ಕರಾವಳಿ

ಫೇಸ್‌ಬುಕ್‌‌ನಲ್ಲಿ ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಬರಹ ಫೋಸ್ಟ್ : ಜಬ್ಬಾರ್ ಬಿ.ಸಿ.ರೋಡ್ ವಿರುದ್ಧ ವ್ಯಾಪಕ ಆಕ್ರೋಷ

Pinterest LinkedIn Tumblr

Jabbar_Facebook_Criminal_1

ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಹಾಗೂ ದೇವಸ್ಥಾನದ ಬಗ್ಗೆ ಮತ್ತು ಇತರ ಹಿಂದೂ ದೇವರುಗಳನ್ನು ಕಾರ್ಟೂನ್‌ನಂತೆ ಚಿತ್ರಿಸಿ ಫೇಸ್‌ಬುಕ್‌ ಹಾಗೂ ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಶಿರೋನಾಮೆ ಪ್ರಕಟಿಸುವ ಮೂಲಕ ಮತೀಯ ಭಾವನೆ ಕೆರಳಿಸಿ ಸಮಾಜದಲ್ಲಿ ಕೋಮು ಸಾಮರಸ್ಯ ಕದಡುತ್ತಿರುವ ಪ್ರಕರಣದ ಬಗ್ಗೆ ಜಬ್ಬಾರ್ ಬಿ.ಸಿ.ರೋಡ್ ಎಂಬಾತನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ ಜಬ್ಬಾರ್ ಬಿ.ಸಿ.ರೋಡ್ ಎಂಬಾತನ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ದೇವಸ್ಥಾನದ ಭಕ್ತರು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಆ. 29ರಂದು ಸಾಮಾಜಿಕ ಜಾಲ ತಾಣದಲ್ಲಿ “ಜಬ್ಟಾರ್‌’ ಎಂಬಾತನ ಹೆಸರಲ್ಲಿ ಕೋಮು ಭಾವನೆ ಪ್ರಚಾರದ ಅವಹೇಳನಧಿಕಾರಿ ಪ್ರಕಟನೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ನಿರ್ದೇಶನದಂತೆ ಬಂಟ್ವಾಳ ನಗರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಣ್ಣಿರಿಸಿದ್ದರು. ಇದೇ ಪ್ರಕರಣದ ಬಗ್ಗೆ ಬರಿಮಾರು ನಿವಾಸಿ ಗುರುರಾಜ್‌ ಆಳ್ವ ಅವರು ನಗರ ಠಾಣೆ ಪೊಲೀಸರಿಗೆ ಪ್ರತ್ಯೇಕ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ.

Jabbar_Facebook_Criminal_2

Jabbar_Facebook_Criminal_4

ಹಲವು ಹೆಸರುಗಳಲ್ಲಿ ಪ್ರಕಟ :

ಬಿ.ಸಿ. ರೋಡ್‌ನ‌ ಜಬ್ಟಾರ್‌ ಸಹಿತ ಅಜ್ಮಿ ಇಮ್ರಾನ್‌, ಗೌಡ ಮಹೇಶ್‌, ಅಮೀರ್‌ ಅಮ್ಮಿ, ಮನ್ಸೂರ್‌ ಅಮಾನ್‌, ಟೈಗರ್‌, ಮುಜೈನ್‌ ಮಂಗಳೂರು, ಶೇಖ್‌ ಷಾ, ರಾಮ ಲಕ್ಷ್ಮಣ, ಶಕ್ಕುಶೈನ್‌, ಮುಸ್ಲಿಂ ಮಂಗಳೂರು ಮತ್ತಿತರ ಹೆಸರಿನಲ್ಲಿ ಮತಾಂಧ ವ್ಯಕ್ತಿಗಳು ಫೇಸ್‌ಬುಕ್‌ ನಕಲಿ ಖಾತೆ ತೆರೆದು ಶ್ರೀರಾಮ, ಸೀತೆ, ಹನುಮ, ಗಣಪತಿ, ಶ್ರೀಕೃಷ್ಣ, ಲಕ್ಷ್ಮೀ, ಕಾಳಿ, ಮಹಿಷಮರ್ದಿನಿ, ದುರ್ಗಾಪರಮೇಶ್ವರಿ ಮತ್ತಿತರ ಹಿಂದೂ ದೇವರ ಭಾವಚಿತ್ರವನ್ನು ಅಶ್ಲೀಲವಾಗಿ ಚಿತ್ರಿಸಿ ಅನಾಗರಿಕವಾಗಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಟಿಪ್ಪಣಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಹಿತ ಹಿಂದೂ ನಾಯಕರ ಅವಹೇಳನ :

ಇನ್ನೊಂದೆಡೆ ಭಾರತ ಮಾತೆ ಚಿತ್ರವನ್ನು ವಿಕೃತವಾಗಿ ಚಿತ್ರಿಸಿ ಅವಹೇಳನಕಾರಿ ಟಿಪ್ಪಣಿ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ವಿವಿಧ ಹಿಂದೂ ನಾಯಕರನ್ನು ಕೂಡ ಅವಹೇಳನ ಮಾಡಿರುವುದು ಕಂಡು ಬಂದಿದೆ. ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಸಮಾಜದಲ್ಲಿ ಕೋಮು ಸೌಹಾರ್ದ ಕೆಡಿಸುವ ಹುನ್ನಾರವೂ ಇದರಲ್ಲಿ ಅಡಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದುದ್ದರಿಂದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಪೊಲೀಸ್‌ ಆಯುಕ್ತರಿಗೆ ದೂರು:

ಹಿಂದೂ ದೇವರನ್ನು ನಿಂದಿಸಿರುವ ಜಬ್ಟಾರ್‌ ವಿರುದ್ಧ ಕಠಿನ ಕ್ರಮಕ್ಕೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದಲೂ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌, ಪೊಲೀಸ್‌ ಆಯುಕ್ತ ಚಂದ್ರಶೇಖರ್‌, ಎಸ್ಪಿ ಭೂಷಣ್‌ ಬೊರಸೆ ಹಾಗೂ ಇತರ ಠಾಣಾ ನಿರೀಕ್ಷಕರಿಗೆ ದೂರು ಸಲ್ಲಿಸಲಾಗಿದೆ.

ಈ ರೀತಿ ಕರಾವಳಿ ಜಿಲ್ಲೆಯ ಕೋಮು ಸಾಮಾರಸ್ಯಕ್ಕೆ ಕೆಡುಕುನ್ನುಂಟು ಮಾಡುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಜಬ್ಬಾರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳ ಬೇಕು ಎಂದು ಆಗ್ರಹಿಸಿ ಕರಾವಳಿ ಸಾಂಸ್ಕೃತಿಕ ಪರಿಷತ್‍ನ ಸಂಚಾಲಕರಾದ ಸತೀಶ್ ಕುಂಪಲ ಹಾಗೂ ಇತರ ಸದಸ್ಯರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

Comments are closed.