ಕರಾವಳಿ

ಪ್ರಸವದ ನಂತರ ಹೊಸ ತಾಯಂದಿರು ಎದುರಿಸುವ ಅತ್ಯಂತ ಸಾಮಾನ್ಯ ಸಂಕೀರ್ಣತೆ.

Pinterest LinkedIn Tumblr

mother lifestyle

ಮಂಗಳೂರು: ತಾಯಿಯಾಗಿ ಹೊಸ ಪಾತ್ರ ನಿರ್ವಹಿಸುವುದು ಯಾವುದೇ ಮಹಿಳೆಗೂ ಭಾವೋದ್ವೇಗಕ್ಕೆ ಕಾರಣವಾಗುತ್ತದೆ. ಈ ಅವಧಿಯಲ್ಲಿ, ನಿಮ್ಮ ಪುಟಾಣಿಯನ್ನು ಅರಿಯುವುದು ಒಂದು ಸಂಗತಿಯಾದರೆ, ಮಗು ಜನಿಸಿದ ನಂತರದ ವಾರಗಳಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ನಿಮ್ಮ ದೇಹವನ್ನು ಅರಿಯುವುದೂ ಇನ್ನೊಂದು ಸಂಗತಿಯಾಗಿರುತ್ತದೆ. ಪ್ರಸವದ ನಂತರದ ಅವಧಿಯಲ್ಲಿ ಮಗು ಜನನದಿಂದ ದೇಹ ಗುಣವಾಗುತ್ತದೆ, ತನ್ನ ಸಾಮಥ್ರ್ಯವನ್ನು ಮರುಪಡೆಯುತ್ತದೆ ಮತ್ತು ಗರ್ಭಕ್ಕೂ ಮೊದಲಿನ ಸ್ಥಿತಿಗೆ ಮರಳಲು ಆರಂಭಿಸುತ್ತದೆ. ಈ ಅವಧಿಯಲ್ಲಿ, ಏನು ಎದುರಾಗುತ್ತದೆ ಎಂಬುದನ್ನು ಅರಿತರೆ ದೈಹಿಕ ಹಾಗೂ ಭಾವನಾತ್ಮಕ ಬದಲಾವಣೆಗಳನ್ನು ಸಮರ್ಥವಾಗಿ ಎದುರಿಸಲು ತಯಾರಾಗಬಹುದು.

ಪ್ರಸವದ ನಂತರದ ಖಿನ್ನತೆ:
ಪ್ರಸವದ ನಂತರ ನಿಮಗೆ ಖಿನ್ನತೆ ಕಂಡುಬಂದರೆ, ನೀವು ಒಂಟಿಯಲ್ಲ ಎಂಬುದನ್ನು ನೆನಪಿಡಿ. ಮಗು ಜನಿಸಿದ ನಂತರ ಬಹುತೇಕ ಅರ್ಧದಷ್ಟು ಮಹಿಳೆಯರಿಗೆ ಕೆಲವು ದಿನಗಳವರೆಗೆ ಲಘು ಖಿನ್ನತೆ ಕಂಡುಬರುತ್ತದೆ. ಈ ಹಂತದಲ್ಲಿ ಬದಲಾವಣೆ ಸಾಮಾನ್ಯವಾಗಿರುತ್ತದೆ. ಜವಾಬ್ದಾರಿಗಳ ಹೆಚ್ಚಳ, ಮಗುವಿನ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದು, ನಿದ್ದೆ ಸಾಕಷ್ಟು ಸಿಗದಿರುವುದು ಪ್ರಸವದ ನಂತರದ ಖಿನ್ನತೆಗೆ ಕೆಲವು ಪ್ರಮುಖ ಕಾರಣಗಳಾಗಿವೆ. ನಿದ್ರೆ ಅಭಾವ, ಕಿರಿಕಿರಿ, ಕಣ್ಣೀರು, ಭಾವೋದ್ವೇಗ ಮತ್ತು ಮೂಡ್ ಬದಲಾಗುವುದು ಸಾಮಾನ್ಯ. ಇದನ್ನು ಎದುರಿಸುವ ಉತ್ತಮ ವಿಧಾನವೆಂದರೆ, ನಿಮ್ಮ ನವಜಾತ ಶಿಶುವಿನ ನಿತ್ಯಕರ್ಮಗಳನ್ನು ಅನುಸರಿಸುವುದಾಗಿದೆ. ಇದರಿಂದ ನಿಮ್ಮ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ನೆರವಾಗುತ್ತದೆ. ಒಂದು ವೇಳೆ ಗುಣಲಕ್ಷಣಗಳು ನಿವಾರಣೆಯಾಗದಿದ್ದರೆ, ಕೌನ್ಸೆಲಿಂಗ್ ಪಡೆಯುವುದು ಉತ್ತಮ.

