ಥೈಲ್ಯಾಂಡ್ : ಅಶ್ಚರ್ಯವಾದರೂ ಇದು ನಿಜ.. ಥೈಲ್ಯಾಂಡ್‌ನಲ್ಲಿ ಕಾಂಡೋಮ್ ಮ್ಯೂಸಿಯಂ ಆರಂಭವಾಗಿದೆ. ಕಾಂಡೋಮ್ ಕೂಡ ಒಂದು. ಸುರಕ್ಷಿತ ಲೈಂಗಿಕ ಕ್ರಿಯೆಗೆ ಸಹಾಯಕಾರಿಯಾಗಿರುವ ಕಾಂಡೋಮ್ ಬಗ್ಗೆ ಮಾತನಾಡದವರು ಇನ್ನು ಅದರದ್ದೇ ಮ್ಯೂಸಿಯಂ ಇದೆ ಎಂದ್ರೆ ಹೇಗೆ ಪ್ರತಿಕ್ರಿಯೆ ನೀಡಬಹುದು.
ಭಾರತದಲ್ಲಿ ಕೆಲವೊಂದು ವಿಚಾರಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಜನ ಮಾತನಾಡುವುದಿಲ್ಲ. ಲೈಂಗಿಕ ಜೀವನ ಸೇರಿದಂತೆ ಅದಕ್ಕೆ ಸಂಬಂಧಿಸಿದ ಕೆಲ ವಿಚಾರಗಳನ್ನು ಭಾರತೀಯರು ಮುಚ್ಚಿಡಲು ಪ್ರಯತ್ನಿಸ್ತಾರೆ.
ಅದೇನೇ ಇರಲಿ, ಥೈಲ್ಯಾಂಡ್ ಮಾತ್ರ ಕಾಂಡೋಮ್ ಪ್ರಚಾರವನ್ನು ವಿಭಿನ್ನವಾಗಿ ಮಾಡ್ತಾ ಇದೆ. ಥೈಲ್ಯಾಂಡ್ ನಲ್ಲಿ ಕಾಂಡೋಮ್ ಮ್ಯೂಸಿಯಂ ಓಪನ್ ಆಗಿದೆ. ಥೈಲ್ಯಾಂಡ್ ನಲ್ಲಿ ಕಾಂಡೋಮ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. ಥೈಲ್ಯಾಂಡ್ ನ ಆರೋಗ್ಯ ಸಚಿವಾಲಯ ಸುರಕ್ಷಿತ ಲೈಂಗಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾಂಡೋಮ್ ಮ್ಯೂಸಿಯಂ ತೆರೆದಿದೆ.
ಮ್ಯೂಸಿಯಂನಲ್ಲಿ ಹಲವಾರು ರೀತಿಯ ಪೋಸ್ಟರ್ ಗಳನ್ನು ನೋಡಬಹುದಾಗಿದೆ. ಅದ್ರಲ್ಲಿ Don’t be silly’, Smart girls carry condoms’ ಹೀಗೆ ಅನೇಕ ಸಂದೇಶಗಳನ್ನು ಬರೆಯಲಾಗಿದೆ. ಮ್ಯೂಸಿಯಂನಲ್ಲಿ ಬೇರೆ ಬೇರೆ ಪ್ಲೇವರ್ ನ ಹಾಗೂ ಕಂಪಿಸುವ ಕಾಂಡೋಮ್ ಗಳನ್ನು ನೋಡಬಹುದಾಗಿದೆ.

Comments are closed.