ಕರಾವಳಿ

ನಂದ ಗೋಕುಲವಾಗಿ ಮಾರ್ಪಟ್ಟ ಕದ್ರಿ ಶ್ರೀ ಕ್ಷೇತ್ರ : ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಹರಿದು ಬಂದ ಕೃಷ್ಣ ಸಾಗಾರ

Pinterest LinkedIn Tumblr

Kalkura_Krishna_kadri_1

ಕಲ್ಕೂರ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದ ಮಹನೀಯರು.

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು, ಆಗಸ್ಟ್. 24:ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆ ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ಮೂರು ದಶಕಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಅಧ್ಯಕ್ಷತೆಯ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಆಯೋಜಿಸುತ್ತಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀ ಕೃಷ್ಣ ವೇಷ ಸ್ಪರ್ಧೆ’ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ನಡೆಯಿತು.

ರಾಷ್ಟ್ರ ಮಟ್ಟದ ಮಕ್ಕಳ ಉತ್ಸವವನ್ನು ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ ಉದ್ಘಾಟಿಸಿ, ಶುಭ ಕೋರಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಧಿಸ್ಥಾನದ ವೇ| ಮೂ| ಲಕ್ಷ್ಮಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.ಕದ್ರಿ ದೇವಸ್ಥಾನ ಅರ್ಚಕರಾದ ಪ್ರಭಾಕರ ಅಡಿಗ, ಲಕ್ಷ್ಮಿನಾರಾಯಣ ಅಡಿಗ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, “ಉದಯವಾಣಿ’ ಸಹ ಉಪಾಧ್ಯಕ್ಷ ಆನಂದ್‌ ಕೆ., ಪ್ರಮುಖರಾದ ಪ್ರೊ| ಎಂ.ಬಿ. ಪುರಾಣಿಕ್‌, ಕೆ.ಎಸ್‌. ಕಲ್ಲೂರಾಯ, ಕಿರಣ್‌ ಜೋಗಿ, ತಾರಾನಾಥ ಶೆಟ್ಟಿ, ಮಹೇಶ ಮೂರ್ತಿ, ವಿನಯ ಆಚಾರ್‌, ಮಟ್ಟಿ ಲಕ್ಷ್ಮಿನಾರಾಯಣ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ್‌ ಕಲ್ಕೂರ ಪ್ರಸ್ತಾವನೆಧಿಗೈದು ಸ್ವಾಗತಿಸಿದರು. ಸುಧಾಕರ ರಾವ್‌ ಪೇಜಾವರ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗಿನಿಂದ ಸಂಜೆ ವರೆಗೆ ಒಟ್ಟು 8 ವೇದಿಕೆಗಳಲ್ಲಿ 27 ವಿಭಾಗಗಳ ಸ್ಪರ್ಧೆ : ಎಲ್ಲಿ ನೋಡಿದರೂ ಮುದ್ದು ಕೃಷ್ಣ, ಬಾಲಕೃಷ್ಣ, ರಾಧಾ ಕೃಷ್ಣ, ಯಶೋಧೆ-ಕೃಷ್ಣ, ದೇವಕಿ ಕೃಷ್ಣ, ಯಶೋಧ ಕೃಷ್ಣ, ವಸುದೇವ ಕೃಷ್ಣ, ಯಕ್ಷಕೃಷ್ಣರೇ ತುಂಬಿದ್ದರು.ಇಂದಿನ ಮಟ್ಟಿಗೆ ಕದ್ರಿ ಮಂಜುನಾಥನ ಸನ್ನಿಧಿ ನಂದಗೋಕುಲವಾಗಿ ಮಾರ್ಪಟ್ಟಿತ್ತು. ಕಳೆದ ಮೂರು ದಶಕಗಳಿಂದ ಕಲ್ಕೂರ ಪ್ರತಿಷ್ಠಾನವು ಈ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಒಟ್ಟು 27 ವಿಭಾಗಗಳಲ್ಲಿ 8 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಸ್ಪರ್ಧೆ ನಡೆಯಿತು. ಈ ರಾಷ್ಟ್ರಮಟ್ಟದ ಮಕ್ಕಳ ಉತ್ಸವದಲ್ಲಿ ಸುಮಾರು 2500ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡರು.

