ಕರಾವಳಿ

ತಣ್ಣೀರುಬಾವಿ ಬೀಚ್ ಬಳಿ ಮೆಡಿಕಲ್ ಕಾಲೇಜು ವಿಧ್ಯಾಥಿ೯ಗಳ ಕಾರು ಅಪಘಾತ : ಓರ್ವ ಸ್ಥಳದಲ್ಲೇ ಮೃತ್ಯು

Pinterest LinkedIn Tumblr

Tanniru_Bavi_axdet_1

ಮಂಗಳೂರು : ನಗರದ ಮೆಡಿಕಲ್ ಕಾಲೇಜೂಂದರ ವಿಧ್ಯಾಥಿ೯ಗಳು ಪ್ರಯಾಣಿಸುತ್ತಿದ್ದ ಕಾರೊಂದು ಗುರುವಾರ ತಡರಾತ್ರಿ ತಣ್ಣಿರುಬಾವಿ ( ಗೆಸ್ಟ್ ಹೌಸ್ ಬಳಿ) ಸಮುದ್ರ ತೀರದ ಬಳಿ ಅಪಘಾತಕೀಡಾಗಿದ್ದು, ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ತೆಲಂಗಾಣದ ಭಾರ್ಗವ (26) ಎಂಬಾತನೇ ಮೃತಪಟ್ಟ ವಿದ್ಯಾರ್ಥಿ. ಈತನ ಜೊತೆಗಿದ್ದ ಪರಾಸ್ ಜಿ.(27) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದರೆ, ಕಾರು ಚಲಾಯಿಸುತ್ತಿದ್ದ ರಕ್ಷಿತ್ ರೆಡ್ಡಿ ಮತ್ತು ಜಿಲ್ಸ್‍ರಾಜ್ ಎಂಬವರು ಸಾಧಾರಣ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Tanniru_Bavi_axdet_2 Tanniru_Bavi_axdet_3 Tanniru_Bavi_axdet_4

ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಿನ್ನೆ ಮಧ್ಯರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತಣ್ಣಿರುಬಾವಿ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‌‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ ಎನಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಭಾರ್ಗವ್ ಎಂಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ ಭಾರ್ಗವ್ ಸೇರಿ ಐವರು ವಿದ್ಯಾರ್ಥಿಗಳು ಕಾರಿನಲ್ಲಿದ್ದರು ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ವಿದ್ಯಾರ್ಥಿಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Tanniru_Bavi_axdet_5 Tanniru_Bavi_axdet_6 Tanniru_Bavi_axdet_7 Tanniru_Bavi_axdet_8

ಒಂದು ಮೂಲಗಳ ಪ್ರಕಾರ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಅಲ್ಕೋಹಾಲ್ ಸೇವನೆ ಮಾಡಿ ತಣ್ಣೀರುಬಾವಿ ಬೀಚ್‍ಗೆ ತೆರಳುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಸುರತ್ಕಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Comments are closed.