ಕರಾವಳಿ

ಮಗುವಿನ ಹೊಟ್ಟೆಯಲ್ಲಿ ಲಕ್ಷ್ಮೀ ವಿಗ್ರಹ ಪತ್ತೆ.

Pinterest LinkedIn Tumblr

god_idel_stomch

ರಾಯಚೂರು, ಆ. 19: ಪೂಜೆಗೆ ಅಂತ ತಂದಿದ್ದ ಲಕ್ಷ್ಮೀ ವಿಗ್ರಹವನ್ನು 4 ವರ್ಷದ ಮಗುವೊಂದು ನುಂಗಿದ ಘಟನೆ ರಾಯಚೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪುಟ್ಟ ಪೋರ ನುಂಗಿದ ವಿಗ್ರಹವನ್ನು ವೈದ್ಯರು ಹೊರತೆಗೆದು ಮಗುವಿಗೆ ಪುನರ್ಜನ್ಮ ನೀಡಿದ್ದಾರೆ.

ಪೂಜೆಗೆ ಎಂದು ತಂದಿದ್ದ 4.3 ಸೆಂಟಿ ಮೀಟರ್ ಉದ್ದದ ಲಕ್ಷ್ಮಿ ವಿಗ್ರಹವನ್ನು ರಾಯಚೂರಿನ ಕಾಶಿನಾಥ್ ರೇಣುಕಾ ದಂಪತಿಯ ನಾಲ್ಕು ವರ್ಷದ ಮಗ ಸಾಯಿಪ್ರಕಾಶ ನುಂಗಿದ್ದ, ತಕ್ಷಣವೇ ತಾಯಿ ಮಗನನ್ನು ನಗರದ ಗೋಶಾಲ ರಸ್ತೆಯ ಗಂಜ್ ವೃತ್ತದ ಬಳಿಯಿರುವ ಲಿವರ್ ಆಂಡ್ ಗ್ಯಾಸ್ಟ್ರೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವಿನ ಹೊಟ್ಟೆಯಲ್ಲಿದ್ದ ವಿಗ್ರಹವನ್ನು ಎಂಡೋಸ್ಕೋಪ್ ಮೂಲಕ ಹೊರತೆಗೆದು ಮಗುವಿನ ಪ್ರಾಣ ಉಳಿಸಿದ್ದಾರೆ.

ಈ ವಿಗ್ರಹವೇನಾದರೂ ಹೊಟ್ಟೆಯಲ್ಲೇ ಉಳಿದಿದ್ದರೆ, ಅಥವಾ ತೆಗೆಯಲು ತಡವಾಗಿದ್ದರೆ ವಿಗ್ರಹದ ರಾಸಾಯನಿಕ ಬಣ್ಣದ ಲೇಪನವು ಕರುಳನ್ನು ಕೊಳೆತು ಹೋಗುವಂತೆ ಮಾಡುತ್ತಿತ್ತಂತೆ. ಏನೇ ಆಗಲಿ ಅಮಾಯಕ ಮಗುವಿನ ಜೀವವನ್ನು ವೈದ್ಯರು ಉಳಿಸಿದ್ದಾರೆ.

Comments are closed.