ಕರಾವಳಿ

ಉತ್ತಮ ಆರೋಗ್ಯ ಮತ್ತು ಅದೃಷ್ಟ ಬೇಕೇ…. ಇಲ್ಲಿದೇ ಸಲಹೆ

Pinterest LinkedIn Tumblr

feng_sui_tips_7

ಯಾವುದೇ ಕೆಲಸದಲ್ಲಿ ಜಯವನ್ನು ಹೊಂದಲು ಅದೃಷ್ಟ ಬೇಕು ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಅದೃಷ್ಟ ನಮ್ಮೊಂದಿಗೆ ಇರಬೇಕು. ನಾವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂಬ ಸಂದರ್ಭದಲ್ಲಿ ಅದೃಷ್ಟ ನಮ್ಮ ಬೆನ್ನ ಹಿಂದಿದೆ ಎಂದೇ ಹೇಳುತ್ತಾರೆ. ಆದರೆ ಯಾವುದೇ ಕಾರ್ಯ ನಮ್ಮಿಂದ ಆಗುತ್ತಿಲ್ಲ ಎಂದಾದಲ್ಲಿ ನಿಮ್ಮ ಅದೃಷ್ಟ ಚೆನ್ನಾಗಿಲ್ಲ. ಅದಕ್ಕಾಗಿ ನೀವು ಕೆಲವೊಂದು ಅನುಷ್ಠಾನಗಳನ್ನು ಪಾಲಿಸಬೇಕಾಗುತ್ತದೆ. ಹೋಮ ಹವನಗಳು, ಪೂಜೆ ಪುನಸ್ಕಾರಗಳನ್ನು ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ.

ಅದಕ್ಕಾಗಿ ಅದೃಷ್ಟದ ಉಂಗುರವನ್ನು ಸರ ಮೊದಲಾದವನ್ನು ತೊಡುವುದನ್ನು ಜನರು ಮಾಡುತ್ತಾರೆ. ಅಂತೂ ನಮ್ಮ ಅದೃಷ್ಟ ಚೆನ್ನಾಗಿರಬೇಕು ಎಂಬ ದೃಷ್ಟಿ ಇದರಲ್ಲಿ ಅಡಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೆ ಚೀನಾದಂತಹ ಅಭಿವೃದ್ಧಿ ಹೊಂದಿದ ದೇಶಗಳೂ ಅದೃಷ್ಟ ರೇಖೆಯನ್ನು ನಂಬುತ್ತವೆ. ಅದುವೇ ಫೆಂಗ್ ಶುಯಿ. ಚೀನಾದಲ್ಲಿ 3000 ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿದ ಪುರಾತನ ಕಲೆಯಾಗಿದೆ ಫೆಂಗ್ ಶುಯಿ. ಉತ್ತಮ ಆರೋಗ್ಯ ಮತ್ತು ಅದೃಷ್ಟಕ್ಕಾಗಿ ಫೆಂಗ್ ಶುಯಿ ಸಲಹೆಗಳನ್ನು ಅಲ್ಲಿನವರು ಆಚರಿಸಿಕೊಂಡು ಬರುತ್ತಾರೆ. ಫೆಂಗ್ ಎಂಬುದು ಗಾಳಿಯಾದರೆ ಶುಯಿ ನೀರು ಎಂದಾಗಿದೆ. ಮನೆಯ ಹಾಲ್ ಬಗ್ಗೆ ಫೆಂಗ್ ಶುಯಿ ವಾಸ್ತು ಶಾಸ್ತ್ರ

