ಮಂಗಳೂರು, ಜು.30: ಒಬ್ಬ ವ್ಯಕ್ತಿ ಸತ್ತ ಮೇಲೆ ಅವನ ಬಗ್ಗೆ ಅವನ ವೈರಿ ಕೂಡ ಮೃತ ವ್ಯಕ್ತಿಯ ಬಗ್ಗೆ ಅವಹೇಳನಾತ್ಮಕ ಹೇಳಿಕೆಗಳನ್ನು ನೀಡುವುದಕ್ಕೆ ಹಿಂದೇಟು ಹಾಕುತ್ತಾನೆ. ಆದರೆ ಕೆಲವು ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಮಾತ್ರ ಸಾವು ಕೂಡ ಹಾಸ್ಯಸ್ಪದವಾಗಿಯೇ ಕಾಣುತ್ತದೆ. ಇದಕ್ಕೊಂದು ಉದಾಹರಣೆ ಇಲ್ಲಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರು ಶನಿವಾರ ನಿಧನರಾಗಿದ್ದಾರೆ. ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಕೃತ ಹೇಳಿಕೆಗಳನ್ನು ಹಂಚಿಕೊಂಡಿದ್ದು ವ್ಯಾಪಕ ಆಕ್ರೋಶ ಹಾಗು ಅಸಮಾಧಾನಕ್ಕೆ ಕಾರಣವಾಗಿದೆ.
“ಜನರ ಶಾಪದಿಂದ ಹೀಗಾಗಿದೆ”., “ಕೊನೆಗೂ ಸಿದ್ದರಾಮಯ್ಯ ಪುತ್ರ ನಿಧನ” ಇತ್ಯಾದಿ ಹೇಳಿಕೆಗಳು ಹಾಗೂ ಸಂಭ್ರಮ, ಸಂತಸ ಸೂಚಿಸುವ ಇಮೇಜ್‌ಗಳನ್ನು ಹಂಚಿಕೊಂಡಿರುವ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.ಪೊಲೀಸರು ಇಂತಹ ವಿಕೃತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
ವ್ಯಕ್ತಿ ಯಾರೇ ಇರಲಿ.. ರಾಜಕೀಯ ನೇತಾರನಿರಲಿ.. ಸರಕಾರಿ ಅಧಿಕಾರಿಯೇ ಇರಲಿ.. ಅ ವ್ಯಕ್ತಿ ಉದ್ದಟತನ ತೋರಿದರೆ, ಸಮಾಜದ ವ್ಯವಸ್ಥೆಗೆ ವಿರುದ್ಧವಾಗಿ ನಡೆದರೆ.. ಅಂಥಾಹ ವ್ಯಕ್ತಿಯ ವಿರುದ್ಧ ಆತ ಜೀವಂತವಾಗಿರುವಾಗ ಹೋರಾಟ ಮಾಡಬೇಕು. ಅದು ಬಿಟ್ಟು ಒಬ್ಬ ವ್ಯಕ್ತಿ ಮರಣ ಹೊಂದಿದ ಮೇಲೆ ಆತ ಮಾಡಿರ ಬಹುದಾದ ತಪ್ಪುಗಳಿಗೆ ಅಥವಾ ಆತನ ಕೌಟುಂಬಿಕ ಹಿನ್ನೆಲೆಯಲ್ಲಿ ನಡೆದ ತಪ್ಪುಗಳ ಬಗ್ಗೆ ಅವಹೇಳನಾತ್ಮಕ ಸಂದೇಶಗಳನ್ನು ಕಳಿಸಿ ಸಂತೋಷ ಪಡುವುಡೂ ಯಾವ ನ್ಯಾಯ….





Comments are closed.