ಕರಾವಳಿ

ಯುನೈಟೆಡ್ ಫಾರ್ ಎ ಬೆಟರ್ ದಕ್ಷಿಣ ಕನ್ನಡ’ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

Pinterest LinkedIn Tumblr

silent_solidarty_march_1

ಮಂಗಳೂರು, ಸೆ. 24: ಭಾರತೀಯ ಸೇನಾ ಯೋಧರು ದೇಶದ ಗಡಿ ಕಾಯುತ್ತಿರುವುದರಿಂದಲೇ ನಾವಿಂದು ನಿಶ್ಚಿಂತರಾಗಿ ಓಡಾಡುತ್ತಿದ್ದೇವೆ. ದೇಶದ ಭದ್ರತೆ ಮತ್ತು ಏಕತೆಗಾಗಿ ಯೋಧರ ಬಲಿದಾನಗಳನ್ನು ನಾವು ಸ್ಮರಿಸುವಂತಾಗಬೇಕು ಎಂದು ಮಂಗಳೂರು ನಗರ ಪೊಲೀಸ್ ಕಮಿಶನರ್ ಚಂದ್ರಶೇಖರ್ ಹೇಳಿದರು.

ಯುನೈಟೆಡ್ ಫಾರ್ ಎ ಬೆಟರ್ ದಕ್ಷಿಣ ಕನ್ನಡ’ ವತಿಯಿಂದ ಶುಕ್ರವಾರ ನಗರದ ಕದ್ರಿ ಯೋಧರ ಸ್ಮಾರಕದಲ್ಲಿ ಹಮ್ಮಿಕೊಂಡ ಉರಿ ಸೇನಾ ನೆಲೆಯ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

silent_solidarty_march_2 silent_solidarty_march_3 silent_solidarty_march_4 silent_solidarty_march_5

ಕಾರ್ಯಕ್ರಮದ ಆರಂಭದಲ್ಲಿ ಕದ್ರಿ ಪಾರ್ಕ್ ಮುಂಭಾಗದಿಂದ ಯೋಧರ ಸ್ಮಾರಕದವರೆಗೆ ಮೌನ ಮೆರವಣಿಗೆ ನಡೆಯಿತು. ಬಳಿಕ ಗಣ್ಯರು ಸ್ಮಾರಕದಲ್ಲಿ ಪುಷ್ಪಾರ್ಚನೆ ಮಾಡಿ, ಮೌನ ಪ್ರಾರ್ಥನೆ ನಡೆಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

silent_solidarty_march_6 silent_solidarty_march_7

ನಿವೃತ್ತ ಯೋಧರ ಸಂಘದ ಅಧ್ಯಕ್ಷ ವಿಕ್ರಂ ದತ್ತ , ಸಂಘಟಕ ಸೈಫ್ ಸುಲ್ತಾನ್ ಸೈಯದ್, ಡಿಸಿಪಿ (ಅಪರಾಧ ಮತ್ತು ಸಂಚಾರ) ಡಾ.ಸಂಜೀವ್ ಎಂ.ಪಾಟೀಲ್, ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ, ಸಿಒಡಿಪಿ ನಿರ್ದೇಶಕ ಓಸ್ವಾಲ್ಡ್ ಮೊಂತೆರೊ, ರಶೀದ್ ವಿಟ್ಲ, ರಿಯಾಝ್, ಸಲೀಂ, ಉಮರ್ ಯು.ಎಚ್., ಶಿವರಾಜ್ ಶೆಟ್ಟಿ ಕೊಳಂಬೆ, ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎಸ್.ಎಂ.ಫಾರೂಕ್, ವಾಲ್ಟರ್ ಜೆ.ಮೊಬಿನ್, ಝುಬೇರ್ ವಿಟ್ಲ, ಅಬೂಬಕರ್, ಇಕ್ಬಾಲ್ ಸಿಂಗ್, ನಿವೃತ್ತ ಯೋಧರಾದ ಭಗವಾನ್ ಶೆಟ್ಟಿ, ದೀಪಕ್ ಅಡ್ಯಂತಾಯ, ಹವಾಲ್ದಾರ್ ಮುಹಮ್ಮದ್ ಕೆ., ಹವಾಲ್ದಾರ್ ಅಬ್ಬಾಸ್ ಅಲ್ಲದೆ, ದ.ಕ. ಜಿಲ್ಲೆಯ ಅಹಿಂದ, ಅಲ್ ಹಖ್ ಫೌಂಡೇಶನ್, ಬಂಟರ ಯಾನೆ ನಾಡವರ ಮಾತೃ ಸಂಘ, ಕ್ಯಾಥಲಿಕ್ ಡಯಾಸಿಸ್ ಮಂಗಳೂರು, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ), ಹಿದಾಯ ಫೌಂಡೇಶನ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ, ಹೋಪ್ ಫೌಂಡೇಶನ್, ಜೈನ್ ಸಮಿತಿ ಮಂಗಳೂರು, ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನಲ್ ಸೊಸೈಟಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಮಿಶನ್ ನೆಟ್ವರ್ಕ್, ಕೆಕೆಎಂಎ, ಎಂ.ಫ್ರೆಂಡ್ಸ್, ಮೊಗವೀರ ಮಹಾಜನ ಸಂಘ, ಮುಸ್ಲಿಂ ಲೇಖಕರ ಸಂಘ, ಶ್ರೀ ಗುರು ಸಿಂಗ್ ಸಭಾ ಸೊಸೈಟಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಯುವ ವಾಹಿನಿ ಕೇಂದ್ರ ಸಮಿತಿ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.