ಕರಾವಳಿ

ಯಾವ ರೀತಿ ಮಲಗುವ ಭಂಗಿ ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

Sleep_More

ಮಂಗಳೂರು: ನೀವು ಮಲಗುವ ಭಂಗಿ ನಿಮ್ಮ ಗುಣ ಹೇಗಿದೆ ಅಂತ ಹೇಳುತ್ತೆ ಅಂತ ಹೇಳುವ ಲೇಖನ ಖಂಡಿತ ಇದಲ್ಲ. ಇದು ಪಕ್ಕಾ ಸೈಂಟಿಫಿಕ್ ಕಾರಣಗಳನ್ನು ತಿಳಿಯುವ ಸಮಯ. ಪ್ರತಿಯೊಬ್ಬರದ್ದೂ ಮಲಗುವ ಭಂಗಿ ಒಂದೊಂದು ರೀತಿ. ಒಂದು ಇಡೀ ರಾತ್ರಿ ಹಲವು ರೀತಿಯಲ್ಲಿ ನಾವು ಮಲಗಿರ್ತೀವಿ. ನಮ್ಮ ಮಲಗುವ ಭಂಗಿ ನಮಗೇ ಗೊತ್ತಿಲ್ಲದಂತೆ ನಿದ್ದೆಯ ಮಂಪರಿನಲ್ಲಿ ಬದಲಾಗಿರುತ್ತೆ. ಆದರೂ ನಿಮಗೆ ತಿಳಿದಿರುವಂತೆ ನೀವು ಮಲಗುವ ಭಂಗಿ ಯಾವುದು ಗಮನಿಸಿಕೊಳ್ಳಿ. ಅದರ ಪ್ರಕಾರ ನಿಮ್ಮ ಆರೋಗ್ಯಕ್ಕೆ ನೀವು ಮಲಗುವ ಭಂಗಿಯಿಂದ ಆಗುವ ಒಳಿತು ಮತ್ತು ಕೆಡುಕಿನ ಬಗ್ಗೆ ಅರಿಯಿರಿ. ಹಾಗಂತ ನಿಮ್ಮ ಮಲಗುವ ಭಂಗಿ ನಿಮ್ಮ ಅನಾರೋಗ್ಯಕ್ಕೆ ನಾಂದಿ ಬರೆಯುತ್ತೆ ಅಂತ ಖಂಡಿತ ನಾವು ಹೇಳೋದಿಲ್ಲ. ಇದು ಜಸ್ಟ್ ನಿಮ್ಮ ಮಾಹಿತಿಗಾಗಿ ಅಷ್ಟೇ.

ಒಬ್ಬೊಬ್ಬರ ನಿದ್ದೆಯ ಸ್ವರೂಪ ಒಂದೊಂದು ರೀತಿ ಇರುತ್ತೆ. ಪ್ರತಿಯೊಬ್ಬ ವ್ಯಕ್ತಿಯೂ ನಿದ್ದೆಯಲ್ಲಿ ಉಸಿರಾಡುವ ಶವದಂತೆಯೇ ಸರಿ. ಆದ್ರೆ ಆ ರೀತಿಯ ನಿದ್ದೆ ಪ್ರತಿಯೊಬ್ಬರಿಗೂ ಅತ್ಯಗತ್ಯವಾದದ್ದು ಮತ್ತು ಆತನ ಆರೋಗ್ಯಕ್ಕೆ ಹಿತವಾಗಿರುವಂತದ್ದು ಅನ್ನೋದನ್ನು ಮರೆಯೋಹಾಗಿಲ್ಲ. ಯಾವುದಕ್ಕೂ ನಿಮ್ಮ ಮಲಗುವ ಭಂಗಿಯ ಪರಿಶೀಲನೆ ಮಾಡಿಕೊಳ್ಳಿ.

