ಕರಾವಳಿ

ಎಲ್ಲಾ ದಲಿತ ಪಂಗಡದವರೂ ಬೀಫ್ ತಿನ್ನೊಲ್ಲ.. ಆದರೆ ಇಲ್ಲಿ ರಾಜಕೀಯ ಕುತಂತ್ರದಿಂದ.. ಮೈಸೂರಿನಲ್ಲಿ ಬೀಫ್ ಫೆಸ್ಟಿವಲ್’: ನಾಲ್ವರು ಅಂದರ್

Pinterest LinkedIn Tumblr

Mysore_beef_Protest

ಮೈಸೂರು, ಆ.7: ಮೂಲಭೂತವಾದಿಗಳ ವಿರುದ್ಧ ಮೈಸೂರಿನಲ್ಲಿ ದಲಿತ ಮತ್ತು ಪ್ರಗತಿಪರ ಚಿಂತಕರು ನಡೆಸಿದ ‘ಬೀಫ್ ಫೆಸ್ಟಿವಲ್’ ವೇಳೆ ದನದ ಮಾಂಸ ತಂದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ ಘಟನೆ ಜರಗಿದೆ. ದಲಿತ ವೆಲ್ಫೇರ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಬೀಫ್ ಫೆಸ್ಟಿವಲ್ನಲ್ಲಿ ಎಸ್ಡಿಪಿಐ ಮುಖಂಡರು, ಪ್ರಗತಿಪರ ಚಿಂತಕರು ಭಾಗವಹಿಸಿದ್ದರು.

ನಗರದ ಟೌನ್ಹಾಲ್ ಮುಂಭಾಗ ಇರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತ್ತಾದರೂ, ದನದ ಮಾಂಸ ವಿತರಣೆಗೂ ಮುನ್ನವೇ ನಾಲ್ವರನ್ನು ಬಂಧಿಸಿ, ಪೊಲೀಸರು ಮಾಂಸ ಮತ್ತು ಮಾಂಸವನ್ನು ಸಾಗಿಸಲು ಬಳಸಿದ ಆಟೊ ರಿಕ್ಷಾವನ್ನು ವಶಕ್ಕೆ ಪಡೆದರು.

ದಲಿತ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಶಾಂತರಾಜು, ಪ್ರೊ. ಬಿ.ಪಿ.ಮಹೇಶ್ಚಂದ್ರ ಗುರು, ಎಸ್ಡಿಪಿಐನ ಜಿಲ್ಲಾಧ್ಯಕ್ಷ ಖಲೀಲ್, ಪುಟ್ಟನಂಜಯ್ಯ, ಟಿ.ವಿ.ಮಹೇಶ್ ಮುಂದಾಳತ್ವದಲ್ಲಿ ಉತ್ಸವ ನಡೆಯಿತು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ ಹಾಗೂ ಚಾಮರಾಜನಗರ, ಮಂಡ್ಯ ಜಿಲ್ಲೆಯ ನಾನಾ ಭಾಗದಿಂದ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಆದರೆ, ಉತ್ಸವದಲ್ಲಿ ಪಾಲ್ಗೊಂಡಿದ್ದ ಮಂದಿಗಿಂತಲೂ ಮೂರು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆಗೊಂಡಿತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಗಾಂಧಿಚೌಕದ ವರೆಗೂ ಪೊಲೀಸ್ ನಾಕಾಬಂದಿ ವಿಧಿಸಲಾಗಿತ್ತು. ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಯಿತು. ಆದರೂ, ಪೊಲೀಸರ ಕಣ್ಣು ತಪ್ಪಿಸಿ, ನಾಲ್ವರು ಯುವಕರು ಆಟೊ ರಿಕ್ಷಾದಲ್ಲಿ ದನದ ಮಾಂಸದಿಂದ ತಯಾರಿಸಿದ ಆಹಾರವನ್ನು ಹೊತ್ತು ಪುರಭವನಕ್ಕೆ ಆಗಮಿಸಿದರು.

ಇದರ ಸುಳಿವು ಅರಿತುಕೊಂಡ ಪೊಲೀಸರು, ಈ ನಾಲ್ವರು ಯುವಕರ ಸಹಿತ ಆಟೊ ರಿಕ್ಷಾ ಮತ್ತು ದನದ ಮಾಂಸದಿಂದ ತಯಾರಿಸಿದ ಆಹಾರವನ್ನು ವಶಕ್ಕೆ ಪಡೆದರು. ಇದರಿಂದ ಸಾರ್ವಜನಿಕವಾಗಿ ದನದ ಮಾಂಸ ಸೇವನೆಗೆ ನಡೆಸಿದ ಯತ್ನ ವಿಫಲಗೊಂಡಿತು.

