(File Photo) ಕೋತಿ ಎಂದರೆ ಸಹಜವಾಗಿ ಎಲ್ಲರಿಗೂ ಭಯ. ಅದರಲ್ಲೂ ಮಹಿಳೆಯರಂತು ಕೋತಿ ಕಂಡರೇ ಸಾಕು, ಮಾರುದ್ಧ ಓಡುತ್ತಾರೆ. ಆದ್ರೆ ಇಲ್ಲಿಯೊಂದು ಕೋತಿಯಿದೆ. ಆ ಕೋತಿ ಕಂಡರೇ ಮಹಿಳೆಯರಿಗೆ ಬಲುಪ್ರೀತಿ. ಅದು ಹೇಗೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ
ಚಿತ್ರದುರ್ಗದ ನಗರದ ಕಣಿವೇ ಮಾರಮ್ಮ ದೇವಸ್ಥಾನ ಬಳಿ ಕಳೆದ ಮೂರು ದಿನಗಳಿಂದ ಕೋತಿಯೊಂದು ದೇವಸ್ಥಾನದ ಕಾವಲು ಮಾಡುತ್ತಿದೆ. ಅಷ್ಟೆ ಅಲ್ಲದೆ ಪೋಲಿಸ್ ಠಾಣೆಗೆ ಬರುವ ಮಹಿಳೆಯರ ಮೇಲೆ ಹೋಗಿ ಕುಳಿತುಕೊಳ್ಳುತ್ತದೆ. ಅವರಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಅವರೊಂದಿಗೆ ಆತ್ಮೀಯವಾಗಿ ಇರುತ್ತದೆ. ಕೋತಿಯ ಈ ನಡೆ ಕಂಡು ಎಲ್ಲರೂ ಇದು ಎಂತಹ ಕೋತಿ ಅಂತಿದ್ದಾರೆ.
ಇನ್ನು ಈ ಕೋತಿ ರಾತ್ರಿ ವೇಳೆ ದೇವಸ್ಥಾನ ಮತ್ತು ಪೊಲೀಸ್ ಠಾಣೆಯಲ್ಲಿ ಕಾವಲುಗಾರನಂತೆ ಕಾರ್ಯ ಕೂಡ ನಿರ್ವಹಿಸುತ್ತಿದೆ.
ಒಟ್ಟಿನಲ್ಲಿ ಕೋತಿ ಚೇಷ್ಟೆಯನ್ನು ನೋಡಿದವರೇ ಹೆಚ್ಚು. ಆದರೆ ಈ ಕೋತಿ ಯಾವುದೇ ಚೇಷ್ಟೆ ಮಾಡದೇ ಎಲ್ಲರೊಂದಿಗೆ ಆತ್ಮೀಯವಾಗಿ ಇರುವುದು ನೋಡಿದ ದುರ್ಗದ ಜನರಿಗೆ ಅಚ್ಚರಿಯಾಗಿದೆ.
Comments are closed.