ಬ್ಯಾಕ್ ಪೊಸಿಷನ್ (ಅಂಗಾತ ಮಲಗುವುದು)
ಒಳ್ಳೇದು: ಕುತ್ತಿಗೆ ಮತ್ತು ಬೆನ್ನಿನ ನೋವನ್ನು ಕಡಿಮೆ ಮಾಡುವ ಭಂಗಿ ಇದು. ತಲೆ, ಕುತ್ತಿಗೆ, ಮತ್ತು ಬೆನ್ನಿನ ಮೂಳೆಗಳು ಈ ಭಂಗಿಯಲ್ಲಿ ನ್ಯೂಟ್ರಲ್ ಪೊಸಿಷನ್ ನಲ್ಲಿರೋದ್ರಿಂದ, ಯಾವುದೇ ರೀತಿಯ ಮೂಳೆಗಳ ಬಾಗುವಿಕೆ ಇರೋದಿಲ್ಲ.ಜೊತೆಗೆ ಆಸಿಡ್ ರಿಪ್ಲೆಕ್ಸ್ ಕಡಿಮೆ ಮಾಡಲು ಕೂಡ ಈ ಭಂಗಿ ನಿಮಗೆ ನೆರವಾಗಲಿದೆ. ನೆರಿಗೆಗಳನ್ನು ತಡೆಯಲು ಸಹಕಾರಿಯಾಗಿರುತ್ತೆ. ಮುಖದಲ್ಲಿ ಯಾವುದೇ ನರಗಳು ಈ ರೀತಿ ಮಲಗುವಿಕೆಯಿಂದ ತಳ್ಳಲ್ಪಡದೇ ಇರುವುದರಿಂದಾಗಿ ನೆರಿಗೆಗಳನ್ನು ತಡೆಯಬಹುದು ಅನ್ನೋದು ಸೈಂಟ್ ಲೂಯಿಸ್ ಯುನಿವರ್ಸಿಟಿಯ ಚರ್ಮರೋಗ ತಜ್ಞರ ಅಭಿಪ್ರಾಯ..ಇನ್ನು ಸ್ತನಗಳ ಆರೋಗ್ಯಕ್ಕಾಗಿ ಕೂಡ ಅಂಗಾತ ಮಲಗುವಿಕೆ ಸಹಾಯ ಮಾಡಲಿದೆ.

ಕೆಟ್ಟದ್ದು : ಅಂಗಾಂತ ಮಲಗುವಿಕೆಯಿಂದಾಗಿ ಗೊರಕೆಯ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತೆ.

ಸೈಡ್ ಪೊಸಿಷನ್ (ಮಗ್ಗುಲಿನಲ್ಲಿ ಮಲಗುವಿಕೆ)
ಒಳ್ಳೆದು- ಕುತ್ತಿಗೆ ಮತ್ತು ಬೆನ್ನುನೋವು ನಿವಾರಣೆಗೆ ಸಹಕಾರಿ ಇದು ಸಹಾಯ ಮಾಡಲಿದೆ. ಆಸಿಡ್ ರಿಫ್ರೆಕ್ಸ್ ಕಡಿಮೆ ಮಾಡಲು ಕೂಡ ಇದು ನೆರವಾಗಲಿದೆ. ಈ ಪೊಸಿಷನ್ ನಲ್ಲಿ ಗೊರಕೆ ಕಡಿಮೆ ಇರುತ್ತೆ. ಪ್ರಗ್ನೆಂಟ್‌ ಮಹಿಳೆಯರು ಮಲಗಲು ಅತ್ಯುತ್ತಮವಾದ ಪೊಸಿಷನ್ ಇದು. ಅದ್ರಲ್ಲೂ ಎಡ ಮಗ್ಗುಲಿನಲ್ಲಿ ಮಲಗುವುದರಿಂದಾಗಿ ನಿಮ್ಮ ಮತ್ತು ನಿಮ್ಮ ಮಗುವಿಗೆ ಸರಿಯಾದ ರೀತಿಯಲ್ಲಿ ರಕ್ತಸಂಚಾರವಾಗಲು ನೆರವಾಗುತ್ತೆ.

