ರಾಷ್ಟ್ರೀಯ

ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಯೋಧನ ಬಿಡುಗಡೆಗೆ ಪ್ರಯತ್ನ: ರಾಜನಾಥ್ ಸಿಂಗ್

Pinterest LinkedIn Tumblr

rajanathsingh1

ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಯೋಧನನ್ನು ಬಂಧಮುಕ್ತಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತದ ಮುಂದಿನ ನಡೆಗಳ ಬಗ್ಗೆ ನಿರ್ಧರಿಸಲು ಸಿಂಗ್ ಅವರು ಶುಕ್ರವಾರ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಎನ್ಎಸ್ಎ ಅಜಿತ್ ದೊಭಾಲ್ ಅವರ ಜತೆ ಸಭೆ ನಡೆಸಿದ್ದಾರೆ.

37 ರಾಷ್ಟ್ರೀಯ ರೈಫಲ್ಸ್ ಪಡೆಯ ಚಂದು ಬಾಬುಲಾಲ್ ಚೌಹಾಣ್ ಎಂಬ ಯೋಧನನ್ನು ಪಾಕಿಸ್ತಾನದ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ವಶ ಪಡಿಸಿಕೊಂಡಿತ್ತು ಎಂದು ಭಾರತೀಯ ಸೇನಾಪಡೆಯ ಅಧಿಕಾರಿಗಳು ಹೇಳಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ಝನದ್ರೂತ್ ಎಂಬಲ್ಲಿ ಪಾಕಿಸ್ತಾನದ ಸೇನಾಪಡೆ ಚೌಹಾಣ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಆತನನ್ನು ನಿಕಾಯಲ್‍ನಲ್ಲಿರುವ ಸೇನಾಕಚೇರಿಯಲ್ಲಿ ಇರಿಸಲಾಗಿದೆ.

ಆದಾಗ್ಯೂ, ಪಾಕ್ ವಶದಲ್ಲಿರುವ ಯೋಧನನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಯೋಧನನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಲಾಗಿದೆ ಎಂದು ಸಿಂಗ್ ಮಾಧ್ಯಮದವರಲ್ಲಿ ಹೇಳಿದ್ದಾರೆ.

Comments are closed.