ಕರಾವಳಿ

ವಿಶ್ವ ಹೃದ್ರೋಗ ದಿನಾಚರಣೆ ಪ್ರಯುಕ್ತ ಎ.ಜೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಹೃದ್ರೋಗ ಸಾಧನಗಳ ವಸ್ತುಪ್ರದರ್ಶನ

Pinterest LinkedIn Tumblr

aj_hospital_heart_divaice

ಮಂಗಳೂರು, ಸೆ.30 : ದೇಶದಲ್ಲಿ ಪರಿಧಮನಿ (ಕೊರೊನರಿ ಆರ್ಟರಿ ಡಿಸೀಸ್) ರೋಗವು ದೇಶದಲ್ಲಿ ಸಾವಿಗೆ ಕಾರಣವಾಗುವ ಪ್ರಮುಖ ರೋಗಗಳಲ್ಲೊಂದಾ ಗಿದ್ದು, ಈ ಬಗ್ಗೆ ಸಾಮಾಜಿಕ ಜಾಗೃತಿ ಅಗತ್ಯ. ವಿಶ್ವ ಹೃದಯ ದಿನಾಚರಣೆಯನ್ನು ಈ ನಿಟ್ಟಿನಲ್ಲಿ ವಿಶ್ವಾದ್ಯಂತ ಹಮ್ಮಿಕೊಳ್ಳಲಾಗಿದ್ದು, ವಿಶ್ವ ಹೃದ್ರೋಗ ದಿನಾಚರಣೆ ಅಂಗವಾಗಿ ನಗರದ ಎ.ಜೆ.ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಅತ್ಯಾಧುನಿಕ ಹೃದ್ರೋಗ ಸಾಧನಗಳ ವಸ್ತುಪ್ರದರ್ಶನ ಖ್ಯಾತ ಹೃದ್ರೋಗ ತಜ್ಞ ಡಾ.ಮಂಜುನಾಥ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಎಲ್ಲ ವಯೋಮಾನದ, ಭೌಗೋಳಿಕತೆ ಹಾಗೂ ಸಾಮಾಜಿಕ ವರ್ಗಗಳ ಭೇದವಿಲ್ಲದೇ ಹೃದ್ರೋಗ ಇಂದು ವ್ಯಾಪಕವಾಗಿ ಹಬ್ಬಿದ್ದು, ಸಿಎಡಿ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ಹೃದಯಕ್ಕೆ ರಕ್ತವನ್ನು ಒಯ್ಯುವ ಅಪಧಮನಿಗಳಲ್ಲಿ ದೈಹಿಕ ನಿಷ್ಕ್ರಿಯತೆ, ಬೊಜ್ಜು, ದೂಮಪಾನ, ಮಧುಮೇಹ, ಹೈಪರ್ ಟೆನ್ಷನ್ ಮತ್ತಿತರ ಕಾರಣಗಳಿಂದ ಊತ ಕಾಣಿಸಿಕೊಂಡು, ರಕ್ತ ಪರಿಚಲನೆಗೆ ತಡೆಯೊಡ್ಡುತ್ತದೆ ಎಂದು ವಿವರಿಸಿದರು.

ಇರದಿಂದಾಗಿ ಹೃದಯಕ್ಕೆ ರಕ್ತ ಪರಿಚಲನೆ ಕಟ್ಟಿಕೊಂಡು ಹೃದಯಾಘಾತವಾಗುವ ಸಾಧ್ಯತೆ ಅಧಿಕ. ಆದರೆ ಪರಿಧಮನಿಯ ಆಂಜಿಯೊಬ್ಲಾಸ್ಟಿಯಂಥ ಅತ್ಯಾಧುನಿಕ ವಿಧಾನದಿಂದ ಹೃದಯ ತಜ್ಞರು ಉತ್ತಮ ಫಲಿತಾಂಶ ಪಡೆಯುವುದು ಸಾಧ್ಯವಾಗಿದೆ. ರೋಗಿಯ ಜೀವ ಉಳಿಸಲು ಹಾಗೂ ಜೀವನ ಗುಣಮಟ್ಟ ಸುಧಾರಣೆ ಇದರಿಂದ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಬೋಸ್ಟನ್ ಸೈಂಟಿಫೀಕ್ ನೇವಿಗೇಶನ್ ಎಕ್ಸ್‌ಪ್ರೆಸ್, ಅತ್ಯಾಧುನಿಕ ಶ್ರೇಣಿಯ ವೈದ್ಯಕೀಯ ಸಾಧನಗಳನ್ನು ಪರಿಚಯಿಸುವ ಜತೆಗೆ ದೇಶಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸ್ತುತ್ಯಾರ್ಹ ಎಂದು ಹೇಳಿದರು.

