ಮುಂಬೈ ಆ.05 : ಬಾಲಿವುಡ್ ನಲ್ಲಿ ಈಗ ಬಾರ್ ಬಾರ್ ದೇಖೋ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಏನೂ ಅನ್ನೋದನ್ನ ನೀವೂ ಕೇಳಬೇಡಿ. ಇದು ಬಾರ್ ಬಾರ್ ದೇಖೋ ಚಿತ್ರದ ಟ್ರೈಲರ್ ವಿಚಾರ.
ಭಾರೀ ಸದ್ದು ಮಾಡ್ತಿರೋ ಈ ಚಿತ್ರದ ಬಗ್ಗೆ ಇಲ್ಲಿವರೆಗೂ ಯಾವುದೇ ಟ್ರೈಲರ್ ಹೊರ ಬಿದ್ದಿರಲಿಲ್ಲ. ಚಿತ್ರ ತಂಡ ಅಧಿಕೃತ ಟ್ರೈಲರ್ವೊಂದನ್ನ ಈಗ ರಿಲೀಸ್ ಮಾಡಿದೆ. ಅದರಲ್ಲಿ ನಟ ಸಿದ್ಧಾರ್ಥ ಮಲ್ಹೋತ್ರಾ ಮತ್ತು ಹಾಟ್ ಕತ್ರೀನಾ ಕೈಫ್ ಹಲವು ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ಇಡೀ ಟ್ರೈಲರ್ ಚಿತ್ರದ ವಿಭಿನ್ನ ದಾಟಿಯನ್ನೇ ಪ್ರದರ್ಶಿಸುತ್ತಿದೆ. ಇದು ನಾರ್ಮಲ್ ಲವ್ ಸ್ಟೋರಿ ಅಲ್ಲ ಅನ್ನೋದು ವ್ಯ್ಕಕ್ತವಾಗುತ್ತದೆ. ವಿಭಿನ್ನ ಕಥೆಯ ಈ ಚಿತ್ರವನ್ನ ನಿತ್ಯಾ ಮೆಹರಾ ನಿರ್ದೇಶನ ಮಾಡಿದ್ದಾರೆ.

Comments are closed.