ಕರಾವಳಿ

ದೇಹದ  ಕಲ್ಮಷಗಳನ್ನು ಹೊರಹಾಕಲು ಅಲೋವೆರಾ ಅತ್ಯಂತ ಪರಿಣಾಮಕಾರಿ 

Pinterest LinkedIn Tumblr

 

Aloe_Vera_pic

ಮಂಗಳೂರು: ಪ್ರತಿಯೊಬ್ಬರಿಗೂ ಅಂದವಾಗಿ, ಆರೋಗ್ಯವಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದಕ್ಕಾಗಿ ನಾನಾ ಸರ್ಕಸ್‍ಗಳನ್ನು ಮಾಡುತ್ತಿರುತ್ತಾರೆ. ಬಾಹ್ಯ ಸೌಂದರ್ಯಕ್ಕಾಗಿ ಮುಖಕ್ಕೆ ನಾನಾ ಬಗೆಯ ಕ್ರೀಮ್‍ಗಳು, ಮೈಬಣ್ಣಕ್ಕಾಗಿ ತರಹೇವಾರಿ ಜೆಲ್‍ಗಳನ್ನು ಬಳಸುತ್ತಿರುತ್ತಾರೆ. ಆದರೆ ದೇಹದ ಒಳಗಿನ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವುದಿಲ್ಲ.

ದೇಹದೊಳಗಿನ ನಾನಾ ರೀತಿಯ ಕಲ್ಮಶಗಳು ದೇಹದ ಬಾಹ್ಯ ಸೌದರ್ಯವನ್ನೂ, ಆರೋಗ್ಯವನ್ನು ಹಾಳುಮಾಡುತ್ತವೆ. ದೇಹದೊಳಗಿನ ಕಲ್ಮಶಗಳನ್ನು ಕಾಲಕಾಲಕ್ಕೆ ಹೊರಹಾಕದಿದ್ದರೆ ಅನೇಕ ರೀತಿಯ ಖಾಯಿಲೆಗಳಿಗೆ ಅವು ದಾರಿ ಮಾಡಿಕೊಡುತ್ತವೆ. ಈ ಎಲ್ಲ ಕಲ್ಮಷಗಳನ್ನು ಹೊರಹಾಕಲು ಅಲೋವೆರಾ(ಲೋಳೆರಸ) ಅತ್ಯಂತ ಪರಿಣಾಮಕಾರಿ ಔಷಧಿ. ಅದರ ಮಹ್ವತ್ವ ಏನೆಂಬುದನ್ನು ನಿಮಗೆ ಇಲ್ಲಿ ತಿಳಿಸಲಾಗಿದೆ. ಕೈಗಂಟಿಕೊಳ್ಳುವಂತಹ ಲೋಳೆ ಹೊಂದಿರುವ ಹಸಿರು ಬಣ್ಣದ ಎಲೆ ಅಲೋವೆರಾ.

ಅದು ನೋಡಲು ಕಂಡುಬರುವುದಕ್ಕಿಂತ ಹೆಚ್ಚಿನ ಗುಣಗಳನ್ನು ಹೊಂದಿದೆ. ಅಲೋವೆರಾವನ್ನು ಗಾಯ, ಸುಟ್ಟಗಾಯ ಮತ್ತು ಚರ್ಮದ ಸೋಂಕಿಗೆ ಬಳಸಲಾಗುತ್ತದೆ. ಅಲೋವೆರಾ ಜ್ಯೂಸ್‍ನಲ್ಲಿ ದೇಹಕ್ಕೆ ಅಗತ್ಯವಿರುವ ಅಗಾಧ ಪ್ರಮಾಣದ ಪೌಷ್ಠಿಕಾಂಶ, ಮಿನರಲ ಮತ್ತು ವಿಟಮಿನ್‍ಗಳಿವೆ.

ಅಲೋವೆರಾ ಜ್ಯೂಸ್ ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗಿದ್ದು, ಇದನ್ನು ದಿನದಲ್ಲಿ ಒಂದು ಸಲ ಕುಡಿಯಬೇಕು. ಆಲೋವೆರಾದಲ್ಲಿರುವ ಆಯಂಟಿಆಕ್ಸಿಡೆಂಟ್‍ಗಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಜ್ಯೂಸ್‍ನಲ್ಲಿ ಒಳ್ಳೆಯ ಪ್ರಮಾಣದ ಅಮಿನೋ ಆಯಸಿಡ್ ಮತ್ತು ಫ್ಯಾಟಿ ಆಯಸಿಡ್‍ಗಳನ್ನು ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು.

