ರಾಷ್ಟ್ರೀಯ

ಕೇವಲ 6 ಸಾವಿರಕ್ಕೆ ನವಜಾತ ಶಿಶುವಿನ ಮಾರಾಟ

Pinterest LinkedIn Tumblr

baby

(ಸಾಂಧರ್ಬಿಕ ಚಿತ್ರ )  ಜಜ್ಪುರ್ ಒಡಿಶಾ: ನವಜಾತ ಹೆಣ್ಣು ಮಗುವೊಂದನ್ನು 6 ಸಾವಿರಕ್ಕೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರಣಪುರ್ ಗ್ರಾಮದ ಲತಾ ರಾಣಾ (28) ಮತ್ತು ಬೈಕುಂಠ ರಾಣಾ(35) ಅವರು ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ರಾಣಾ ದಂಪತಿಗೆ ಈಗಾಗಲೇ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ‘ಬಡತನ ಕಾರಣ ಮಕ್ಕಳನ್ನು ಸಾಕುವುದು ಕಷ್ಟವಾಗುತ್ತಿದೆ. ಹೀಗಾಗಿ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ನೀಡಲಾಗಿದೆ. ಮಗುವನ್ನು ಮಾರಾಟ ಮಾಡಿಲ್ಲ’ ಎಂದು ಲತಾ ಮತ್ತು ಬೈಕುಂಠ ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ಸಮಗ್ರವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Comments are closed.