ದಲಿತ ವಿರೋಧಿ ಬಿಜೆಪಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ಥಿತ್ವಕ್ಕೆ ಬಂದ ಎರಡೂವರೆ ವರ್ಷದಲ್ಲಿ ದೇಶದ ನಾನಾ ಮೂಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ದಲಿತ ಮತ್ತು ಅಲ್ಪಸಂಖ್ಯಾತರ ಆಶೋತ್ತರಗಳಿಗೆ ಧಕ್ಕೆ ತರಲು ಆರೆಸ್ಸೆಸ್ ತನ್ನ ಗುಪ್ತ ಕಾರ್ಯಸೂಚಿಗಳನ್ನು ಒಂದೊಂದೇ ಪ್ರಯೋಗ ಮಾಡುತ್ತಿರುವುದು ಇತ್ತೀಚಿನ ಎಲ್ಲ ಘಟನೆಗಳಿಂದ ಸಾಭೀತಾಗಿದೆ ಎಂದು ದಲಿತ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಶಾಂತರಾಜು ತಿಳಿಸಿದರು.

ಗುಜರಾತ್ನಲ್ಲಿ ಸತ್ತ ದನದ ಚರ್ಮವನ್ನು ಸುಲಿಯುತಿದ್ದ ದಲಿತ ಯುವಕರನ್ನು ಅಮಾನುಷವಾಗಿ ತಳಿಸಿ, 3 ಕಿ.ಮೀ. ವರೆಗೆ ಜೀಪಿನಲ್ಲಿ ಕಟ್ಟಿ ಎಳೆದೋಯ್ದ ಕ್ರೌರ್ಯ, ಉತ್ತರ ಪ್ರದೇಶದಲ್ಲಿ ದನದ ಮಾಂಸ ಸಾಗಿಸುತಿದ್ದಾರೆ ಎಂಬ ಕಾರಣಕ್ಕೆ ಮುಸ್ಲಿಂ ಯುವಕರ ಮೇಲೆ ನಡೆದ ಹಲ್ಲೆ ಮತ್ತು ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ದೌರ್ಜನ್ಯ ಘಟನೆಗಳು, ಬಿಜೆಪಿ ಮತ್ತು ಸಂಘಪರಿವಾರದ ದಲಿತ ಮತ್ತು ಅಲ್ಪಸಂಖ್ಯಾತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರುತಿದ್ದಂತೆಯೇ ಕೇಂದ್ರ ಸಚಿವೆ ಸುಷ್ಮಾಸ್ವರಾಜ್, ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡಬೇಕೆಂದು ಹೇಳಿಕೆ ನೀಡಿದ್ದರು. ಇದಕ್ಕೆ ದೇಶವ್ಯಾಪ್ತಿ ತೀವ್ರ ವಿರೋಧ ಎದುರಾದ ಮೇಲೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾರ್ಲಿಮೆಂಟ್ನಲ್ಲಿ ಸಂವಿಧಾನವೇ ರಾಷ್ಟ್ರೀಯ ಗ್ರಂಥ ಎಂದು ಘೋಷಿಸಿದರು. ನಂತರ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಿಸಲಾತಿಯ ಪುನರ್ ಪರಾಮರ್ಶೆಯಾಗಬೇಕು ಎಂದು ಹೇಳಿಕೆ ನೀಡಿದ್ದರು.

ಮತ್ತೆ ವಿರೋಧ ವ್ಯಕ್ತವಾಗಿ ಈ ಚರ್ಚೆಯನ್ನೂ ಕೇಂದ್ರ ಕೈಬಿಟ್ಟಿತು. ತನ್ನ ಸಂಘ ಪರಿವಾರದ ಮೂಲಕ ಬಿಜೆಪಿ ತನ್ನ ಹಿಡನ್ ಅಜೆಂಡಾಗಳನ್ನು ಪ್ರಯೋಗಿಸುವ ಸಂಚು ನಡೆಸುತ್ತಿದೆ ಎಂದು ದೂರಿದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯನ್ನು ವೇಶ್ಯಗೆ ಹೋಲಿಸಿದ ಬಿಜೆಪಿ ನಾಯಕರ ಸಂಸ್ಕೃತಿಯನ್ನು ಖಂಡಿಸಿದ ಶಾಂತರಾಜು, ಉತ್ತರ ಪ್ರದೇಶ ಮತ್ತು ಗುಜರಾಜ್ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೊಮ್ಮೆ ದಲಿತರು ಮತ್ತು ಮುಸ್ಲಿಮರನ್ನು ಓಲೈಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಈ ಬಾರಿ ಈ ವರ್ಗಗಳು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಮಧ್ಯಾಹ್ನ ಸುಮಾರು 12ರಿಂದ 1 ಗಂಟೆಗಳ ಕಾಲ ನಡೆದ ಬೀಫ್ ಫೆಸ್ಟಿವಲ್ ಪ್ರಹಸನ ದನದ ಮಾಂಸವನ್ನು ವಶಪಡಿಸಿಕೊಳ್ಳುವ ಮೂಲಕ ಅಂತ್ಯಗೊಂಡಿತು. ಡಿಸಿಪಿ ಶೇಖರ್, ಮೂವರು ಎಸಿಪಿಗಳು, 6 ಕೆಎಸ್ಸಾರ್ಪಿ ತುಕಡಿ, ಅಶ್ವರೋಹಿ ದಳದ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ವರದಿ ಕೃಪೆ ; ವಾಭಾ

Comments are closed.