ಮೂತ್ರನಾಳದಲ್ಲಿನ ಸೋಂಕು:
ಪ್ರಸವದ ನಂತರ ಮೂತ್ರನಾಳದಲ್ಲಿನ ಸೋಂಕು ಅತ್ಯಂತ ಸಾಮಾನ್ಯ ಅಂಶವಾಗಿದೆ. ಮೂತ್ರದಲ್ಲಿನ ಬ್ಯಾಕ್ಟೀರಿಯಾಗಳು ಈ ಸೋಂಕಿಗೆ ಪ್ರಮುಖ ಕಾರಣವಾಗಿದ್ದು, ಗರ್ಭಾವಸ್ಥೆಯ ಆರಂಭದ ದಿನಗಳನ್ನು ಗರ್ಭಪಾತ ಅಥವಾ ಅವಧಿಗೂ ಮುನ್ನವೇ ಪ್ರಸವಕ್ಕೆ ಕಾರಣವಾಗಬಹುದು. ಗರ್ಭದಲ್ಲಿ ಪ್ರೊಜೆಸ್ಟರೋನ್ ಮಟ್ಟದ ಹೆಚ್ಚಳವಾಗಿ, ಪಿತ್ತಜನಕಾಂಗ ಹೈಪ್ರೊಟೋನಿಯಾ ಮತ್ತು ಮೂತ್ರಕೋಶದ ಸ್ಥಂಭನಕ್ಕೆ ಕಾರಣವಾಗಬಹುದು. ತಾಯಂದಿರು ನಿರಂತರವಾಗಿ ಎಲ್ಲ ಸಮಯದಲ್ಲೂ ನೀರನ್ನು ಸಾಕಷ್ಟು ಕುಡಿಯಬೇಕು. ಹಾಗೆಯೇ, ಉತ್ತಮ ಗುಪ್ತಜನಕಾಂಗ ನೈರ್ಮಲ್ಯವನ್ನು ಕಾಯ್ದುಕೊಳ್ಳಬೇಕು, ಸಾರ್ವಜನಿಕ ಶೌಚಾಲಯಗಳನ್ನು ಅದರಲ್ಲೂ ವಿಶೇಷವಾಗಿ ಪಾಶ್ಚಾತ್ಯ ಶೈಲಿಯ ಶೌಚಾಲಯಗಳನ್ನು ದೂರವಿಡಬೇಕು.

ಕೂದಲು ಉದುರುವಿಕೆ:
ಗರ್ಭಧಾರಣೆ ಅವಧಿಯಲ್ಲಿ ಕೂದಲು ಅನಾಜೆನ್ ಹಂತದಲ್ಲಿ ಉದ್ದವಾಗಲು ಆರಂಭವಾಗುತ್ತದೆ. ಪ್ರಸವದ ನಂತರ, ತಾಯಂದಿರು ಟಿಲೋಜೆನ್ ಹಂತಕ್ಕೆ ಕಾಲಿಡುತ್ತಾರೆ. ಈ ವೇಳೆ ಕೂದಲು ಉದುರುತ್ತದೆ. ಆದರೆ ಈ ಹಂತ ತಾತ್ಕಾಲಿಕವಾಗಿದ್ದು, ಪ್ರಸವದ ನಂತರ 3-4 ತಿಂಗಳುಗಳಿರುತ್ತದೆ. ಉತ್ತಮ ಪ್ರೋಟೀನ್ ಪಥ್ಯ, ನೀರು ಸಾಕಷ್ಟು ಕುಡಿಯುವುದು, ಎಣ್ಣೆ ಹಚ್ಚಿಕೊಳ್ಳುವುದು, ತೇವ ಹಾಗೂ ಹೊಟ್ಟು ಇತ್ಯಾದಿಯನ್ನು ನಿವಾರಿಸಲು ಆಗಾಗ್ಗೆ ಕೂದಲು ತೊಳೆದುಕೊಳ್ಳುವುದರಿಂದ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಬಹುದು.

ತೂಕ ಕಳೆದುಕೊಳ್ಳುವಿಕೆ:
ಪ್ರಸವದ ನಂತರ ತೂಕ ಕಳೆದುಕೊಳ್ಳಲು ಉತ್ತಮ ವಿಧಾನವೆಂದರೆ ವಿಶೇಷವಾಗಿ ಮೊಲೆಹಾಲೂಡಿಸುವುದು. ನಡೆಯುವುದು ಅಥವಾ ನಿತ್ಯದ ಚಟುವಟಿಕೆಗಳನ್ನು ಪ್ರಸವದ ನಂತರ ಮಾಡಬಹುದು. ನೋವು ಅಥವಾ ಅತಿಯಾದ ಬಳಲಿಕೆಗೆ ಕಾರಣವಾಗದ ಚಟುವಟಿಕೆಗಳನ್ನು ಮಾತ್ರ ಮಾಡಬೇಕು. ನಾರ್ಕೋಟಿಕ್ ಅನಾಲ್ಜೆಸಿಕ್ಸ್ ಬಸುವುದರಿಂದ ಮಾನಸಿಕ ಎಚ್ಚರಿಕೆ ಮತ್ತು ಸಾಮಥ್ರ್ಯದ ಮೇಲೆ ಪರಿಣಾಮ ಬೀರುವುದರಿಂದ ಇದನ್ನು ನಿಲ್ಲಿಸುವವರೆಗೂ ಮಾನಸಿಕ ಎಚ್ಚರಿಕೆ ಅಗತ್ಯವಿರುವ ಚಟುವಟಿಕೆಗಳಲ್ಲಿ (ಉದಾ., ವಾಹನ ಚಾಲನೆ ಮಾಡುವುದು ಅಥವಾ ಅಪಾಯಕಾರಿ ಸಲಕರಣೆಗಳನ್ನು ನಿರ್ವಹಿಸುವುದು) ಆಕೆ ಒಳಗೊಳ್ಳಬಾರದು.