Kalkura_Krishna_kadri_2 Kalkura_Krishna_kadri_3 Kalkura_Krishna_kadri_4 Kalkura_Krishna_kadri_5 Kalkura_Krishna_kadri_6 Kalkura_Krishna_kadri_7 Kalkura_Krishna_kadri_8 Kalkura_Krishna_kadri_9 Kalkura_Krishna_kadri_10 Kalkura_Krishna_kadri_11 Kalkura_Krishna_kadri_12 Kalkura_Krishna_kadri_13 Kalkura_Krishna_kadri_14 Kalkura_Krishna_kadri_15 Kalkura_Krishna_kadri_16 Kalkura_Krishna_kadri_17 Kalkura_Krishna_kadri_18 Kalkura_Krishna_kadri_19 Kalkura_Krishna_kadri_20

ಮಾತ್ರವಲ್ಲದೇ ಈ ಸಲ ವಿಶೇಷವಾಗಿ “ಶ್ರೀಕೃಷ್ಣ ಗಾನ ವೈಭವ” ಎಂಬ ಹೊಸ ವಿಭಾಗದಲ್ಲೂ ಸ್ಪರ್ಧೆ ನಡೆಯಿತು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಇಲ್ಲಿ ಪ್ರಶಸ್ತಿ ನಿಗದಿಯಾಗಿದ್ದು, ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀ ಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್ಭಗವದ್ಗೀತೆಯ ಪ್ರತಿಯನ್ನು ಸ್ಪರ್ಧಾಳುಗಳಿಗೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಪ್ರಧಾನ ವೇದಿಕೆಯಲ್ಲಿ ವಿವಿಧ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ, ರಸಪ್ರಶ್ನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರೋತ್ಸಾಹವನ್ನು ನೀಡಿದರು.

Kalkura_Krishna_kadri_21 Kalkura_Krishna_kadri_22 Kalkura_Krishna_kadri_23 Kalkura_Krishna_kadri_24 Kalkura_Krishna_kadri_25 Kalkura_Krishna_kadri_26 Kalkura_Krishna_kadri_27 Kalkura_Krishna_kadri_29 Kalkura_Krishna_kadri_30 Kalkura_Krishna_kadri_31 Kalkura_Krishna_kadri_32 Kalkura_Krishna_kadri_33 Kalkura_Krishna_kadri_34 Kalkura_Krishna_kadri_35 Kalkura_Krishna_kadri_36 Kalkura_Krishna_kadri_37 Kalkura_Krishna_kadri_38 Kalkura_Krishna_kadri_39 Kalkura_Krishna_kadri_40 Kalkura_Krishna_kadri_41 Kalkura_Krishna_kadri_43 Kalkura_Krishna_kadri_44 Kalkura_Krishna_kadri_45 Kalkura_Krishna_kadri_46 Kalkura_Krishna_kadri_47 Kalkura_Krishna_kadri_48 Kalkura_Krishna_kadri_49 Kalkura_Krishna_kadri_50 Kalkura_Krishna_kadri_51 Kalkura_Krishna_kadri_52 Kalkura_Krishna_kadri_53 Kalkura_Krishna_kadri_54 Kalkura_Krishna_kadri_55 Kalkura_Krishna_kadri_56 Kalkura_Krishna_kadri_57 Kalkura_Krishna_kadri_58 Kalkura_Krishna_kadri_59 Kalkura_Krishna_kadri_60 Kalkura_Krishna_kadri_61 Kalkura_Krishna_kadri_62 Kalkura_Krishna_kadri_63 Kalkura_Krishna_kadri_64 Kalkura_Krishna_kadri_65 Kalkura_Krishna_kadri_66 Kalkura_Krishna_kadri_67