ಫೆಂಗ್ ಶುಯಿ ತಿಳಿಸುವ ಕೆಲವೊಂದು ನಿಯಮಗಳನ್ನು ನೀವು ಪಾಲಿಸಿಕೊಂಡು ಬಂದಲ್ಲಿ ಅದೃಷ್ಟ ನಮ್ಮದಾಗುತ್ತದೆ ಎಂಬ ಮಾತಿದೆ. ಫೆಂಗ್ ಶುಯಿ ಟಿಪ್ಸ್ಗಳನ್ನು ನೀವು ಪಾಲಿಸಿದಲ್ಲಿ ಅದೃಷ್ಟ ನಿಮ್ಮ ಮನೆಬಾಗಿಲು ತಟ್ಟುತ್ತದೆ ಎಂಬುದು ಅವರ ನಂಬಿಕೆಯಾಗಿದೆ. ಫೆಂಗ್ ಶುಯಿ ಸಲಹೆಗಳನ್ನು ನೀವು ಪಾಲಿಸುತ್ತೀರಿ ಎಂದಾದಲ್ಲಿ ಇದಕ್ಕೆ ಪರಿಣಿತರನ್ನು ನೀವು ಸಂಧಿಸಬೇಕಾಗುತ್ತದೆ. 2016ರಲ್ಲಿ ನಿಮ್ಮ ಅದೃಷ್ಟ ನಿಮ್ಮನ್ನು ಹಿಂಬಾಲಿಸುವಂತಾಗಲು ಫೆಂಗ್ ಶುಯಿ ಸಲಹೆಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ. ಹಾಗಿದ್ದರೆ ಆ ಸಲಹೆಗಳೇನು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ಪರಿಶೀಲಿಸಿ…

ಅದೃಷ್ಟವನ್ನು ನಾವು ಅನುಭವಿಸಬೇಕಾದರೆ ಆರೋಗ್ಯಕರವಾದ ಮನೆಯಲ್ಲೇ ನೆಡಬಹುದಾದ ಗಿಡವನ್ನು ನಿಮ್ಮ ಮನೆಯ ಎಡಭಾಗದಲ್ಲಿ ನೆಡಿ. ಪಾಟ್‌ನ ಕೆಳಭಾಗದಲ್ಲಿ ಮೂರು ಹೊಳೆಯುವ ನಾಣ್ಯಗಳನ್ನು ಇರಿಸಿ. ಪಾಟ್ ನೀಲಿ ಬಣ್ಣಕ್ಕೆ ತಿರುಗಿದರೆ, ಇದು ಅದೃಷ್ಟಕ್ಕೆ ಇನ್ನಷ್ಟು ತೂಕ ಬರುತ್ತದೆ ಎಂದು ಅರ್ಥ.

candle_perfoum

ಪ್ರೀತಿಯಲ್ಲಿ ನೀವು ತುಂಬಾ ತಡವಾಗಿ ಬಿದ್ದಿದ್ದೀರಿ ಎಂದಾದಲ್ಲಿ, ಫೆಂಗಿ ಶುಯಿ ನಿಮ್ಮ ಪ್ರೀತಿಗೆ ನೆರವು ನೀಡಲಿದೆ. ಈ ಎರಡೂ ಹೂವುಗಳು ಹೆಚ್ಚು ಶಕ್ತಿಶಾಲಿ ಎಂದೆನಿಸಿದ್ದು ಪುನಃ ನಿಮ್ಮನ್ನು ಪ್ರೀತಿಯಲ್ಲಿ ಬೀಳಿಸುವ ವಿಷಯದಲ್ಲಿ ಇದು ಹೆಚ್ಚು ಸಹಕಾರಿ. ಮನೆಯ ವಾಯವ್ಯ ಮೂಲೆಯಲ್ಲಿ ಈ ಹೂವುಗಳನ್ನು ನೀವು ಇರಿಸಬೇಕು.

