ಉಡುಪಿ: ಈತನದು ಆರ್ಥಿಕವಾಗಿ ಬಡ ಕುಟುಂಬ, ಅನೇಕ ಉದ್ಯೋಗ ಮಾಡಿ ಜೀವನ ಸಾಗಿಸುತ್ತಿದ್ದ ಈತ ಮನೆಗೇ ಆಧಾರ ಸ್ತಂಭ. ಆದ್ರೆ ಆ ರಾತ್ರಿ ನಡೆದು ಹೋದ ಒಂದು ಘಟನೆ ಈತನನ್ನು ಯಮಲೋಕಕ್ಕೆ ಅಟ್ಟಿತು. ಮಾತ್ರ ಅಲ್ಲ ಈ ಮನೆ ಮಂದಿಯನ್ನ ಬೀದಿಪಾಲು ಮಾಡಿತು.. ಅಂದ ಹಾಗೆ ಆ ರಾತ್ರಿ ನಡೆದ ಘಟನೆಯಾದ್ರೂ ಏನು? ನಕಲಿ ಗೋ ರಕ್ಷಣೆಯ ಹೆಸರಿನಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಇಲ್ಲ ಎಂಬಂತೆ ಅಮಾನುಷವಾಗಿ
ವರ್ತಿಸಿದ್ರಾ ಹಿಂದೂ ಸಂಘಟನೆ? ಕ್ರೂರ ದಾಳಿಗೆ ಸತ್ತವ ಯಾರು ಗೊತ್ತಾ… ಈ ಎಲ್ಲಾ ಡೀಟೇಲ್ಸ್ ಇಲ್ಲಿದೆ ನೋಡಿ..

ಕರವಾಳಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪದೇ ಪದೇ ಸದ್ದು ಮಾಡ್ತಾನೆ ಇರುತ್ತೆ. ಗೋ-ಭಕ್ಷಣೆ, ಗೋ -ರಕ್ಷಣೆ ಹೆಸರಿನಲ್ಲಿ ಹೊಡೆದಾಟ ಮಾಮೂಲಾಗಿದೆ. ಗೋ ರಕ್ಷಣೆಯ ಹೆಸರಿನಲ್ಲಿ ಹಿಂದೂ ಸಂಘಟನೆಗಳು ಅಮಾಯಕರನ್ನು ದೌರ್ಜ್ಯನ್ಯ ಎಸಗುವ ಪ್ರಕರಣ ಅದೆಷ್ಟೋ ನಡೆದಿದೆ. ಆದ್ರೆ ಉಡುಪಿ ಜಿಲ್ಲೆಯ
ಬ್ರಹ್ಮಾವರದ ಕೆಂಜೂರಿನಲ್ಲಿ ನಡೆದ ಅಮಾನುಷ ಈ ಘಟನೆ ಯಾರನ್ನೂ ಬೆಚ್ಚಿ ಬೀಳಿಸುವಂತದ್ದು ಅಂದ ಹಾಗೆ ಆ ರಾತ್ರಿ ನಡೆದಾದ್ರೂ ಏನು ಗೊತ್ತಾ? ನಕಲಿ ಗೋ ರಕ್ಷಣೆಯ ಹೆಸರಿನಲ್ಲಿ ಅಮಾಯಕನ ಕೊಲೆ. ಅದು ಅಮಾನುಷವಾಗಿ..
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪಿಯ ಕೆಂಜೂರು ಪ್ರದೇಶ.. ಅ.17ರ ರಾತ್ರಿ 8.30 ಸಮಯ… ಈ ಪ್ರದೇಶದಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ದನ ಸಾಗಿಸುತ್ತಿದ್ದಾನೆ ಎಂಬ ಕಾರಣಕ್ಕೆ ರಾಡ್ ಗಳಿಂದ ಹಲ್ಲೆ ನಡೆಸಿ ಸಾಯಿಸಿಬಿಟ್ಟಿದ್ದರು. ಇವರು ಸಾಯಿಸಿದ್ದು ಬೇರೆ ಯಾರನ್ನೂ ಅಲ್ಲ ಬಿಜೆಪಿ ಸ್ಥಾನಿಕ ಸಮಿತಿಯ ಅದ್ಯಕ್ಷ ಪ್ರವೀಣ್ ಪೂಜಾರಿಯನ್ನ..
