ಮೀರತ್ : ದರೋಡೆಕೋರರ ಗ್ಯಾಂಗೊಂದು ತಾಯಿ ಮಗಳನ್ನು ಬರ್ಬರವಾಗಿ ಗ್ಯಾಂಗ್ ರೇಪ್ ನಡೆಸಿದ ಕಳವಕಾರಿ ಘಟನೆ ಶುಕ್ರವಾರ ರಾತ್ರಿ ಉತ್ತರಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ.
ಮೃತಪಟ್ಟಿದ್ದ ಸಂಬಂಧಿಕರೊಬ್ಬರ13 ನೇ ದಿನದ ಕಾರ್ಯಕ್ಕಾಗಿ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದ ನಾಲ್ವರ ಕುಟುಂಬವನ್ನು ದೋಸ್ತಾಪುರ್ ಎಂಬಲ್ಲಿ ಹೆದ್ದಾರಿಯಲ್ಲಿ ಅಡ್ಡಗಟ್ಟಿದ 12ಕ್ಕೂ ಹೆಚ್ಚು ದರೋಡೆಕೋರರ ತಂಡ 35 ವರ್ಷದ ತಾಯಿ ಮತ್ತು 14 ವರ್ಷದ ಮಗಳ ಮೇಲೆ ಹೇಯ ಕೃತ್ಯ ಎಸಗಿದೆ.
ದುಷ್ಕರ್ಮಿಗಳು ಕಾರಿನ ಮೇಲೆ ರಾಡ್ ಮತ್ತು ಕಲ್ಲು ಎಸೆದಿದ್ದಾರೆ. ಈ ವೇಳೆ ಹಾನಿ ಪರಿಶೀಲಿಸಲು ಚಾಲಕ ಕೆಳಗಿಳಿದ ವೇಳೆ ದುಷ್ಕರ್ಮಿಗಳು ಬಂದು ಕುಟುಂಬವನ್ನು ಗನ್ ತೋರಿಸಿ ಹೆದರಿಸಿ ನಿರ್ಜನ ಪ್ರದೇಶದತ್ತ ಕರೆದೊಯ್ದು ಸರದಿಯಂತೆ ಇಬ್ಬರ ಮೇಲೆ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ 11 ಸಾವಿರ ಹಣ ಮತ್ತು ಚಿನ್ನಾಭರಣಗಳನ್ನು ಲೂಟಿಗೈದು ಪರಾರಿಯಾಗಿದ್ದಾರೆ.
ಘಟನೆ ಬಳಿಕ ಕುಟುಂಬ ರಾತ್ರಿಯಿಡಿ ನಿರ್ಜನ ಪ್ರದೇಶದಲ್ಲೇ ತೀವ್ರ ಭೀತಿಯಿಂದ ಕಳೆದು ಯಮಯಾತನೆ ಅನುಭವಿಸಬೇಕಾಯಿತು. ಶನಿವಾರ ಬೆಳಗ್ಗೆ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪ್ರರಕಣದ ತನಿಖೆಗಾಗಿ ಪೊಲೀಸರ 6 ತಂಡಗಳನ್ನು ರಚಿಸಲಾಗಿದ್ದು, ಓರ್ವ ರಾತ್ರಿಯ ಪಾಳಿಯ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.

Comments are closed.