ನೇವಿಗೇಶನ್ ಎಕ್ಸ್‌ಪ್ರೆಸ್
ನೇವಿಗೇಶನ್ ಎಕ್ಸ್‌ಪ್ರೆಸ್ ಎನ್ನುವುದು ಒಂದು ಸಂಚಾರಿ ವಸ್ತುಪ್ರದರ್ಶನ ವಾಹನವಾಗಿದ್ದು, ಅದ್ಭುತ ವೈದ್ಯಕೀಯ ಸಾಧನಗಳನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ಯುವ ವೈದ್ಯರಿಗೆ ಪರಿಚಯಿಸುವ ಯೋಜನೆಯಾಗಿದೆ. ಈ ವಿಶೇಷವಾಗಿ ವಿನ್ಯಾಸಗೊಳಿಸಿದ ವ್ಯಾನ್, ಪೆರಿಫೆರಕ್ ವಾಸ್ಕ್ಯುಲೇಚರ್ ಮತ್ತು ಗ್ಯಾಸ್ಟ್ರೊ ಇಂಟೆಸ್ಟಿನಲ್ ಎಂಡೋಸ್ಕೊಪಿಯಲ್ಲಿ ಹಸ್ತಕ್ಷೇಪದ ಹೃದಯ ಚಿಕಿತ್ಸೆ, ಕಾಡಿರ್ಯಾಕ್ ರಿಸ್ಕ್ ನಿರ್ವಹಣೆಯಂಥ ವೈವಿಧ್ಯಮಯ ಸಾಧನಗಳು ಪ್ರದರ್ಶನದಲ್ಲಿವೆ.

ವೈದ್ಯರು, ನರ್ಸ್‌ಗಳು, ಟೆಕ್ನೀಶಿಯನ್ ಹಾಗೂ ಲಾಬ್ ಸಹಾಯಕರಿಗೆ ಅತ್ಯಾಧುನಿಕ ವೈದ್ಯಕೀಯ ಸಾಧನಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ 10 ರಾಜ್ಯಳ 55  ನಗರಗಳಲ್ಲಿ 160 ಆಸ್ಪತ್ರೆಗಳಿಗೆ ಭೇಟಿ ನೀಡಲಿದೆ ಎಂದು ವಸ್ತುಪ್ರದರ್ಶನ ಆಯೋಜಕರಾದ ಶಿವಕುಮಾರ್ ವಿವರಿಸಿದರು. ಇದು ನಗರದ ಐದು ದೊಡ್ಡ ಆಸ್ಪತ್ರೆಗಳಿಗೆ ಭೇಟಿ ನೀಡಲಿದೆ.

ಉತ್ತಮ ವೈದ್ಯಕೀಯ ಚಿಕಿತ್ಸಾ ತಂತ್ರಜ್ಞಾನ ಒದಗಿಸುವ ಜತೆಗೆ, ಅದನ್ನು ನಿರ್ವಹಿಸುವ ಸಿಬ್ಬಂದಿಗೆ ಉಚಿತವಾಗಿ ತರಬೇತಿ ನೀಡುವುದು ನಮ್ಮ ಧ್ಯೇಯ ಎಂದು ಸಂಸ್ಥೆಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಬಲ್ ಚಕ್ರವರ್ತಿ ಹೇಳಿದರು.

ಈಗಾಗಲೇ 29 ನಗರಗಳಲ್ಲಿ 870  ವೃತ್ತಿಪರರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಮುಂದೆ ಇನ್ನೂ 24 ನಗರಗಳಿಗೆ ಇದು ಪ್ರವೇಶಿಸಲಿದೆ ಎಂದರು.

Comments are closed.