ಕರಾವಳಿ

ಮಂಗಳೂರಿನಲ್ಲಿ ಬಾಲ ಭಿಕ್ಷಾಟನೆ ನಿರ್ಮೂಲನೆ ಜನ ಜಾಗೃತಿ ಅಭಿಯಾನ

Pinterest LinkedIn Tumblr

mcc_besent_clg_1

ಮಂಗಳೂರು, ಸೆ.29: ಬಾಲ ಭಿಕ್ಷಾಟನೆ ನಿರ್ಮೂಲನೆ ಜನ ಜಾಗೃತಿ ಅಭಿಯಾನಕ್ಕೆ ಮಂಗಳೂರು ಮೇಯರ್ ಹರಿನಾಥ್ ಅವರು ಗುರುವಾರ ನಗರದಲ್ಲಿ ಚಾಲನೆ ನೀಡಿದರು. ಪಾಲಿಕೆ ಕಚೇರಿ ಮುಂಭಾಗ ಅಭಿಯಾನಕ್ಕೆ ಚಾಲನೆ ನೀಡಿದ ಮೇಯರ್ ಹರಿನಾಥ್ ಅವರು ಬಳಿಕ ಜನಜಾಗೃತಿ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಿದರು.

ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಚೈಲ್ಡ್ ಲೈನ್ ಮಂಗಳೂರು ಇದರ ಸಹಯೋಗದಲ್ಲಿ ವಿವಿಧ ಕಾಲೇಜುಗಳ ಸಹಕಾರದೊಂದಿಗೆ ಬಾಲ ಭಿಕ್ಷಾಟನೆ ನಿರ್ಮೂಲನೆ ಜನ ಜಾಗೃತಿ ಅಭಿಯಾನವನ್ನು ಅಯೋಜಿಸಲಾಗಿತ್ತು.

mcc_besent_clg_4 mcc_besent_clg_3 mcc_besent_clg_2

mcc_besent_clg_5 mcc_besent_clg_6 mcc_besent_clg_7 mcc_besent_clg_8 mcc_besent_clg_9 mcc_besent_clg_10 mcc_besent_clg_11 mcc_besent_clg_12 mcc_besent_clg_13 mcc_besent_clg_14 mcc_besent_clg_15 mcc_besent_clg_16 mcc_besent_clg_17 mcc_besent_clg_18 mcc_besent_clg_19

ಅಭಿಯಾನದ ಅಂಗವಾಗಿ ನಗರದ 12 ಪ್ರಮುಖ ಸರ್ಕಲ್ ಗಳಲ್ಲಿ ಏಕಕಾಲದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬಾಲ ಭಿಕ್ಷಾಟನೆ ವಿರುದ್ಧದ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳನ್ನೊಳಗೊಂಡ ಫಲಕಗಳೊಂದಿಗೆ ಗಮನಸೆಳೆದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಉಪಮೇಯರ್ ಸುಮಿತ್ರಾ ಕರಿಯ, ಡಿಸಿಪಿ ಡಾ.ಸಂಜೀವ ಪಾಟೀಲ್, ಚೈಲ್ಡ್ ಲೈನ್ನ ರೆನ್ನಿ ಡಿಸೋಜ, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Comments are closed.