ಕೆಟ್ಟದ್ದು – ಯಾವುದೇ ಮಗ್ಗುಲಿನಲ್ಲಿ ಮಲಗುವಿಕೆ ಚರ್ಮ ಮತ್ತು ಸ್ತನಗಳ ಆರೋಗ್ಯಕ್ಕೆ ಹಿತವಾದ ಪೊಸಿಷನ್ ಅಲ್ಲ. ಮುಖದ ನೆರಿಗೆಗಳಿಗೆ ಕಾರಣವಾಗಬಹುದಾದ ಭಂಗಿ ಇದು ಅನ್ನೋ ಮಾತು ಕೂಡ ಕೇಳಿಬರುತ್ತೆ. ಆದ್ರೆ ಸರಿಯಾದ ರೀತಿಯಲ್ಲಿ ದಿಂಬು ಮತ್ತು ಹಾಸಿಗೆ ಬಳಸಿದ್ರೆ ಯಾವುದೇ ಸಮಸ್ಯೆ ಆಗೋದಿಲ್ಲ.

ಫೀಟಲ್ ಪೊಸಿಷನ್ (ಮಗುವಿನಂತೆ ಮಲಗುವಿಕೆ)
ಒಳ್ಳೇದು – ಕಡಿಮೆ ಗೊರಕೆ ಹೊಡೆಯುತ್ತಾರೆ, ಇದು ಕೂಡ ಒಂದು ರೀತಿಯ ಮಗ್ಗುಲಿನಲ್ಲಿ ಮಲಗುವಿಕೆಯೇ ಆಗಿರೋದ್ರಿಂದ ಬಸುರಿಯಾದವರು ಹೀಗೆ ಮಲಗುವುದು ಉತ್ತಮ. ಕಾಲುಗಳು ಕೂಡ ರಿಲ್ಯಾಕ್ಸ್ ಅಂತ ಅನ್ನಿಸಬಹುದು..

ಕೆಟ್ಟದ್ದು – ಕುತ್ತಿಗೆ ಮತ್ತು ಬೆನ್ನು ನೋವಿಗೆ ಕಾರಣವಾಗುವ ಸಾಧ್ಯತೆ ಇರುತ್ತೆ. ಚರ್ಮದಲ್ಲಿ ನೆರಿಗೆಗಳಾಗಲು ಸಹಾಯ ಮಾಡುವ ಪೊಸಿಷನ್ ಇದು. ದೇಹ ಶ್ರಿಂಕ್ ಆದಂತೆ ಅಂದ್ರೆ ಮುದುಡಿಕೊಂಡಂತೆ ಮಲಗುವ ಭಂಗಿಯಾಗಿರೋದ್ರಿಂದ ಸ್ತನಗಳ ಆರೋಗ್ಯಕ್ಕೆ ಅಷ್ಟೇನು ಹಿತವಲ್ಲ. ಕುತ್ತಿಗೆ ಮತ್ತು ತಲೆಗೆ ಅತ್ಯುತ್ತಮವಾಗಿ ಸಪೋರ್ಟ್ ನೀಡುವಂತ ದಿಂಬುಗಳನ್ನು ಈ ರೀತಿ ಮಲಗುವವರು ಆದ್ಯತೆ ನೀಡಿ ಖರೀದಿಸಿ ಬಳಸುವುದು ಸೂಕ್ತ. ಎಡ ಮಗ್ಗಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು..!

ಬೋರಲು ಮಲಗುವಿಕೆ ಇಲ್ಲವೇ ಹೊಟ್ಟೆಯಡಿ ಮಾಡಿ ಮಲಗುವವರು
ಒಳ್ಳೆಯದು – ಗೊರಕೆ ಕಡಿಮೆ ಇರುತ್ತೆ. ಬೇಗನೆ ನಿದ್ದೆ ಹತ್ತುವ ಸಾಧ್ಯತೆ ಹೆಚ್ಚು.
ಕೆಟ್ಟದ್ದು – ನಿಮ್ಮ ಮಾಂಸಖಂಡಗಳಿಗೆ ಮತ್ತು ಮೂಳೆಗಳ ಜಾಯಿಂಟ್ಗೆ ಹೆಚ್ಚು ಒತ್ತಡ ಹೇರುವಂತೆ ಮಾಡುತ್ತೆ. ಇದು ನಿಮ್ಮ ನರವ್ಯೂಹಕ್ಕೆ ಹಿಂಸೆ ನೀಡಿ ನೋವಿಗೆ ಕಾರಣವಾಗಬಹುದು. ಕೈಕಾಲು ಹಿಡಿದುಕೊಂಡಂತೆ ಆಗುವುದು, ಮರಗಟ್ಟುವುದು,ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.

Comments are closed.