ಕರಾವಳಿ

ಬಿಜೆಪಿ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ನಿವೃತ್ತ ಅಧ್ಯಾಪಕಿ ಶ್ರೀಮತಿ ಉಷಾರಿಗೆ ಗೌರವ ಸಮ್ಮಾನ

Pinterest LinkedIn Tumblr

bjp_usha-snmana_1

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಂಗಳೂರು ಬಜಾಲ್ ನ ನಿವಾಸಿ ಹಿರಿಯ ನಿವೃತ್ತ ಅಧ್ಯಾಪಕಿ ಶ್ರೀಮತಿ ಉಷಾರವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಶ್ರೀಮತಿ ಉಷಾರವರು ಆದರ್ಶ ವಿದ್ಯಾರ್ಥಿ ನಿಲಯ ಪಡೀಲ್‌ನಲ್ಲಿ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅನೇಕ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ, 2006 ಏಪ್ರಿಲ್ ನಲ್ಲಿ ಪುಂಜಾಲಕಟ್ಟೆಯಲ್ಲಿ ಸಿ.ಆರ್.ಪಿ.ಯಾಗಿ ಬಡ್ತಿ ಹೊಂದಿದರು. ಸುಮಾರು 40 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ.

bjp_usha-snmana_2

ಕಾರ್ಯಕ್ರಮದ ಸ್ವಾಗತವನ್ನು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮ ರಾವ್ ನೆರವೇರಿಸಿದರು. ಶಿಕ್ಷಕಿ ಶ್ರೀಮತಿ ಉಷಾರವರ ಬಗ್ಗೆ ಸ್ವವಿವರವನ್ನು ವಿದ್ಯಾ ನಾಗರಾಜ್ ಹೇಳಿದರು. ಕಾರ್ಯದರ್ಶಿ ಹರಿಣಿ ವಿಜೇಂದ್ರರವರು ಧನ್ಯವಾದಗೈದರು.

ಈ ಕಾರ್ಯಕ್ರಮದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ್‌ಚಂದ್ರ ಶೆಟ್ಟಿ, ಮಂಡಲ ಕಾರ್ಯದರ್ಶಿ ಶ್ರೀ ಅನಿಲ್ ರಾವ್, ದಕ್ಷಿಣ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ದೇವೋಜಿ ರಾವ್, ಪಕ್ಷದ ಹಿರಿಯರಾದ ಶ್ರೀಮತಿ ಪುಷ್ಪಲತಾ ಗಟ್ಟಿ, ಬೆಂಗ್ರೆ ವಾರ್ಡಿನ ಮನಪಾ ಸದಸ್ಯೆ ಮೀರಾ ಕರ್ಕೇರಾ, ಮಹಿಳಾ ಮೋರ್ಚಾ ಅಧ್ಯಕ್ಷ್ಯೆ ಶ್ರೀಮತಿ ಮಂಜುಳಾ ರಾವ್, ಪ್ರಧಾನ ಕಾರ್ಯದರ್ಶಿ ಪೂರ್ಣಿಮ ರಾವ್ ಮತ್ತಿತರರು ಉಪಸ್ಥಿತರಿದ್ದರು.

Comments are closed.