ಅಲೋವೆರಾ ಜ್ಯೂಸ್‍ನಲ್ಲಿರುವ ಹಲವಾರು ರೀತಿಯ ಪೌಷ್ಠಿಕಾಂಶಗಳು ದೇಹದಲ್ಲಿ ಹಾನಿಗೊಳಗಾಗಿರುವ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಸರಿಪಡಿಸಲು ನೆರವಾಗುತ್ತವೆ. ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹೊರಗಿನ ವಾತಾವರಣಕ್ಕೆ ದೇಹವು ಹೊಂದಿಕೊಳ್ಳುವಂತೆ ಮಾಡುತ್ತದೆ. ದೇಹಕ್ಕೆ ಅಗತ್ಯವಿರುವ ಮತ್ತು ಕಡಿಮೆಯಿರುವ ಕೆಲವೊಂದು ಪೌಷ್ಠಿಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ನಮ್ಮ ದೇಹದಲ್ಲಿರುವ ಕೆಲವೊಂದು ವಿಷಕಾರಿ ಅಂಶಗಳು ಚರ್ಮದ ಜೀವಕೋಶಗಳು, ದೇಹದ ವ್ಯವಸ್ಥೆಯ ಕಾರ್ಯನಿರ್ವಹಣೆ ಮತ್ತು ಅಂಗಾಂಗಗಳ ಕಾರ್ಯಚಟುವಟಿಕೆಗಳಿಗೆ ತೊಂದರೆ ಉಂಟುಮಾಡುತ್ತವೆ. ಮಾಲಿನ್ಯ, ಜಂಕ್ ಫುಡ್, ಅನಾರೋಗ್ಯಕರ ಜೀವನಶೈಲಿ, ಧೂಮಪಾನ ಮತ್ತು ಆಲ್ಕೋಹಾಲ ನಂತಹ ಕೆಲವೊಂದು ಕೆಟ್ಟ ಹವ್ಯಾಸಗಳು ವಿಷಕಾರಿ ಅಂಶಗಳ ಶೇಖರಣೆಗೆ ಪ್ರಮುಖ ಕಾರಣಗಳಾಗಿವೆ.

ಅಲೋವೆರಾದ ಆರೋಗ್ಯಕರ ಗುಣಗಳು :
ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ.
ಕೊಲೆಸ್ಟ್ರಾಲ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ರಕ್ತ ಶುದ್ಧೀಕರಣಗೊಳಿಸುತ್ತದೆ. ರಕ್ತದಲ್ಲಿ ಆಮ್ಲಜನಕದ ಉತ್ಪಾದನೆ ಹೆಚ್ಚಿಸುತ್ತದೆ.
ಉರಿಯೂತ ಮತ್ತು ಸಂಧಿವಾತ ಶಮನಗೊಳಿಸುತ್ತದೆ.
ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ ತಡೆಯುತ್ತದೆ
ಇತರ ಅಜೀರ್ಣಕಾರಿ ಕಾಯಿಲೆಗಳನ್ನು ಶಮನ ಗೊಳಿಸುತ್ತದೆ.
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತ್ತದೆ. ನೈಸರ್ಗಿಕವಾಗಿ ಖನಿಜಗಳು, ಜೀವಸತ್ವಗಳು, ಕಿಣ್ವಗಳನ್ನು ದೇಹಕ್ಕೆ ಪೂರೈಸುತ್ತದೆ.
ರಕ್ತದಲ್ಲಿನ ಸಕ್ಕರೆಅಂಶ ಸ್ಥಿರಗೊಳಿಸುತ್ತದೆ. ಡಯಾಬಿಟಿಸ್ ರೋಗಿಗಳಲ್ಲಿನ ಟ್ರೈಗ್ಲಿಸರೈಡ್ ಅನ್ನು ಕುಂಠಿತಗೊಳಿಸುತ್ತದೆ.

Comments are closed.