಮರಳು ತೆಗೆಯಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಆನಗಳ್ಳಿ ರೈಲ್ವೇ ಸೇತುವೆ ಕೆಳಭಾಗದ ನದಿಯಲ್ಲಿ ದೋಣಿ ಮೂಲಕ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ಸಾಂಪ್ರದಾಯಿಕ ನಾನ್ ಸಿ.ಆರ್.ಝಡ್ ಮರಳುಗಾರಿಕೆ ಸಂಘ, ಮರಳು ದೋಣಿ ಕಾರ್ಮಿಕರ ಸಂಘ ಹಾಗೂ ಸಾರ್ವಜನಿಕರ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಮರಳು ತೆಗೆಯುತ್ತಿದ್ದ ದೋಣಿ, ಮರಳು ಹಾಗೂ ಕಾರ್ಮಿಕರಿಬ್ಬರನ್ನು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ. ಬಂಧಿತ ಆರೋಪಿಗಳನ್ನು ಮರಳು ತೆಗೆಯುತ್ತಿದ್ದ ಆರೋಪಿಗಳಾದ ಪ್ರಭಾಕರ ಹಾಗೂ ನಾಗರಾಜ್ ಎನ್ನಲಾಗಿದೆ.

kundapura_illegale_sand-mining-5 kundapura_illegale_sand-mining-2 kundapura_illegale_sand-mining-4 kundapura_illegale_sand-mining-3 kundapura_illegale_sand-mining-1 kundapura_illegale_sand-mining-6

ಜಿಲ್ಲಾದ್ಯಂತ ಮರಳುಗಾರಿಕೆ ಸ್ಥಗಿತಗೊಂಡು ಹಲವು ಸಮಯಗಳಾಗಿದ್ದು ಮರಳುಗಾರಿಕೆ ಅನುಮತಿ ನೀಡುವಂತೆ ಹಲವಾರು ಸಂಘಟನೆಗಳು ಪ್ರತಿಭಟನೆಯನ್ನು ನಡೇಸಿದ್ದರು. ಮರಳುಗಾರಿಕೆಗೆ ಹೇರಿದ್ದ ನಿಷೇಧವನ್ನು ತೆರವು ಮಾಡಿದ್ದಾಗಿ ಮೂರು ದಿನಗಳ ಹಿಂದೆ ಗಣಿ ಇಲಾಖೆಯವರು ಹಾಗೂ ಜಿಲ್ಲಾಧಿಕಾರಿಗಳು ಹೇಳಿದ್ದರು. ಆದರೇ ಈ ನಿಷೇದಾಜ್ನೆ ಇನ್ನು ತೆರವಾಗಿಲ್ಲ ಎಂಬುದು ಮತ್ತೊಂದು ಸಂಗತಿಯಾಗಿದೆ. ಶನಿವಾರ ಬೆಳಿಗ್ಗೆನಿಂದಲೂ ಕೆಲವು ಟೆಂಡರ್ ಪಡೆದ ಮಂದಿ ಆನಗಳ್ಳಿ ರೈಲ್ವೇ ಬ್ರಿಡ್ಜ್ ಕೆಳಭಾಗದಲ್ಲಿ ಏಕಾಏಕಿ ಮರಳು ತೆಗೆಯಲು ಆರಂಭಿಸಿದ್ದು ಇದನ್ನು ಪ್ರಶ್ನೆ ಮಾಡಲು ಹೊರಟ ಸಂಘಟನೆಯವರಿಗೆ ಉಡಾಫೆ ಮಾತನಾಡಿದ್ದಾರೆ ಎಂಬುದು ಸಾಂಪ್ರದಾಯಿಕ ನಾನ್ ಸಿ.ಆರ್.ಝಡ್ ಮರಳುಗಾರಿಕೆ ಸಂಘದ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು ಆರೋಪವಾಗಿದೆ.

ಕಳೆದ ೨೨ ವರ್ಷಗಳಿಂದ ಇಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದೇವೆ. ಆದರೇ ಮೂರು ತಿಂಗಳಿನಿಂದಲೂ ಮರಳಿಗೆ ಅಭಾವವಿದ್ದು ಸಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡಬೇಕು, ಇದನ್ನೇ ನಂಬಿ ಸಾಲ ಮಾಡಿದ ನಮಗೆ ಅನ್ಯಾಯವಾಗುತ್ತಿದೆ. ಪಡೆದ ಸಾಲ ತುಂಬಿಸಲು ಕಷ್ಟವಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಮೂಲಕ ಮರಳುಗಾರಿಕೆಗೆ ಅನುಮತಿ ನೀಡಿದರೇ ಕೇವಲ ಹಣವಂತರ ಹೊಟ್ಟೆ ಮಾತ್ರ ತುಂಬುತ್ತದೆ. ನಮ್ಮಂತಹ ಬಡವರ ಗತಿಯೇನು ಎಂದು ಅಲ್ಲಿ ನರೆದಿದ್ದ ಸ್ಥಳೀಯ ಮಂದಿ ನೋವನ್ನು ತೋಡಿಕೊಂಡರು.

ಇನ್ನು ಆನಗಳ್ಳಿಯಲ್ಲಿನ ಈ ಸ್ಥಳವು ಪರಿಶಿಷ್ಟ ಜಾತಿ ಹಾಗೂ ಪಂಗಡದವರಾದ ಇಬ್ಬರ ಹೆಸರಿನಲ್ಲಿ ಮರಳು ತೆಗೆಯಲು ಟೇಂಡರ್ ಇದ್ದು, ಇಂದು ಅಕ್ರಮ ಮರಳುಗಾರಿಕೆ ನಡೆಸಿದವರು ಬೇರೆಯವರಾಗಿದ್ದಾರೆ. ದಲಿತರ ಹೆಸರಿನಲ್ಲಿ ಇತರರು ಟೆಂಡರ್ ಪಡೆದು ದಲಿತರಿಗೆ ಅನ್ಯಾಯ ಮಾಡುತ್ತಿದ್ದು ಇದು ಹೀಗೆಯೇ ಮುಂದುವರಿದರೇ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಉಘ್ರ ಹೋರಾಟ ಮಾಡುತ್ತೇವೆಂದು ದಲಿತ ಶ್ರೇಯೋಭಿವ್ರದ್ಧಿ ಸಂಘ ಬಳ್ಕೂರಿನ ಅಧ್ಯಕ್ಷ ತಿಲಕರಾಜ್ ಬಳ್ಕೂರು ಎಚ್ಚರಿಸಿದ್ದಾರೆ.

ಸದ್ಯ ಆರೋಪಿಗಳನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.