ಕರಾವಳಿ

ಮಳೆಯಾಗಲಿ ಎಂದು ಉಡುಪಿ ಕೃಷ್ಣನಿಗೆ ಪ್ರಾರ್ಥನೆ; ರಮ್ಯಾ ಹೇಳಿಕೆಗೆ ಅಪಾರ್ಥ ಕಲ್ಪಿಸಿದ್ದಾರೆ; ಗೃಹಸಚಿವ ಜಿ. ಪರಮೇಶ್ವರ್

Pinterest LinkedIn Tumblr

ಉಡುಪಿ: ಕೃಷ್ಣ ಜನ್ಮಾಷ್ಟಮಿಯ ಹಿನ್ನಲೆಯಲ್ಲಿ ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

paramesh

ಇದೇ ಸಂದರ್ಬದಲ್ಲಿ ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ಮಳೆಗಾಲ ಸದ್ಯದಲ್ಲೇ ಮುಗಿಯಲಿದೆ. ಆದ್ದರಿಂದ ಉತ್ತಮ ಮಳೆಯಾಗಲಿ ಎಂದು ಕೃಷ್ಣನಲ್ಲಿ ಬೇಡಿಕೊಂಡೆ ಎಂದು ಇದೇ ಸಂದರ್ಬದಲ್ಲಿ ತಿಳಿಸಿದ ಗೃಹ ಸಚಿವರು ಪೇಜಾವರ ಶ್ರೀಗಳೂ ಬರಗಾಲದ ಹಿನ್ನಲೆಯಲ್ಲಿ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ ಎಂದರು.

ರಮ್ಯಾ ಪಾಕಿಸ್ಥಾನದ ಕುರಿತು ಹೇಳಿಕೆಯ ವಿವಾದದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ರಮ್ಯಾ ಹೇಳಿಕೆಯ ಬಗ್ಗೆ ಅಪಾರ್ಥ ಕಲ್ಪಿಸಲಾಗಿದೆ. ಪ್ರಧಾನಮಂತ್ರಿಗಳೂ ಕೂಡಾ ಪಾಕಿಸ್ಥಾನದ ಪ್ರಧಾನಿಯವರನ್ನು ದೇಶಕ್ಕೆ ಕರೆಯಿಸಿ ಔದಾರ್ಯತೆ ತೋರಿದ್ದರು. ಪಕ್ಕದ ರಾಷ್ಟ್ರವಾದ ಕಾರಣ ನಾವು ಸಂಯಮದಿಂದ ಇರೋಣ ಎಂಬರ್ಥದಲ್ಲಿ ನಡುದುಕೊಂಡಿದ್ದರು. ಇಂತಹದೇ ಅರ್ಥದಲ್ಲಿ ರಮ್ಯಾ ಮಾತನಾಡಿರಬೇಕು ಎಂದು ಹೇಳಿದರು.

ಇನ್ನು ಮಂಗಳೂರನ್ನ ನರಕ ಎಂದು ಕರೆದಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮಂಗಳೂರಿನ ಬಗ್ಗೆ ನಾವು ಚೆನ್ನಾಗಿ ತಿಳಿದುಕೊಂಡಿದ್ದೇವೆ. ಬೆಂಗಳೂರು ಬಿಟ್ಟರೆ ಎರಡನೇ ವೇಗವಾಗಿ ಬೆಳೆಯುತ್ತಿರುವ ನಗರ ಮಂಗಳೂರು ಎಂದು ಮಾತನಾಡಿ ಪರಮೇಶ್ವರ್ ಅವರು ರಮ್ಯ ಹೇಳಿಕೆಯ ಕುರಿತು ತೇಪೆ ಹಾಕುವ ಕಾರ್ಯ ಮಾಡಿದರು.

Comments are closed.