ಜೈವಿಕ ಪ್ರಸವದ ನಂತರ ಯಾವುದೇ ಸಮಯದಲ್ಲಿ ಅಥವಾ ಸಿಸೇರಿಯನ್ ಪ್ರಸವವಾದರೆ ಹೊಟ್ಟೆಯ ಸೀಳುವಿಕೆ ಗುಣವಾದ ನಂತರದಲ್ಲಿ ಅಗತ್ಯವಿದ್ದರೆ, ಹೊಟ್ಟೆಯ ವ್ಯಾಯಾಮವನ್ನು ಆರಂಭಿಸಬಹುದು.

ಹಾಗೆಯೇ, ಗರ್ಭಧಾರಣೆಯ ಅವಧಿಗಿಂತ ಲ್ಯಾಕ್ಟೇಟಿಂಗ್ ಕ್ಯಾಲರಿ ಈ ಅವಧಿಯಲ್ಲಿ ಹೆಚ್ಚು ಅಗತ್ಯವಿರುವುದರಿಂದ ಕ್ರ್ಯಾಶ್ ಪಥ್ಯವನ್ನು ದೂರವಿಡುವುದು ಅತ್ಯಂತ ಪ್ರಮುಖವಾಗಿದೆ. ಕ್ರ್ಯಾಶ್ ಪಥ್ಯಕ್ಕೆ ಒಳಗಾಗುವುದರಿಂದ ವಿಟಾಮಿನ್ ಕೊರತೆಗೆ ಕಾರಣವಾಗಬಹುದು ಮತ್ತು ದೀರ್ಘಾವಧಿ ಸಮಸ್ಯೆಗಳಾದ ಆಸ್ಟಿಯೋಪೊರೋಸಿಸ್‍ಗೂ ಕಾರಣವಾಗಬಹುದು.

ಇತರ ಸಂಕೀರ್ಣತೆಗಳೆಂದರೆ, ಸ್ತನದ ವಿಸ್ತಾರಗೊಳ್ಳುವಿಕೆಯ ಸೋಂಕಿನಿಂದ ನೋವು ಉಂಟಾಗುವುದು, ಸ್ತನದ ತೊಟ್ಟುಗಳು ಒಡೆಯುವುದು, ಮೂತ್ರನಾಳದಲ್ಲಿ ಒತ್ತಡ, ಅತಿಸಾರ ಮತ್ತು ಮೂಲವ್ಯಾಧಿ ತೀವ್ರಗೊಳ್ಳುವಿಕೆಯೂ ಪ್ರಸವದ ನಂತರ ಸಾಮಾನ್ಯವಾಗಿದೆ. ಈ ಸಮಸ್ಯೆಗಳನ್ನು ಸೂಕ್ತವಾದ ಲ್ಯಾಕ್ಟೇಶನ್ ತಂತ್ರಗಳು, ಉತ್ತಮ ನೀರು ಸೇವನೆ, ಅಧಿಕ ನಾರಿನ ಅಂಶದ ಸೇವನೆ, ಗುಪ್ತಾಂಗಗಳ ವ್ಯಾಯಾಮಗಳು ಮತ್ತು ಪ್ರಸವದ ನಂತರ ಕ್ಲಿನಿಕ್‍ಗಳಿಗೆ ಫಾಲೋ ಅಪ್ ಚೆಕಪ್‍ಗಳಿಂದ ಪರಿಹರಿಸಬಹುದಾಗಿದೆ.

ಪ್ರಸವದ ನಂತರದ ಅವಧಿಯಲ್ಲಿ ಬೆಂಬಲ ಮತ್ತು ಮರುಖಚಿತತೆಯನ್ನು ನೀಡುವುದರಿಂದ ಹೊಸ ತಾಯಂದಿರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ತಾಯಿ-ಶಿಶು ಆರೋಗ್ಯವಂತ ಸಂಬಂಧಕ್ಕೆ ನೆರವಾಗುತ್ತದೆ. ನವಜಾತ ಶಿಶುವಿನ ಆರೈಕೆಯಲ್ಲಿ ಪಾಲ್ಗೊಳ್ಳುವಂತೆ ತಂದೆಯನ್ನು ಪ್ರೋತ್ಸಾಹಿಸಬೇಕು. ತಾಯಿಗೆ ಹೆಚ್ಚುವರಿ ಬೆಂಬಲ ನೀಡುವುದು ಮಾತ್ರವಲ್ಲ, ನವಜಾತ ಶಿಶುವಿನ ಜತೆಗೂ ಆತ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು.

Comments are closed.