__ ಸತೀಶ್ ಕಾಪಿಕಾಡ್
ಮಂಗಳೂರು,ಆಗಸ್ಟ್. 15 : ಮಂಗಳೂರಿನ ನೆಹರು ಮೈದಾನದಲ್ಲಿ ಇಂದು ನಡೆದ 70ನೇ ಸ್ವಾತಂತ್ರ್ಯೋತ್ಸವಕ್ಕೆ ಜಿಲ್ಲಾಡಳಿತದ ತಪ್ಪು ನಿರ್ಧಾರದಿಂದಾಗಿ ಪತ್ರಿಕಾ ಛಾಯಾಗ್ರಾಹಕರು ಬಹಿಷ್ಕಾರ ಹಾಕಿದ ಅಪರೂಪದ ಘಟನೆಯೊಂದು ನಡೆದಿದೆ.
ಭದ್ರತೆ ನೆಪದಲ್ಲಿ ಪತ್ರಿಕಾ ಛಾಯಾಗ್ರಾಹಕರು ಹಾಗೂ ಪತ್ರಕರ್ತರನ್ನು ದೂರ ಇಟ್ಟ ಜಿಲ್ಲಾಡಳಿತದ ನಿರ್ಣಯವನ್ನು ಖಂಡಿಸಿ ದ.ಕ. ಜಿಲ್ಲಾಡಳಿತದಿಂದ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವಕ್ಕೆ ಪತ್ರಿಕಾ ಛಾಯಾಗ್ರಾಹಕರು ಬಹಿಷ್ಕಾರ ಹಾಕಿ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.
ಪ್ರತೀ ವರ್ಷವೂ ಜಿಲ್ಲಾಡಳಿತದ ವತಿಯಿಂದ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ಪತ್ರಿಕಾ ಛಾಯಾಗ್ರಾಹಕರು ಹಾಗೂ ಪತ್ರಕರ್ತರಿಗೆ ಆಮಂತ್ರಣ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪತ್ರಿಕಾ ಛಾಯಾಗ್ರಾಹಕರು ಹಾಗೂ ಪತ್ರಕರ್ತರು ಯಾವೂದೇ ಅಡೆತಡೆ ಇಲ್ಲದೇ ಕಾರ್ಯಕ್ರಮಕ್ಕೆ ತೆರಳಿ ವರದಿ ಪ್ರಕಟಿಸುತ್ತಾ ಬಂದಿರುತ್ತಾರೆ.
ಆದರೆ ಇದೇ ಮೊದಲ ಬಾರಿ ಭದ್ರತೆ ನೆಪದಲ್ಲಿ ಪತ್ರಕರ್ತರನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುಖ್ಯಧ್ವಾರದ ಮೂಲಕ ಪ್ರವೇಶ ನಿರಕರಿಸಲಾಯಿತು. ಜೊತೆಗೆ ಪತ್ರಿಕಾ ಛಾಯಾಗ್ರಾಹಕರನ್ನು ತಡೆಹಿಡಿಯಲಾಯಿತು. ಈ ಸಂದರ್ಭ ಕೆಲವು ಪತ್ರಕರ್ತರು ಸಾರ್ವಜನಿಕರಿಗಾಗಿ ಮೀಸಲಿಟ್ಟ ಧ್ವಾರದ ಮೂಲಕ ಒಳಪ್ರವೇಶಿಸಿ ಸಾರ್ವಜನಿಕರ ಜೊತೆಯೇ ಕುಳಿತು ವರದಿ ಸಂಗ್ರಹದಲ್ಲಿ ತೊಡಗಿದರು.
ಆದರೆ ಜಿಲ್ಲಾಡಳಿತದ ನಿರ್ಣಯದಿಂದ ಬೇಸರಗೊಂಡ ಪತ್ರಿಕಾ ಛಾಯಾಗ್ರಾಹಕರು ಮಾತ್ರ ಎಲ್ಲರೂ ಒಟ್ಟಾಗಿ ಕಾರ್ಯಕ್ರಮವನ್ನು ಬಹಿಷ್ಕಾರಿಸಿ ಕಾರ್ಯಕ್ರಮ ನಡೆಯುವ ಸ್ಥಳದಿಂದ ಅನತಿ ದೂರದಲ್ಲೇ ಉಳಿದರು. ಯಾವೂದೇ ಪತ್ರಿಕಾ ಛಾಯಾಗ್ರಾಹರು ಕಾರ್ಯಕ್ರಮದ ಚಿತ್ರ ಹಾಗೂ ವಿಡೀಯೋ ತೆಗೆಯದೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಬಹಿಷ್ಕಾರಿಸಿದರು.
ಕಾರ್ಯಕ್ರಮಕ್ಕೆ ಪತ್ರಕರ್ತರಿಗೆ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ತೆರಳಿದಾಗ ಯಾವೂದೇ ಮುನ್ಸೂಚನೆ ನೀಡದೇ ಭದ್ರತೆ ನೆಪದಲ್ಲಿ ಏಕಾಏಕಿ ಪತ್ರಕರ್ತರನ್ನು ದೂರವಿಟ್ಟ ಜಿಲ್ಲಾಡಳಿತ ಕ್ರಮದ ಬಗ್ಗೆ ವ್ಯಾಪಾಕ ಆಕ್ರೋಷ ವ್ಯಕ್ತವಾಗಿದೆ.
ಈ ತೀರ್ಮಾನ ಕೈಗೊಂಡವರು ಯಾರು : :
ಪತ್ರಿಕಾ ಛಾಯಾಗ್ರಾಹಕರು ಹಾಗೂ ಪತ್ರಕರ್ತರಿಗೆ ಪ್ರವೇಶ ನಿರಕರಿಸಿದ ಬಗ್ಗೆ ಭದ್ರತಾ ಸಿಬ್ಬಂದಿಗಳಲ್ಲಿ ಕೇಳಿದರೆ ಮೇಲಿನಿಂದ ಆದೇಶ ಬಂದಿದೆ ಎನ್ನುತ್ತಾರೆ. ಉಸ್ತವಾರಿ ಸಚಿವರನ್ನು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾಧಿಕಾರಿ ಹೊಸಬ್ಬರು.. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎನ್ನುತಾರೆ.
ಹಾಗಾದರೆ ಇದೇ ಮೊದಲ ಬಾರಿಗೆ ಈ ಒಂದು ಮಹತ್ವದ ತೀರ್ಮಾನ ಕೈಗೊಂಡವರು ಯಾರು…. ಈ ಪ್ರಶ್ನೆಗೆ ಉತ್ತರ ಮಾತ್ರ ನಿಗೂಡ.
Comments are closed.