ಕರಾವಳಿ

ಶರೀರದಲ್ಲಿನ ಸನ್ ಸ್ಪಾಟ್ ಹೋಗಲಾಡಿಸಲು ರೆಡ್ ವೈನ್ ಸ್ನಾನ.

Pinterest LinkedIn Tumblr

red_wine_bath

__ಜಪಾನಿನ ಟೋಕಿಯೋದಲ್ಲಿನ ‘ದ ಯುನೆಸ್ಸುನ್ ಸ್ಪಾ’ ಪ್ರವಾಸಿಗರ ಮತ್ತು ಫ್ಯಾಮಿಲಿಗಳ ಆಕರ್ಷಣ ಕೇಂದ್ರವಾಗಿದೆ. ಏಕೆಂದರೆ ಇಲ್ಲಿ ಬಿಸಿ ನೀರಿನ ಸ್ಪ್ರಿಂಗ್ಸ್ ನೊಂದಿಗೆ ಇನ್ನೂ ಹಲವಾರು ತರದ ಸ್ನಾನ ಗೃಹವಿದೆ.
ಜಪಾನಿನ ಪ್ರಸಿದ್ದ ರೆಡ್ ವೈನ್ ಸುರಿದಿರುವ ಸ್ನಾನಗೃಹ ಇಲ್ಲಿದೆ. ಇದರಲ್ಲಿ ಸ್ನಾನ ಮಾಡುವುದರಿಂದ ಶರೀರದಲ್ಲಿನ ಸನ್ ಸ್ಪಾಟ್ ಹೋಗುತ್ತದೆಯಂತೆ.

ಈ ಸ್ಪಾ ಕೇಂದ್ರದಲ್ಲಿ ಗ್ರೀನ್ ಟೀಯ ಸ್ನಾನ ಕೂಡ ಇದೆ. ಗ್ರೀನ್ ಟೀ ದೇಹಕ್ಕೆ ಎಷ್ಟು ಒಳ್ಳೆಯದೋ ಹಾಗೆ ಹೊರಗಿನ ತ್ವಚೆಯನ್ನು ಕೂಡ ಪ್ರಾಯದಲ್ಲಿರಿಸುತ್ತದೆ ಎಂದು ಜಪಾನೀಯರು ಹೇಳುತ್ತಾರೆ.
ರೆಡ್ ವೈನ್ ನಿಂದ ಸ್ನಾನ ಮಾಡಿದರೆ ಶರೀರಕ್ಕೆ ಆಯಂಟಿ ಆಕ್ಸಿಡೆಂಟ್ಸ್ ಸಿಗುತ್ತದೆ ಎಂದು ಎಲ್ಲರೂ ಈ ಸ್ನಾನಕ್ಕೆ ಮುಗಿಬೀಳುತ್ತಾರೆ.

ನಿದ್ರೆಯನ್ನು ಓಡಿಸಲು ಮತ್ತು ದೇಹದಲ್ಲಿನ ಸೆಲ್ಯುಲೈಟ್ ಪ್ರಮಾಣವನ್ನು ಕಡಿಮೆ ಮಾಡಲು ಕಾಫಿ ಬಾತ್ ಕೂಡ ಇದೆ. ಕಾಫಿ ಕುಡಿಯಲು ಎಷ್ಟು ಮಜಾ ಬರುತ್ತದೋ ಅದರ ಸ್ನಾನ ಕೂಡ ಅಷ್ಟೇ ಮಜವಾಗಿರುತ್ತದೆ ಎಂದು ‘ದ ಯುನೆಸ್ಸುನ್ ಸ್ಪಾ’ ಹೇಳಿಕೊಂಡಿದೆ. ಇಂತಹ ಹಲವಾರು ವಿನೂತನ ಸ್ಪಾಗಳಿಂದ ‘ದ ಯುನೆಸ್ಸುನ್’ ಖ್ಯಾತಿ ಪಡೆಯುತ್ತಿದೆ.

Comments are closed.