ಕರಾವಳಿ

ಯುವತಿ ಮಾನಭಂಗಕ್ಕೆ ಯತ್ನಿಸಿದ ಯುವಕನ ಅರೆಸ್ಟ್

Pinterest LinkedIn Tumblr

img-20160916-wa0007

ಉಡುಪಿ: ಯುವತಿಯೋರ್ವಳ ಮಾನಭಂಗಕ್ಕೆ ಯತ್ನಿಸಿದ ಯುವಕನೋರ್ವನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಮುಲ್ಕಿ ಚಿತ್ರಪುವಿನ ನಿವಾಸಿ ಅಭಿಷೇಕ್(25) ಬಂಧಿತ ಆರೋಪಿ.

ಘಟನೆ ವಿವರ:ಕಾಪು ಮಾರಿಗುಡಿ ಮುಂಭಾಗದಲ್ಲಿನ ಕಟ್ಟಿಯಂಗಡಿ ಬಳಿ ಗುರುವಾರ ರಾತ್ರಿ ಆರೋಪಿ ಅಭಿಷೇಕ್ ಯುವತಿಯೋರ್ವಳ ಮಾನಭಂಗಕ್ಕೆ ಯತ್ನ ನಡೆಸಿದ್ದ. ಭಯಗೊಂಡ ಯುವತಿ ಕಿರುಚಾಡಿದಾಗ ಯುವಕ ಆಕೆಯನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಯುವತಿ ನಡೆದ ವಿಚಾರವನ್ನು ಎಲ್ಲರಿಗೂ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಳು.

ಯುವತಿ ನೀಡಿದ ದೂರಿನನ್ವಯ ಕಾಪು ಕೊಪ್ಪಲಂಗಡಿಯಲ್ಲಿ ಯುವಕನನ್ನು ಬಂಧಿಸಲಾಗಿದೆ.

ಕಾಪು ಠಾಣೆ ಪಿಎಸ್ಸೈ ಜಗದೀಶ್ ರೆಡ್ಡಿ ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದರು.

ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.