ಅಂದ ಹಾಗೆ ಪ್ರವೀಣ್ ಪೂಜಾರಿ ಕೆಂಜೂರಿನ ಪ್ರದೇಶದ ಯುವಕನೇ ಧಾಳಿ ಮಾಡಿದವರಿಗೆ ಪರಿಚಿತನೇ.. ಆದ್ರೆ ಉದ್ದೇಶ ಪೂರ್ವಕವಾಗಿಯೇ ಸಾಯಿಸಲಾಗಿದೆ ಎಂಬ ಗುಮಾನಿಯನ್ನು ಇದೀಗ ಮನೆ ಮಂದಿ ಮಾಡುತ್ತಿದ್ದಾರೆ. ಕಾರಣ ಪ್ರವೀಣ್ ಪೂಜಾರಿಗೆ ಊರಿನಲ್ಲಿ ಉತ್ತಮ ಹೆಸರಿತ್ತು. ೧೦ ಮಂದಿಗೆ ಸಹಾಯ ಮಾಡಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದ ಒಂದು ಲೆಕ್ಕದಲ್ಲಿ ಯುವ ಮುಖಂಡನಾಗಿ ಮೂಡಿಬರುತ್ತಿದ್ದ ಆದ್ರೆ ಹಿಂದೂ ಜಾಗರಣಾ ವೇದಿಕೆಯ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.
ಪ್ರವೀಣ್ ಪೂಜಾರಿಯನ್ನ ಹತ್ಯೆ ಮಾಡಿರುವುದು ಅತ್ಯಂತ ಕ್ರೂರವಾಗಿ . ಇದು ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರ ಅಲ್ಲ ಗೋ ರಕ್ಷಣೆಯ ಹೆಸರಿನಲ್ಲಿ ನಕಲಿ ಗೋ ರಕ್ಷಕರ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಆದ್ರೆ ಇಡೀ ಮನೆಗೆ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ತಾಯಿಗೆ ಇದನ್ನು ಊಹಿಸಲೂ ಸಾದ್ಯವಾಗುತ್ತಿಲ್ಲ. ಅಂಗಡಿಗೆ ಬರುವವರು, ಹಾಗೂ ಮಗನಲ್ಲಿ ಸಾಲ ಮಾಡಿದವರೇ ನನ್ನ ಮಗನನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ ನನ್ನ ಮಗನಿಗೆ ಆದ ನೋವು ಆರೋಪಿಗಳಿಗೂ ಸಿಗಬೇಕು ಎಂಬುದು ಪ್ರವೀಣ್ ತಾಯಿಯ ಆಸೆ ಆಗಿದೆ. ಇಡೀ ಮನೆಗೆ ಆಧಾರ ಸ್ತಂಭವಾಗಿದ್ದ ಪ್ರವೀಣ್ ನನ್ನು ಕಳೆದುಕೊಂಡ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಘಟನೆಯ ಸಂಬಂಧ ಈಗಾಗಲೇ 17 ಮಂದಿ ಆರೋಪಿಗಳನ್ನು ಬಂಧಿಸುವ ಪೊಲೀಸರು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಅರವಿಂದ ಕೋಟೇಶ್ವರನನ್ನು ಬಂಧಿಸಲಾಗಿದೆ.
ಈಗಾಗಲೇ ಘಟನಾ ಸ್ಥಳದ ಮಹಜರು ಮಾಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ಬಿಲ್ಲವ ಸೇವಾ ಸಂಘಗಳು ಆರೋಪಿಗಳಿಗೆ ಕಠಿನ ಶಿಕ್ಷೆ ನೀಡುವಂತೆ ಒತ್ತಾಯಿಯಿಸಿದೆ.
Comments are closed.