ಕರಾವಳಿ

ಕುಂದಾಪುರ: ಅಪ್ರಾಪ್ತ ಬಾಲಕಿಗೆ ಅಪ್ರಾಪ್ತನಿಂದ ಲೈಂಗಿಕ ದೌರ್ಜನ್ಯ: ಪೋಕ್ಸೋ ಕಾಯ್ದೆಯಡಿ ಆರೋಪಿ ಬಾಲಕ ಅರೆಸ್ಟ್

Pinterest LinkedIn Tumblr

shankaranarayana-pocso-minor-arrested

ಕುಂದಾಪುರ: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೇಲೆ ಅವಳದೇ ಮನೆ ಸಮೀಪದ ಅಪ್ರಾಪ್ತ ವಯಸ್ಸಿನ ಯುವಕನೋರ್ವ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವೆಯ ಗ್ರಾಮವೊಂದರಲ್ಲಿ ಗುರುವಾರ ಈ ಘಟನೆ ನಡೆದಿದ್ದು 5 ವರ್ಷ ಪ್ರಾಯದ ಸಂತ್ರಸ್ತ ಬಾಲಕಿಯ ಪೋಷಕರು ಠಾಣೆಗೆ ದೂರು ನೀಡಿದ್ದಾರೆ.ಬಾಲಕಿ ಪೋಷಕರು ನೀಡಿದ ದೂರಿನನ್ವಯ ಅದೇ ಗ್ರಾಮದ ಹಾಗೂ ಬಾಲಕಿ ಮನೆಯ ಸಮೀಪದ ನಿವಾಸಿ 14 ವರ್ಷ ಪ್ರಾಯದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಮನೆ ಸಮೀಪದ ಶಾಲೆಯೊಂದರಲ್ಲಿ ಒಂದನೇ ತರಗತಿ ಓದುತ್ತಿದ್ದ ಬಾಲಕಿಗೆ ಗುರುವಾರ ರಜೆ ಇದ್ದ ಕಾರಣ ಆಕೆ ಮನೆಯಲಿಯೇ ಇದ್ದಳು ಎನ್ನಲಾಗಿದೆ. ಈ ಸಂದರ್ಭ ಸಮಯ ಕಾದು ಆಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಲ್ಲಿಗೆ ಬಂದ ಆರೋಪಿ ಬಾಲಕ ಆಕೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದಿದ್ದು ಆಕೆ ಬಳಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಆಕೆಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆಂದು ಆರೋಪಿಸಲಾಗಿದೆ. ಆದರೇ ಇದ್ಯಾವುದು ತಿಳಿಯದ ಆಕೆ ಪುನಃ ಮನೆಗೆ ವಾಪಾಸ್ಸಾಗಿದ್ದು ಆಕೆ ಸ್ವಭಾವದಲ್ಲಿ ಕೊಂಚ ಏರುಪೇರಾಗಿದ್ದು ಮಂದವಾಗಿದ್ದಳು ಎನ್ನಲಾಗಿದೆ. ಸಂತ್ರಸ್ತ ಬಾಲಕಿ ತಾಯಿ ರಾತ್ರಿ ಬಾಲಕಿಗೆ ಸ್ನಾನ ಮಾಡಿಸುವ ವೇಳೆ ಕೆಲವು ಭಾಗಗಳಲ್ಲಿ ಗಾಯದ ಗುರುತುಗಳು ಗೋಚರವಾಗಿದ್ದು ಆಕೆ ತಾಯಿ ಬಾಲಕಿಯನ್ನು ವಿಚಾರಿಸುವ ವೇಳೆ ನಡೆದ ಸಂಗತಿ ಬಾಯ್ಬಿಟ್ಟಿದ್ದಾಳೆ.

ಸಂತ್ರಸ್ತ ಬಾಲಕಿ ಪೋಷಕರಿಗೆ ನೀಡಿದ ಮಾಹಿತಿಯಂತೆ ಪೋಷಕರು ಶಂಕರನಾರಾಯಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಅರೋಪಿ ಬಾಲಕನ ವಿರುದ್ಧ ದೂರು ನೀಡಿದ್ದಾರೆ. ಅವರು ನೀಡಿದ ದೂರಿನಂತೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇಬ್ಬರನ್ನು ವೈದ್ಯಕೀಯ ತಪಸಣೆಗೊಳಪಡಿಸಲಾಗಿದ್ದು, ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.