ಮಂಗಳೂರು: ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ,,,, ಹಾಡು ಕೇಳಿದ್ದೀರಲ್ಲವೇ? ನಿಜ ನೀವು ಪ್ರೀತಿಯಲ್ಲಿ ಬೀಳುವವರೆಗೆ ಅದರ ಅನುಭವ ನಿಮಗೆ ಗೊತ್ತಾಗುವುದಿಲ್ಲ. ಇದು ಮನುಷ್ಯನನ್ನು ಸಂತೋಷಪಡಿಸುವುದರ ಜೊತೆಗೆ ದುಃಖವನ್ನೂ ಪಡಿಸುತ್ತದೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ! ಯಾರು ಪ್ರೀತಿಯ ಬಲೆಗೆ ಬೀಳುತ್ತಾರೆಯೋ ಅವರ ಪ್ರಕಾರ ಪ್ರೀತಿ ಎಂಬುದು ಒಂದು ಕಾಯಿಲೆ, ಅಥವಾ ಮನೋರೋಗವಂತೆ!
ಹೌದು ಪ್ರೀತಿಗೆ ನಾನಾ ಬಗೆಯ ಆಯಾಮಗಳು ಇರುತ್ತವೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಪ್ರೀತಿ ಎಂಬುದು ನಿಮ್ಮ ಪ್ರೀತಿ ಪಾತ್ರರಿಗೆ ಅತ್ಯಂತ ಪ್ರಮುಖವಾದ ಅಂಶವಾಗಿರುತ್ತದೆ.
ನಿಜವಾಗಿ ಒಬ್ಬ ವ್ಯಕ್ತಿಯ ಜೊತೆಗೆ ಪ್ರೀತಿಯಲ್ಲಿ ಬೀಳುವುದು ನಿಜಕ್ಕೂ ಒಂದು ಅವಿನಾನುಭವದ ಅಂಶವಾಗಿರುತ್ತದೆ.
ನೀವು ಪ್ರೀತಿಯಲ್ಲಿ ಬಿದ್ದಾಗ, ನಿಮ್ಮ ಮೆದುಳಿನಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಆಗ ನೀವು ಸೋಮಾರಿಗಳಾಗಿ ನಿಮ್ಮ ಕಾಲವನ್ನು ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಕಳೆಯಲು ಇಷ್ಟಪಡುತ್ತೀರಿ.
ಸುಮಾರು ಜನ ಖ್ಯಾತ ವ್ಯಕ್ತಿಗಳು ಪ್ರೀತಿಯಲ್ಲಿ ಬಿದ್ದಾಗ ಕವಿತೆಗಳನ್ನು, ಕಾದಂಬರಿಗಳನ್ನು, ಸೂಕ್ತಿಗಳನ್ನು ಮತ್ತು ಮುಂತಾದ ಸೃಜನಶೀಲ ಚಟುವಟಿಕೆಗಳನ್ನು ಮಾಡಿದ್ದಾರೆ. ಮಿರ್ಜಾ ಗಾಲಿಬ್ ಎಂಬ ವ್ಯಕ್ತಿಯು ಕವಿತೆಗಳನ್ನು ಬರೆದ, ಶಹಜಹಾನ್ ತಾಜ್ ಮಹಲ್ ಕಟ್ಟಿಸಿದ. ಹೀಗೆ ಸುಮಾರು ಜನ ಸುಮಾರು ಕೆಲಸಗಳನ್ನು ಮಾಡಿದರು. ಇದೆಲ್ಲವು ಪ್ರೀತಿಯಿಂದ ಮಾತ್ರ ಸಾಧ್ಯ. ಬನ್ನಿ ಪ್ರೀತಿಯ ಕುರಿತು ನಿಮಗೆ ಗೊತ್ತಿರದ ಕುತೂಹಲಕಾರಿ ವಿಚಾರಗಳು ಯಾವುವು ಎಂದು ಮುಂದೆ ತಿಳಿಸುತ್ತೇ
ಸಂಗಾತಿಯನ್ನು ಅಪ್ಪಿಕೊಳ್ಳುವುದು ಪ್ರೀತಿಯಲ್ಲಿ ಬಿದ್ದವನಿಗೆ ನೋವಾದರೆ ನೋವು ನಿವಾರಕಗಳ ಅಗತ್ಯವಿರುವುದಿಲ್ಲ. ಬದಲಿಗೆ ಹೋಗಿ ಸಂಗಾತಿಯನ್ನು ಅಪ್ಪಿಕೊಂಡರೆ ಸಾಕು, ಎಲ್ಲಾ ನೋವು ಮಾಯ!
ಹೃದಯದ ಚಿಹ್ನೆ ಹೃದಯದ ಚಿಹ್ನೆಯನ್ನು ಬರೆಯಲಿಲ್ಲವಾದರೆ ಅದೆಂತಹ ಪ್ರೇಮಿಗಳು ನಾವು ಎಂದು ನಮಗೆ ಅನಿಸುತ್ತದೆ. ಆದರೆ ನಾವು ಇಂದು ಬರೆಯುವ ಆ ಚಿಹ್ನೆಯನ್ನು 1250ಕ್ಕೆ ಮೊದಲು ಎಲೆಗಳ ಗುಂಪನ್ನು ಸೂಚಿಸಲು ಬಳಸುತ್ತಿದ್ದರು
ಉತ್ಪಾದನಾ ಶೀಲತೆಯನ್ನು ಕಡಿಮೆ ಮಾಡುತ್ತದೆ -ಅಧ್ಯಯನಗಳ ಪ್ರಕಾರ ಪ್ರೀತಿಯಲ್ಲಿ ಬಿದ್ದವರ ಉತ್ಪಾದನಾಶೀಲತೆ ಕಡಿಮೆಯಾಗುತ್ತದೆಯಂತೆ. ಪ್ರೀತಿ ಮಾಯೆಯಲ್ಲವೇನು?
ಮಾನಸಿಕ ರೋಗಗಳು ಪ್ರೀತಿಯಲ್ಲಿ ಬಿದ್ದಾಗ ಮಾನಸಿಕ ರೋಗಗಳು ಬರುತ್ತವೆಯಂತೆ. ಖಿನ್ನತೆ, ಭಾವ-ತೀವ್ರತೆ, ಅಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ ಇತ್ಯಾದಿಗಳು ಇವರನ್ನು ಕಾಡುತ್ತವೆ. ಈಗ ಗೊತ್ತಾಯಿತಲ್ಲ ಕೋಮಾ….ಎಂದು ಶಿವರಾಜ್‌ಕುಮಾರ್ ಹಾಡು ಏಕೆ ಬಂತು ಎಂದು!
ಪೀಲೋಫೋಬಿಯಾ ಫಿಲೋಫೋಬಿಯಾ ಅಥವಾ ಅಧಿಕ ಭಯ ಎಂಬುದು ಎಲ್ಲಿ ಪ್ರೀತಿಯಲ್ಲಿ ಬಿದ್ದು ಬಿಡುತ್ತೇನೋ ಎಂಬ ಭಯವಂತೆ.

Comments are closed.