feng_sui_tips_7

ಮೂರು ನಾಣ್ಯಗಳು ಫೆಂಗ್ ಶೂಯಿ ಅದೃಷ್ಟವನ್ನು ಸಂಕೇತಿಸುತ್ತವೆ. ಅದೃಷ್ಟವನ್ನು ನಿಮ್ಮ ಬದುಕಿಗೆ ನಿಮ್ಮ ಮನೆಗೆ ಬರಮಾಡಲು, ಮನೆಯ ಪ್ರವೇಶ ದ್ವಾರದಲ್ಲಿ ಸಣ್ಣ ಕಾರಂಜಿಯನ್ನು ಇರಿಸಿ. ಈ ಮೂರು ನಾಣ್ಯಗಳನ್ನು ಆ ಕಾರಂಜಿಯಲ್ಲಿ ಹಾಕಿರಿ. ಕಾರಂಜಿ ಬರಿದಾಗದಂತೆ ನೋಡಿಕೊಳ್ಳುತ್ತಿರಿ.

feng_sui_tips_2

ಚಿನ್ನದ ಮೀನಿನಿಂದ ಕೂಡ ನಿಮ್ಮ ಅದೃಷ್ಟವನ್ನು ನೀವು ಬರಮಾಡಿಕೊಳ್ಳಬಹುದು. ಪಾತ್ರೆ ಅಥವಾ ಅಕ್ವೇರಿಯಮ್ನಲ್ಲಿ 9 ಗೋಲ್ಡ್ ಫಿಶ್ 1ಬ್ಲಕ್ ಫಿಶ್ ಅನ್ನು ಇರಿಸಿ ಪ್ರವೇದ್ವಾರದ ಮುಂಭಾಗದಲ್ಲಿ ಅಕ್ವೇರಿಯಮ್ ಅನ್ನು ಇರಿಸಿ. ನಿಮ್ಮ ಮನೆಯ ಎಡಭಾಗದ ಎಡ ಮೂಲೆ ಅಥವಾ ಮನೆಯ ಎಡಬದಿಯ ಮಧ್ಯಭಾಗದಲ್ಲಿ ಇದನ್ನು ಇರಿಸಿ. ಸಂತೋಷವ, ಆರೋಗ್ಯವನ್ನು ಇದು ದಯಪಾಲಿಸುತ್ತದೆ.

ಅದೃಷ್ಟವನ್ನು ಬರಮಾಡಿಕೊಳ್ಳಲು ಮನೆಯಲ್ಲಿ ಉತ್ತಮ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಮುಂಭಾಗದಲ್ಲಿ ಉತ್ತಮ ಬೆಳಗಿನ ವ್ಯವಸ್ಥೆಯನ್ನು ಮಾಡಿ ಮತ್ತು 24/7 ಸಮಯ ಅದು ಉರಿಯುವಂತೆ ನೋಡಿಕೊಳ್ಳಿ.

ಮನೆಯನ್ನು ಸುವಾಸನೆಗೊಳಿಸಲು ಪರಿಮಳಯಕ್ತ ಮೇಣದ ಬತ್ತಿಗಳು ಸಹಕಾರಿ. ತುಳಸಿಯ ಮೇಣದ ಬತ್ತಿಗಳನ್ನು ಮನೆಯ ಪ್ರವೇಶ ದ್ವಾರದಲ್ಲಿ ಇರಸಿ. ಈ ಪರಿಮಳ ನಿಮ್ಮ ಅದೃಷ್ಟದ ಬೆನ್ನು ಹತ್ತಿ ಹೋಗಲು ನಿಮಗೆ ನೆರವನ್ನು ನೀಡಲಿದೆ.

ಅದೃಷ್ಟ ಪಟ್ಟಿಗಳು ನಿಮಗೆ ಹೆಚ್ಚು ಶಕ್ತಿಯನ್ನು ಅದೃಷ್ಟವನ್ನು ದಯಪಾಲಿಸುವಲ್ಲಿ ನೆರವನ್ನು ನೀಡಲಿದೆ. ಅದೃಷ್ಟ ನಿಮ್ಮದಾಗಬೇಕು ಎಂದಾದಲ್ಲಿ ಅದೃಷ್ಟ ಪಟ್ಟಿಗಳನ್ನು ಬಳಸಿ.

Comments are closed.