Kalkura_Krishna_kadri_68 Kalkura_Krishna_kadri_69 Kalkura_Krishna_kadri_70 Kalkura_Krishna_kadri_71 Kalkura_Krishna_kadri_72 Kalkura_Krishna_kadri_73 Kalkura_Krishna_kadri_74 Kalkura_Krishna_kadri_75 Kalkura_Krishna_kadri_76 Kalkura_Krishna_kadri_77 Kalkura_Krishna_kadri_78 Kalkura_Krishna_kadri_79 Kalkura_Krishna_kadri_80

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಈ ಸ್ಪರ್ಧೆ ಆಯೋಜಿಸಿಕೊಂಡು ಬರಧಿಲಾಗಿದೆ. ಪುಟಾಣಿ ಮನಸ್ಸುಧಿಗಳಲ್ಲಿ ಶ್ರೀ ಕೃಷ್ಣನ ಸ್ವರೂಪ ಕಂಡುಕೊಳ್ಳುವ, ಆ ಮೂಲಕ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ವಿಶೇಷ ಪ್ರಯತ್ನ ನಡೆಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಶ್ರೀಕೃಷ್ಣ ವರ್ಣ ವೈಭವಚಿತ್ರ ರಚನಾ ಸ್ಪರ್ಧೆ

ಶ್ರೀಕೃಷ್ಣ ವೇಷಸ್ಪರ್ಧೆ ರಾಷ್ಟ್ರೀಯ ಮಕ್ಕಳ ಉತ್ಸವದ ಅಂಗವಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಇಂದು  ಚಿತ್ರರಚನಾ ಸ್ಪರ್ಧೆ ಜರಗಿತು. ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಶಿಶು (ಕೆ.ಜಿ. ವಿಭಾಗ), ಬಾಲ (1 ರಿಂದ 3ನೇ ತರಗತಿ), ಬಾಲ ಕಿಶೋರ (4ರಿಂದ 7ನೇ ತರಗತಿ) ಕಿಶೋರ (8ರಿಂದ 10ನೇ ತರಗತಿ), ತರುಣ (ಪಿಯುಸಿ/ತತ್ಸಮಾನ) ಮತ್ತು ಮುಕ್ತ ಸಾರ್ವಜನಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪ್ರಥಮ, ದ್ವಿತೀಯ, ತೃತೀಯ, ಬಹುಮಾನಗಳ ಜೊತೆಗೆ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಆಕರ್ಷಕ ಉಡುಗೊರೆ ಹಾಗೂ ಪ್ರಶಂಸಾ ಪತ್ರ ನೀಡಲಾಯಿತು.

ಶ್ರೀಕೃಷ್ಣ ಗಾನ ವೈಭವ ಸ್ಪರ್ಧೆ

ಶ್ರೀಕ್ಷೇತ್ರ ಕದ್ರಿಯಲ್ಲಿ ಕಲ್ಕೂರ ಪತ್ರಿಷ್ಠಾನದ ವತಿಯಿಂದ ಇಂದು ಜರಗಿದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ವಿನೂತನವಾದ ಶ್ರೀಕೃಷ್ಣ ಗಾನ ವೈಭವ ಸ್ಪರ್ಧೆ ಆಯೋಜಿಸಲಾಗಿತ್ತು.

ಕೃಷ್ಣನ ಕುರಿತಾದ ಜಾನಪದ, ಭಾವಗೀತೆ, ಭಕ್ತಿಗೀತೆಗಳನ್ನು ಹಾಡುವ ಸ್ಪರ್ಧೆ ಶ್ರೀಕೃಷ್ಣ ಗಾನ ವೈಭವ ೪ ವಿಭಾಗಗಳಲ್ಲಿ ನಡೆಯಿತು. ಶಿಶುವಿಭಾಗ (1ರಿಂದ 4ನೇ ತರಗತಿ) ಬಾಲವಿಭಾಗ (5, 6, 7ನೇ ತರಗತಿ) ಕಿಶೋರ ವಿಭಾಗ (8, 9, 10ನೇ ತರಗತಿ) ಹಾಗೂ ತರುಣ ವಿಭಾಗ (ಪಿಯುಸಿ/ಡಿಗ್ರಿ)ಗಳಲ್ಲಿ ಸ್ಪರ್ಧೆ ನಡೆಯಿತು.

Comments are closed.